ಮುಂಬಯಿ ದಾಳಿ ವೇಳೆ ಉಗ್ರರ ಗುಂಡಿಗೆ ಬಲಿಯಾದ ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆ ಸಾವಿಗೆ ನನ್ನ ಶಾಪವೇ ಕಾರಣ ಎಂದು ವಿವಾದಿತ ಹೇಳಿಕೆ ನೀಡಿದ್ದ ಬಿಜೆಪಿ ನಾಯಕಿ ಸಾಧ್ವಿ ಪ್ರಜ್ಞಾ ಸಿಂಗ್‌ಗೆ ಚುನಾವಣ ಆಯೋಗ ಶನಿವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ, ಮಧ್ಯಪ್ರದೇಶ ವಿತ್ತ ಸಚಿವ ತರುಣ್ ಭಾನೋಟ್ ಅವರು ಗೋರಖ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಜ್ಞಾ ವಿರುದ್ಧ ಕೇಸು ದಾಖಲಿ ಸಿದ್ದಾರೆ. ಇದೇ ವೇಳೆ, ಬಿಜೆಪಿ ವಿರುದ್ಧ ಹರಿಹಾಯ್ದಿರುವ ಮಹಾರಾಷ್ಟ್ರ ಕಾಂಗ್ರೆಸ್, “ಈಗ ಒಂದು ವೇಳೆ ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಂ ಗೋಡ್ಸೆ ಬದುಕಿದ್ದಿದ್ದರೆ, ಆತನಿಗೂ ಬಿಜೆಪಿ ಟಿಕೆಟ್ ಕೊಡು ತ್ತಿತ್ತು. ಉಗ್ರವಾದದ ಆರೋಪ ಹೊತ್ತಿರುವ ವ್ಯಕ್ತಿಗೆ ಬಿಜೆಪಿ ನಾಚಿಕೆ ಬಿಟ್ಟು ಬೆಂಬಲಿಸುತ್ತಿದೆ’ ಎಂದು ಹೇಳಿದೆ. ಪ್ರಧಾನಿ ಮೋದಿ ಸಮರ್ಥನೆ: ಮಾಲೇಗಾಂವ್ ಸ್ಫೋಟದ ಆರೋಪಿ ಪ್ರಜ್ಞಾರಿಗೆ ಟಿಕೆಟ್ ಕೊಟ್ಟಿದ್ದನ್ನು ಮೋದಿ ಸಮರ್ಥಿಸಿಕೊಂಡಿದ್ದಾರೆ. ಪ್ರಜ್ಞಾರಿಗೆ ಟಿಕೆಟ್ ನೀಡುವ ಮೂಲಕ ನಾವು ಶ್ರೀಮಂತ ಹಿಂದೂ ನಾಗರಿಕತೆಗೆ “ಭಯೋತ್ಪಾದಕರು’ ಎಂಬ ಹಣೆಪಟ್ಟಿ ಕಟ್ಟಿದವರಿಗೆ ಸರಿಯಾದ ಉತ್ತರ ಕೊಟ್ಟಿದ್ದೇವೆ. ಈ ಉತ್ತರವು ಕಾಂಗ್ರೆಸ್‌ಗೆ ಭಾರೀ ನಷ್ಟ ಉಂಟುಮಾಡು ವುದು ಖಚಿತ ಎಂದು ಮೋದಿ ಹೇಳಿದ್ದಾರೆ. ಅಲ್ಲದೆ, ರಾಹುಲ್‌ಗಾಂಧಿ, ಸೋನಿಯಾ ಗಾಂಧಿ ಅವರೂ ಜಾಮೀನಿನಲ್ಲಿದ್ದರೂ ಚುನಾವಣೆಗೆ ಸ್ಪರ್ಧಿಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸಿಧುಗೆ ಆಯೋಗದ ನೋಟಿಸ್
ಮುಸ್ಲಿಮರೆಲ್ಲರೂ ಒಟ್ಟಾಗಿ ಮತದಾನ ಮಾಡಿ, ಪ್ರಧಾನಿ ಮೋದಿಯವರನ್ನು ಸೋಲಿಸಿ ಎಂದು ಕರೆ ನೀಡಿದ್ದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರಿಗೆ ಚುನಾವಣಾ ಆಯೋಗ ಶನಿವಾರ ನೋಟಿಸ್ ಜಾರಿ ಮಾಡಿದೆ. ಮೇಲ್ನೋಟಕ್ಕೆ ಸಿಧು ನೀತಿ ಸಂಹಿತೆ ಉಲ್ಲಂ ಸಿದಂತೆ ಕಾಣುತ್ತಿದ್ದು, 24 ಗಂಟೆಗಳೊಳಗೆ ಪ್ರತಿಕ್ರಿಯೆ ನೀಡಿ ಎಂದು ಆಯೋಗವು ಸೂಚಿಸಿದೆ.
ಕೇರಳ: ಆಪ್-ಎಲ್‌ಡಿಎಫ್ ಮೈತ್ರಿ
ಕೇರಳದಲ್ಲಿ ಎಲ್‌ಡಿಎಫ್ಗೆ ಆಮ್ ಆದ್ಮಿ ಪಕ್ಷ ಭೇಷರತ್ ಬೆಂಬಲ ಘೋಷಿಸಿದೆ. ಇದಕ್ಕೆ ಪ್ರತಿಯಾಗಿ ದಿಲ್ಲಿಯ ಆಡಳಿತಾರೂಢ ಆಪ್‌ಗೆ ಎಡಪಕ್ಷವೂ ಬೆಂಬಲ ನೀಡಿದೆ. ಇದೇ ವೇಳೆ, ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯನ್ನು ಸಂಪರ್ಕಿಸದೇ, ಆಮ್ ಆದ್ಮಿ ಪಕ್ಷವು ಕೇರಳದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದೆ ಎಂದು ಘೋಷಿಸಿದ್ದ ಸಂಚಾಲಕ ನೀಲಕಂಠನ್‌ರನ್ನು ಪಕ್ಷ ಅಮಾನತು ಮಾಡಿದೆ.
ಕೇಂದ್ರದ ಮಾಜಿ ಸಚಿವ ಬಿಜೆಪಿಗೆ
ಕೇರಳ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಎಸ್. ಕೃಷ್ಣಕುಮಾರ್ ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಬಲಿಷ್ಠಗೊಳಿಸಲು ಬಯಸುತ್ತೇನೆ ಎಂದು 80 ವರ್ಷದ ಕೃಷ್ಣಕುಮಾರ್ ಹೇಳಿದ್ದಾರೆ. ಬಿಜೆಪಿ ನಾಯಕರಾದ ಅನಿಲ್ ಬಲೂನಿ ಮತ್ತು ಶಹನವಾಜ್ ಹುಸೇನ್ ಸಮ್ಮುಖದಲ್ಲಿ ಪಕ್ಷದ ದಿಲ್ಲಿಯ ಕಚೇರಿಯಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.