Advertisement

ಚಂದಾ ಕೊಚರ್‌ ವಿರುದ್ಧ ಲುಕೌಟ್‌ ನೋಟಿಸ್‌

12:30 AM Feb 23, 2019 | Team Udayavani |

ಹೊಸದಿಲ್ಲಿ: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಐಸಿಐಸಿಐ ಬ್ಯಾಂಕ್‌ ಮಾಜಿ ಸಿಇಒ ಚಂದಾ ಕೊಚ್ಚರ್‌, ಅವರ ಪತಿ ದೀಪಕ್‌ ಕೊಚ್ಚರ್‌ ಮತ್ತು ವಿಡಿಯೋಕಾನ್‌ ಗ್ರೂಪ್‌ನ ಅಧ್ಯಕ್ಷ ವೇಣುಗೋಪಾಲ್‌ ದೂತ್‌ ವಿರುದ್ಧ  ಸಿಬಿಐ ಲುಕೌಟ್‌ ನೋಟಿಸ್‌ ಜಾರಿ ಮಾಡಿದೆ. ಹೀಗಾಗಿ, ಆರೋಪಿಗಳ ವಿದೇಶ ಪ್ರಯಾಣಕ್ಕೆ ನಿರ್ಬಂಧ ಹೇರಿದಂತಾಗಿದೆ. ಇವರ ವಿರುದ್ಧ ಕೇಸು ದಾಖಲಾದ ಒಂದು ವಾರದ ಬಳಿಕ ಈ ನೋಟಿಸ್‌ ಜಾರಿ ಮಾಡಲಾಗಿದೆ. ವಿಡಿಯೋಕಾನ್‌ ಗ್ರೂಪ್‌ಗೆ 1,875 ಕೋಟಿ ರೂ. ಸಾಲ ನೀಡುವಲ್ಲಿ ಆಗಿರುವಂಥ ಭ್ರಷ್ಟಾಚಾರ ಪ್ರಕರಣದಲ್ಲಿ, ಈ ಮೂವರ ವಿರುದ್ಧ ಎಫ್ಐಆರ್‌ ದಾಖಲಾಗಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next