Advertisement

ಅರ್ಹರಿಗೆ ಮಾಸಾಶನ ಮಂಜೂರಾತಿಗೆ ಸೂಚನೆ

08:59 PM Aug 11, 2022 | Team Udayavani |

ಭಾಲ್ಕಿ: ಎಂಟು ವರ್ಷಗಳಿಂದ ಮಾಸಾಶನ ಇಲ್ಲದೇ ಅಲೆದಾಡುತ್ತಿದ್ದ ವಿಕಲಚೇತನ ಯುವಕನೊಬ್ಬನಿಗೆ ಶಾಸಕ ಈಶ್ವರ ಖಂಡ್ರೆ ಮಾಸಾಶನ ಮಂಜೂರಾತಿ ಪತ್ರ ವಿತರಿಸಿದರು.

Advertisement

ಪಟ್ಟಣದಲ್ಲಿ ಈಚೆಗೆ ತಾಲೂಕಿನ ಮೋರಂಬಿ ಗ್ರಾಮದ ವಿಕಲಚೇತನ ಯುವಕ ಸಂತೋಷ ಗುರುನಾಥ ಕೊಟರಗೆ ಎಂಬುವರಿಗೆ ಮಾಸಾಶನ ಮಂಜೂರು ಪತ್ರ ನೀಡಿದ ಅವರು, ಪೂರ್ವ ನಿಯೋಜಿತ ಕಾರ್ಯಕ್ರಮ ಹಿನ್ನೆಲೆಯಲ್ಲಿ ಈ ಹಿಂದೆ ಮೋರಂಬಿ ಗ್ರಾಮಕ್ಕೆ ಭೇಟಿ ಕೊಟ್ಟಿದ್ದೆ. ಆ ಸಂದರ್ಭದಲ್ಲಿ ಯುವಕ ವಿಕಲಚೇತನ ಸಂತೋಷ ಅವರನ್ನು ಭೇಟಿಯಾಗಿ ಸರಕಾರದ ಸೌಲಭ್ಯಗಳ ಬಗ್ಗೆ ವಿಚಾರಿಸಿದೆ. ಸಂತೋಷ ಅವರದ್ದು ಬಡ ಕುಟುಂಬವಾಗಿದ್ದು, ಸುಮಾರು ವರ್ಷಗಳಿಂದ ಮಾಸಾಶನ ಮಂಜೂರು ಆಗಿಲ್ಲ ಎನ್ನುವ ವಿಷಯ ಗಮನಕ್ಕೆ ತಂದಿದ್ದರು. ತಕ್ಷಣಕ್ಕೆ ತಹಶೀಲ್ದಾರ್‌ ಅವರನ್ನು ಕರೆಮಾಡಿ ಎರಡ್ಮೂರು ದಿನಗಳಲ್ಲಿ ವಿಕಲಚೇತನ ಸಂತೋಷ ಅವರಿಗೆ ಮಾಸಾಶನ ಮಂಜೂರು ಮಾಡುವಂತೆ ಸೂಚನೆ ನೀಡಿದ್ದೇನೆ. ಅದರಂತೆ ಮಾಸಾಶನ ಮಂಜೂರು ಆಗಿದ್ದು, ಪತ್ರವನ್ನು ಸಂತೋಷಗೆ ನೀಡಿದ್ದೇನೆ. ತಾಲೂಕಿನಲ್ಲಿ ಇನ್ನು ಹಲವರು ಮಾಸಾಶನದಿಂದ ವಂಚಿತರಾಗಿದ್ದಾರೆ. ಅರ್ಹರನ್ನು ಗುರುತಿಸಿ ಮಾಸಾಶನ ಸೇರಿ ಸರಕಾರದ ವಿವಿಧ ಸೌಲಭ್ಯಗಳನ್ನು ದೊರಕಿಸಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

ಮಾಸಾಶನ ಮಂಜೂರಾತಿ ಪತ್ರ ಸ್ವೀಕರಿಸಿದ ಸಂತೋಷ ಕೊಟರಗೆ ಪ್ರತಿಕ್ರಿಯಿಸಿ, ಸುಮಾರು ಎಂಟು ವರ್ಷಗಳಿಂಗೆ ಮಾಸಾಶನಕ್ಕಾಗಿ ಅಲೆದಾಟ ನಡೆಸಿದ್ದೆ. ಆದರೆ ಪ್ರಯೋಜನ ಆಗಿರಲಿಲ್ಲ. ನನ್ನನ್ನು ಗುರುತಿಸಿ ಮಾಸಾಶನ ಮಂಜೂರು ಮಾಡಿಸಿ ಮಂಜೂರಾತಿ ಪತ್ರ ನೀಡಿರುವ ಶಾಸಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಪ್ರಮುಖರಾದ ಶಶಿಧರ ಕೋಸಂಬೆ, ಸಂಗಮೇಶ ಹುಣಜೆ ಮದಕಟ್ಟಿ, ರವೀಂದ್ರ ಚಿಡಗುಪ್ಪೆ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next