ಬೆಳ್ತಂಗಡಿ: ತುಮಕೂರಿನಲ್ಲಿ ಅಮಾನುಷವಾಗಿ ಮೂವರನ್ನು ಕೊಲ್ಲಲ್ಪಟ್ಟ ಬೆಳ್ತಂಗಡಿ ತಾಲೂಕಿನ ನಿವಾಸಿಗಳ ಮನೆಗೆ ಸೋಮವಾರ ಸಭಾಪತಿ ಯು.ಟಿ.ಖಾದರ್ ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭ ಅವರು ಮಾತನಾಡಿ, ಅಪರಾಧಿಗಳಿಗೆ ಕಠಿನ ಶಿಕ್ಷೆ ನೀಡುವಲ್ಲಿ ಸಂಬಂಧಪಟ್ಟ ಉನ್ನತ ಪೊಲೀಸ್ ಅಧಿಕಾರಿಗಳ ಬಳಿ ಮಾತಾಡಿದ್ದೇನೆ, ಮೃತ ಶರೀರಗಳ ಡಿಎನ್‌ಎ ಪರೀಕ್ಷೆ ಮಾಡಿಸಿ ತ್ವರಿತವಾಗಿ ಕುಟುಂಬಕ್ಕೆ ಒಪ್ಪಿಸಲು ತುಮಕೂರು ಎಸ್ಪಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ನೊಂದ ಕುಟುಂಬಗಳಿಗೆ ಸರಕಾರದ ವತಿಯಿಂದ ನ್ಯಾಯ ಸಿಗುವಂತೆ ಎಲ್ಲ ಪ್ರಯತ್ನಗಳು ಮಾಡಲಾಗುವುದು ಮತ್ತು ಯುವಕರು ಇಂತಹ ಮೋಸಕ್ಕೆ ಬಲಿಬೀಳಬಾರದು ಎಂದು ಅವರು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತುಮಕೂರಿಗೆ ಹೋಗಿ ಅಲ್ಲಿಯ ಎಸ್ಪಿಯನ್ನು ಮಾತನಾಡಿಸಿ, ಅನಂತರ ಗೃಹ ಮಂತ್ರಿಯನ್ನು ಭೇಟಿ ಮಾಡಿ ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನು ಬಂಧಿಸಬೇಕೆಂದು ಮನವಿ ಮಾಡಿದ್ದಾರೆ ಎಂದು ಖಾದರ್ ತಿಳಿಸಿದರು.
ಈ ಸಂದರ್ಭ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಸಾಹುಲ್ ಹಮೀದ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಜಿ.ಪಂ. ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ಪ್ರಮುಖರಾದ ಹಕೀಮ್ ಕೊಕ್ಕಡ, ಜೈಸನ್ ಪಟ್ಟೇರಿಲ್, ಪ್ರವೀಣ್ ಫೆರ್ನಾಂಡಿಸ್, ಇಸ್ಮಾಯಿಲ್ ಕೆ. ಪೆರಿಂಜೆ, ಕರೀಂ ಗೇರುಕಟ್ಟೆ, ಹನೀಫ್ ಉಜಿರೆ, ಅಯೂಬ್ ಕಾಣಿಯೂರು, ರಾಜಶೇಖರ್ ಶೆಟ್ಟಿ ಮಡಂತ್ಯಾರು, ಅಶ್ರಫ್ ನೆರಿಯ, ಅಬ್ಬೊನು ಮದ್ದಡ್ಕ, ಸೇಕುಞ ಬೆಳ್ತಂಗಡಿ, ಬಿ.ಎಂ.ಹಮೀದ್ ಉಜಿರೆ, ಯು.ಹಮೀದ್ ಉಜಿರೆ, ಸುನಿಲ್ ಜೈನ್, ಸಂದೀಪ್ ನೀರಲ್ಕೆ ಮತ್ತು ಗಣ್ಯರು ಉಪಸ್ಥಿತರಿದ್ದರು.