Advertisement

ಐಟಿ, ಪ್ಯಾನ್‌ಗೆ ಆಧಾರ್‌ ಕಡ್ಡಾಯದಲ್ಲಿ ತಪ್ಪೇನೂ ಇಲ್ಲ: ನಿಲೇಕಣಿ

07:28 PM Mar 23, 2017 | |

ಹೊಸದಿಲ್ಲಿ : ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದಕ್ಕೆ ಮತ್ತು ಪ್ಯಾನ್‌ ಕಾರ್ಡ್‌ ಪಡೆಯುವುದಕ್ಕೆ ಆಧಾರ್‌ ಕಾರ್ಡನ್ನು ಕಡ್ಡಾಯಗೊಳಿಸಿರುವ ಸರಕಾರದ ಪ್ರಸ್ತಾವವನ್ನು ಸ್ವಾಗತಿಸಿರುವ ಯೂನಿಕ್‌ ಐಡೆಂಟಿಫಿಕೇಶನ್‌ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಇದರ ಪ್ರಥಮ ಅಧ್ಯಕ್ಷ ನಂದನ್‌ ನಿಲೇಕಣಿ ಅವರು “ಸರಕಾರದ ಕ್ರಮ ಅತ್ಯಂತ ಸಮರ್ಪಕವಾಗಿದೆ; ಐಟಿ ರಿಟರ್ನ್ ಮತ್ತು ಪ್ಯಾನ್‌ಗೆ ಆಧಾರ್‌ ಕಡ್ಡಾಯ ಮಾಡುವುದರಲ್ಲಿ ತಪ್ಪೇನೂ ಇಲ್ಲ’ ಎಂದು ಹೇಳಿದ್ದಾರೆ. 

Advertisement

“ಒಬ್ಬನೇ ವ್ಯಕ್ತಿ ಹಲವು ಪ್ಯಾನ್‌ ಕಾರ್ಡ್‌ ಹೊಂದಿರುವುದನ್ನು ಸುಲಭದಲ್ಲಿ ಪತ್ತೆ ಹಚ್ಚಿ ಅಂತಹ ಪ್ಯಾನ್‌ ಕಾರ್ಡ್‌ಗಳನ್ನು ರದ್ದು ಪಡಿಸಲು ಸರಕಾರದ ಈ ಕ್ರಮದ ಮೂಲಕ ಸಾಧ್ಯವಾಗುತ್ತದೆ; ಅಲ್ಲದೆ ಆಧಾರ್‌ ಜೋಡಿಸಲ್ಪಟ್ಟ ಪ್ಯಾನ್‌ ಕಾರ್ಡ್‌ ನಂಬರ್‌ ಅನನ್ಯವಾಗಿರಲು ಸಾಧ್ಯವಾಗುತ್ತದೆ’ ಎಂದು 61ರ ಹರೆಯದ ನಿಲೇಕಣಿ ಹೇಳಿದ್ದಾರೆ. 

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದಕ್ಕೆ ಮತ್ತು ಪ್ಯಾನ್‌ ಕಾರ್ಡ್‌ ಪಡೆಯುವುದಕ್ಕೆ ಆಧಾರ್‌ ಕಾರ್ಡನ್ನು ಕಡ್ಡಾಯಗೊಳಿಸುವ ವಿವಾದಾತ್ಮಕ ಮಸೂದೆಯನ್ನು ಸರಕಾರ ಸಂಸತ್ತಿನಲ್ಲಿ ಮಂಡಿಸಿರುವ ಹಿನ್ನೆಲೆಯಲ್ಲಿ ನಿಲೇಕಣಿ ಅವರು ಈ ಹೇಳಿಕೆ ನೀಡಿದ್ದಾರೆ. 

ಲೋಕಸಭೆಯಲ್ಲಿ ಮಾತನಾಡುತ್ತಾ ವಿತ್ತ ಸಚಿವ ಅರುಣ್‌ ಜೇತ್ಲಿ ಅವರು “ಸದ್ಯೋಭವಿಷ್ಯದಲ್ಲಿ ಆಧಾರ್‌ ಕಾರ್ಡ್‌ ಮಾತ್ರವೇ ಎಲ್ಲ ಜನರ ವಿಶಿಷ್ಟ ಗುರುತಿನ ಕಾರ್ಡ್‌ ಆಗಲಿದೆ’ ಎಂದು ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next