Advertisement
ನನಗೆ ಈ ತೀರ್ಪು ಕೇಳಿ ಅಪಾರ ಖುಷಿ ಆಗ್ತಿದೆ. ಆಡ್ವಾಣಿಜೀ, ಮುರಳೀ ಜೀ ಅವರ ಹೋರಾಟಕ್ಕೆ ಗೆಲುವು ಸಿಕ್ಕಂತಾಗಿದೆ. ನಮಗಿಂತ ಹಿರಿಯ ಪೀಳಿಗೆ ಕೂಡ ಮಹತ್ವದ ಹೋರಾಟ ನಡೆಸಿತ್ತು. ಅವರ ಕಾಲದಲ್ಲಿ ಕೈಗೂಡದ ಕನಸು, ನಮ್ಮ ಮುಂದೆ ಈಗ ನನಸಾಗಿ ನಿಂತಿದೆ. ನಾವು ಅಂದು ಮಾಡಿದ ತ್ಯಾಗವನ್ನು ಫಲ ರೂಪದಲ್ಲಿ ಇಂದು ನೋಡುವುದಕ್ಕೆ ಸಿಕ್ಕಿದೆ. ಇಂದು ಹೋರಾಟಗಾರರ ಪರವಾಗಿ ತೀರ್ಪು ಬಂದಿದೆ. ಪ್ರಧಾನಿ ಮೋದಿ ಅವರ ಕಾಲದಲ್ಲಿಯೇ ಇವೆಲ್ಲವೂ ಕೈಗೂಡುತ್ತಿರುವುದು ನಮ್ಮೆಲ್ಲರ ಸಂತೋಷವನ್ನು ಇಮ್ಮಡಿಗೊಳಿಸಿದೆ.
Related Articles
Advertisement
ಪ್ರತ್ಯಕ್ಷದರ್ಶಿಯೊಬ್ಬರ ನೆನಪಿನಾಳದಿಂದ…1992ರ ಡಿಸೆಂಬರ್ 6. ದೇಶದ ಇತಿಹಾಸದಲ್ಲಿ ಪ್ರಮುಖ ಘಟನೆ. ಅಯೋಧ್ಯೆ ಯಲ್ಲಿರುವ ವಿವಾದಿತ ಕಟ್ಟಡ ಧ್ವಂಸವಾಗುವ ಹಿಂದಿನ ದಿನ ಅಂದರೆ, 1992ರ ಡಿ.5ರಂದು ನಾನು ಅಯೋಧ್ಯೆ ತಲುಪಿದೆ. ದೇಶದ ಎಲ್ಲೆಡೆಯಿಂದ ಅಯೋಧ್ಯೆಗೆ ಆಗಮಿಸುತ್ತಿದ್ದರು. ವಿವಾದಿತ ಕಟ್ಟಡದ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಪೊಲೀಸರು ಭದ್ರತೆಗಾಗಿ ನಿಯೋಜನೆಗೊಂಡಿದ್ದರು. ಅಲ್ಲಿನ ಭದ್ರತೆಯನ್ನು ಮೀರಿ ಒಳ ಪ್ರವೇಶಿಸಲು ಅವಕಾಶ ಕೊಡಬೇಕು ಎಂದು ಅಲ್ಲಿಗೆ ಬಂದಿದ್ದವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಅಯೋಧ್ಯೆಯ ಹನುಮಾನ್ ಗಡಿ ದೇಗುಲದ ಮುಖ್ಯ ಅರ್ಚಕ ಜ್ಞಾನ ದಾಸ್ ಕರಸೇವಕರತ್ತ ಧಾವಿಸಿ ಅವರನ್ನು ಸಮಾಧಾನ ಪಡಿಸಲು ಪ್ರಯತ್ನ ಮಾಡಿದರು. ಇದೇ ಸಂದರ್ಭದಲ್ಲಿ ನೂಕು ನುಗ್ಗಲು ಹೆಚ್ಚಾಯಿತು. ಧ್ವನಿವರ್ಧಕದಲ್ಲಿ ಕರಸೇವಕರಿಗೆ ಹೊಡೆಯಬೇಡಿ ಎಂದು ಮನವಿ ಮಾಡಿದ್ದು ಮತ್ತಷ್ಟು ಗೊಂದಲಕ್ಕೆ ಕಾರಣವಾಯಿತು. ಹಠಾತ್ತನೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದವರು ಬಾಬರಿ ಮಸೀದಿ ಕಟ್ಟಡದತ್ತ ನುಗ್ಗಲಾರಂಭಿಸಿದರು. ಘಟನೆಯ ಬಗ್ಗೆ ವರದಿ ಮಾಡುವ ನಿಟ್ಟಿನಲ್ಲಿ ಆಗಮಿಸಿದ್ದ ಮಾಧ್ಯಮ ಪ್ರತಿನಿಧಿಗಳೂ, ಛಾಯಾಗ್ರಾಹಕರೂ ಅಚ್ಚರಿಯಿಂದಲೇ ನೋಡುವಂತಾಯಿತು. ನೂರಾರು ಮಂದಿ ವಿವಾದಿತ ಕಟ್ಟಡದ 3 ಡೂಮ್‌ಗಳನ್ನು ಏರಿಬಿಟ್ಟಿದ್ದರು. ಆಗ ಧ್ವನಿವರ್ಧಕದ ಮೂಲಕ ಎಚ್ಚರಿಕೆಯ ಸೂಚನೆ ಬಂತು. “ಕಟ್ಟಡದ ಮೇಲೆ ಏರಿದವರೆಲ್ಲ ಕೆಳಗೆ ಇಳಿಯಲೇಬೇಕು. ಏಕೆಂದರೆ ಅದು ಕೂಡಲೇ ಕುಸಿಯಲಿದೆ’ ಎಂದು ಸೂಚಿಸಲಾಗಿತ್ತು. ಅದನ್ನೇ ಪ್ರಾಂತೀಯ ಭಾಷೆಗಳಲ್ಲಿ ವಿವರಿಸಲಾಯಿತಾದರೂ ಫಲ ನೀಡಲಿಲ್ಲ. ರಾಜಕೀಯ ನಾಯಕರೂ ಉದ್ರಿಕ್ತರ ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಪ್ರಕಾಶ್ ಗುಪ್ತಾ