Advertisement

ದೇವೇಗೌಡರಿಗೆ ನೋವಾಗಿದ್ದರೆ ಏನೂ ಮಾಡಲಾಗದು: ಚೆಲುವರಾಯಸ್ವಾಮಿ

11:44 PM May 05, 2024 | Shreeram Nayak |

ಶಿವಮೊಗ್ಗ: ದೇವೇಗೌಡರು ಸುದೀರ್ಘ‌ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಪೆನ್‌ಡ್ರೈವ್‌ ಪ್ರಕರಣದಿಂದ ಅವರಿಗೆ ನೋವು, ಆತಂಕವಾಗಿದ್ದರೆ ಏನೂ ಮಾಡಲು ಆಗದು ಎಂದು ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.

Advertisement

ಇದು ಯಾರೂ ಖುಷಿಪಡುವ ವಿಚಾರವಲ್ಲ. ದೇವೇಗೌಡರು ನಮಗೂ ನಾಯಕರು. ಆತಂಕ ಸಹಜ. ಪೆನ್‌ಡ್ರೈವ್‌ ತನಿಖೆ ವಿಚಾರದಲ್ಲಿ ಸರಕಾರ ಜವಾಬ್ದಾರಿಯಿಂದ ನಡೆದುಕೊಂಡಿದೆ. ಇದರಲ್ಲಿ ರಾಜಕೀಯ ಪ್ರಶ್ನೆಯೇ ಇಲ್ಲ. ಸಂತ್ರಸ್ತೆಗೆ ನ್ಯಾಯ ಒದಗಿಸಬೇಕು.

ಡಿ.ಕೆ.ಶಿವಕುಮಾರ್‌ ಕೂಡ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕೃತವಾಗಿದೆ. ಹಾಗಾಗಿ ಮಾಜಿ ಸಚಿವ ರೇವಣ್ಣ ಬಂಧನವಾಗಿದೆ. ಇಂಥ ಘಟನೆ ಬೇರೆ ಪಕ್ಷದಲ್ಲಿ ನಡೆದಿದ್ದರೆ ಅಮಿತ್‌ ಶಾ ಎಷ್ಟು ಮಾತನಾಡುತ್ತಿದ್ದರು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next