Advertisement
ಮೊದಲು ಮಾತು ಶುರುಮಾಡಿದ್ದು ನಿರ್ದೇಶಕ ರೋಹಿತ್ ಪದಕಿ. “ನಿರೀಕ್ಷೆಯಂತೆ ಚಿತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆ. ಈ ಯಶಸ್ಸು ಮತ್ತು ಇಡೀ ಸಿನಿಮಾವನ್ನು ನನ್ನ ಕಲಾವಿದರು, ತಂತ್ರಜ್ಞರಿಗೆ ಅರ್ಪಿಸುತ್ತೇನೆ. ಇಲ್ಲಿ ಪ್ರತಿಯೊಬ್ಬರೂ ನನ್ನದು ಅಂತಾನೇ ಹಗಲಿರುಳು ದುಡಿದಿದ್ದಾರೆ. ಸಿನಿಮಾ ನೋಡಿದವರು ಚರ್ಚೆ ಮಾಡುತ್ತಿದ್ದಾರೆ. ಬಟ್ಟೆಯಿಂದ ಹಿಡಿದು ಭಾಷೆವರೆಗೂ ಮಾತಾಡುತ್ತಿದ್ದಾರೆ. ಒಂದೊಳ್ಳೆಯ ಸಿನಿಮಾ ಮಾಡಿದ ತೃಪ್ತಿ ನನಗಿದೆ. ಜನರು ನಮ್ಮ ಪ್ರಯತ್ನ ಒಪ್ಪಿಕೊಂಡ ಖುಷಿಯೂ ಇದೆ’ ಎಂದರು ಪದಕಿ. ರಾಜೇಶ್ ನಟರಂಗ ಅವರಿಗೆ ಇದೊಂದು ಒಳ್ಳೆಯ ಬದಲಾವಣೆಯಂತೆ. “ಈ ರೀತಿಯ ಪ್ರಯತ್ನವನ್ನು ಮೆಚ್ಚಿಕೊಂಡ ಪ್ರೇಕ್ಷಕ ವರ್ಗಕ್ಕೆ ಚಿತ್ರತಂಡದಿಂದ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಮೊದಲು ಚಿತ್ರ ನೋಡಿದಾಗ, ಇದು ಯಾವ ಜಾನರ್ ಸಿನಿಮಾ, ಜನ ಸ್ವೀಕರಿಸುತ್ತಾರಾ ಎಂಬ ಗೊಂದಲವಿತ್ತು. ಆದರೆ, ಈಗ ಸಿಗುತ್ತಿರುವ ಪ್ರ ತಿಕ್ರಿಯೆ ನೋಡಿದರೆ ಖುಷಿಯಾಗುತ್ತಿದೆ. ಬರೀ ಇನ್ಸ್‌ಪೆಕ್ಟರ್ ಪಾತ್ರ ಮಾಡಿ ಬೇಜಾರಾಗಿತ್ತು. ಇಲ್ಲೊಂದಷ್ಟು ಬದಲಾವಣೆಯ ಪಾತ್ರ ಸಿಕ್ಕಿದೆ. ಬದಲಾವಣೆ ಬಯಸುವ ಜನರಿಗೆ ಈ ಚಿತ್ರ ಖುಷಿ ಕೊಡುತ್ತೆ ಎಂಬುದು ರಾಜೇಶ್ ನಟರಂಗ ಮಾತು.
ನಂಬಿಕೆ ಮೊದಲೇ ಇತ್ತಂತೆ. ಅದು ಈಗ ನಿಜವಾಗಿದೆ ಅಂದರು ಅವರು. ಚಿತ್ರ ಕುರಿತು ಸಂಯುಕ್ತಾ ಹೊರನಾಡು, ಅವಿನಾಶ್ ಶತಮರ್ಷನ್ ಮಾತಾಡಿದರು.