Advertisement

ನೋಟ್‌ ಬ್ಯಾನ್‌ನಿಂದ ಜನ ಕಂಗಾಲು

01:11 PM Feb 27, 2017 | Team Udayavani |

ಹೊನ್ನಾಳಿ: ಕೇಂದ್ರ ಸರ್ಕಾರ 500 ಮತ್ತು ಸಾವಿರ ಮುಖಬೆಲೆಯ ನೋಟಗಳನ್ನು ಬ್ಯಾನ್‌ ಮಾಡಿದ ಪರಿಣಾಮ ದೇಶದ ಸಾಮಾನ್ಯ ಜನತೆ ಕಂಗಾಲಾಗಿದ್ದಾರೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು. ತಾಲೂಕಿನ ಕುಂದೂರು ಗ್ರಾಮದಲ್ಲಿ ಭಾನುವಾರ ತಾಲೂಕು ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ಜನ ವೇದನ ಸಮಾವೇಶ ಉದ್ಘಾಟಿಸಿ ಮಾತನಾಡಿದರು. 

Advertisement

ನೋಟ್‌ ಬ್ಯಾನ್‌ನಿಂದ ಹಣವಂತರಿಗೆ ಯಾವುದೇ ತೊಂದರೆಯಾಗಲಿಲ್ಲ. ಕೂಲಿ ಕಾರ್ಮಿಕರಿಗೆ ಮಧ್ಯಮ ವರ್ಗದವರಿಗೆ ಮಾತ್ರ ಇನ್ನಿಲ್ಲದ ತೊಂದರೆ ಅನುಭವಿಸಿ ಅಂದೇ ದುಡಿದು ಅಂದೇ ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳುವವರಿಗೆ ಕೂಲಿ ಇಲ್ಲದಂತಾಗಿ ಉಪವಾಸ ಬೀಳುವಂತಾಯಿತು ಎಂದು ಆರೋಪಿಸಿದರು.  

ಹೊಸ ಒಂದು ಸಾವಿರ ನೋಟನ್ನು ತಕ್ಷಣ ಕೇಂದ್ರ ಸರ್ಕಾರ ಹೊರ ತರಬೇಕು. ಈಗಿರುವ 2ಸಾವಿರ ಇಟ್ಟುಕೊಂಡು ಬೇರೆ ಊರಿಗೆ ಹೋದರೆ ಚಿಲ್ಲರೆ ಸಮಸ್ಯೆಯಾಗಿ ಸ್ವಂತ ಊರಿಗೆ ತಲುಪುವುದು ದೊಡ್ಡ ಸಮಸ್ಯೆ ಆಗಿದೆ ಎಂದು ದೂರಿದರು. ಡೈರಿ ವಿಷಯವನ್ನು ತೆಗೆದುಕೊಂಡು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನಾಟಕವಾಡುತ್ತಿದ್ದಾರೆ. 

ಅನಾವಶ್ಯಕವಾಗಿ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಐಟಿ ದಾಳಿ ಕೇವಲ ಕಾಂಗ್ರೆಸ್‌ ನಾಯಕರ ಮನೆಗಳ ಮೇಲೆ ಮಾತ್ರ ಸೀಮಿತವಾಗಿದೆ. ಬಿಜೆಪಿಯವರಲ್ಲಿ ಯಾರೂ ಹಣವಂತರಿಲ್ಲವೇ ಎಂದು ಪ್ರಶ್ನಿಸಿದ ಅವರು, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್‌ನವರು ಹುಚ್ಚರು ಎಂದು ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ.

ಸೋತು ಕೆಲಸವಿಲ್ಲದೇ ಇಲ್ಲ ಸಲ್ಲದ ಹೇಳಿಕೆಗಳನ್ನು ಮಾಧ್ಯಮದವರ ಮುಂದೆ ಬಡಬಡಿಸುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ರಾಜ್ಯಕ್ಕೆ ಕೇಂದ್ರ ಸರ್ಕಾರ ಬರ ಪರಿಹಾರ ಮಂಜೂರು ಮಾಡುಲು ಸತಾಯಿಸುತ್ತಿದೆ. ರಾಜ್ಯದಿಂದ ಲೋಕಸಭೆಗೆ ಆರಿಸಿ ಹೋಗಿರುವ 17ಜನ ಬಿಜೆಪಿ ಸಂಸದರು ಈ ಬಗ್ಗೆ ಕೇಂದ್ರಕ್ಕೆ ಒತ್ತಾಯ ತರಬೇಕು.

Advertisement

ರಾಜ್ಯದಲ್ಲಿ ಬಿಜೆಪಿ ಅಧಿಧಿಕಾರ ಬಂದು ಮುಖ್ಯಮಂತ್ರಿಯಾದರೆ 24ಗಂಟೆಯೊಳಗೆ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳಿಸುತ್ತೇನೆ, ರೈತರ ಸಾಲಮನ್ನಾ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಬಾಲಿಶಾ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು. 

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಮಾತನಾಡಿ, ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್‌ ಗಾಂಧಿಧಿಯವರ ಆದೇಶದ ಮೇರೆಗೆ ಜನ ವೇದನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಜನ ವೇದನ ಸಮಾವೇಶಗಳನ್ನು ಬ್ಲಾಕ್‌ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು. 

ಸಾಸ್ವೆಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎ.ಗದ್ದಿಗೇಶ್‌ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಡಿ.ಜಿ.ವಿಶ್ವನಾಥ್‌, ಹೊನ್ನಾಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಮುಖಂಡರಾದ ಬಿ.ಸಿದ್ದಪ್ಪ, ಕೆ.ವಿ.ಚನ್ನಪ್ಪ, ಗುರುಮೂರ್ತಿ, ಷಣ್ಮುಖಪ್ಪ, ಆರ್‌.ನಾಗಪ್ಪ, ಮರಳುಸಿದ್ದಪ್ಪ, ಜಿ.ಹನುಮಂತಪ್ಪ, ಶಂಭಣ್ಣ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಎಸ್‌.ಎಸ್‌. ಬೀರಪ್ಪ, ನಿರ್ದೇಶಕ ಎ.ಜಿ. ಪ್ರಕಾಶ್‌, ಪಿ.ಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಮಂಜುನಾಥ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next