Advertisement

“ನೋಟು ರದ್ದತಿಯಿಂದ ತಾತ್ಕಾಲಿಕ ಆರ್ಥಿಕ ಕುಸಿತ’

03:50 AM Jan 06, 2017 | Team Udayavani |

ನವದೆಹಲಿ: ಕಪ್ಪುಹಣ ಮತ್ತು ಭ್ರಷ್ಟಾಚಾರ ನಿರ್ಮೂಲನೆಯ ನಿಟ್ಟಿನಿಂದ ಜಾರಿಮಾಡಿದ ಅಪನಗದೀಕರಣ ಕ್ರಮ ತಾತ್ಕಾಲಿಕ
ವಾಗಿ ಆರ್ಥಿಕ ಕುಸಿತಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಈ ಕ್ರಮದಿಂದ ಬಡವರು ತೊಂದರೆ ಅನುಭವಿಸುವುದನ್ನು ಕಡಿಮೆ ಮಾಡಲು ಸರ್ಕಾರ ಹೆಚ್ಚಿನ ಮುತುವರ್ಜಿ ತೋರಬೇಕು ಎಂದು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಗುರುವಾರ ಹೇಳಿದ್ದಾರೆ.

Advertisement

ವಿಡಿಯೋ ಕಾನೆ#ರೆನ್ಸ್‌ ಮೂಲಕ ರಾಜ್ಯಪಾಲರು ಮತ್ತು ಉಪರಾಜ್ಯಪಾಲ ರನ್ನು ಉದ್ದೇಶಿಸಿ ಮಾತನಾಡಿದ ಪ್ರಣಬ್‌ ಮುಖರ್ಜಿ, ಅಪನಗದೀಕರಣ ತಾತ್ಕಾ ಲಿಕ ಆರ್ಥಿಕ ಕುಸಿತಕ್ಕೆ ಕಾರಣವಾಗ ಬಹುದು. ಆದರೆ, ಜನರು ತುಂಬಾ ದಿನಗಳ ಕಾಲ ತೊಂದರೆ ಅನುಭವಿಸುತ್ತಾರೆ ಎಂದು ಅನಿಸುವು ದಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಹೊಸ ವರ್ಷದ ಮುನ್ನಾ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಬಡವರ, ಜನಸಾಮಾನ್ಯರ ಪರವಾದ ಹಲ ಕ್ರಮಗ ಳನ್ನು ಪ್ರಕಟಿಸಿದ್ದಾರೆ. ಇವು ಜನತೆಗೆ ಕೊಂಚ ನಿರಾಳತೆ ಒದಗಿಸಬ ಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಸ್ವಾಗತ: ಪ್ರಣಬ್‌ ಮುಖರ್ಜಿ ಅವರ ಹೇಳಿಕೆ ಮೋದಿ ಅವರಿಗೆ ಸತ್ಯ ದರ್ಶನ ಮಾಡಿಸಿದೆ. ಮನೆಯ  ಹಿರಿಯ ಮಗುವಿಗೆ ಪಾಠ ಕಲಿಸಿದಂತೆ ಪ್ರಣಬ್‌ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುಜೇìವಾಲಾ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next