Advertisement

ನೋಟು ಅಮಾನ್ಯ ಅಭಿವೃದ್ಧಿಗೆ ಪೂರಕ

02:17 PM Nov 09, 2017 | |

ಕಲಬುರಗಿ: ಕಾಳ ನಿಗ್ರಹ ದಿನದ ಅಂಗವಾಗಿ ಬಿಜೆಪಿ ಬುಧವಾರ ಸಂಜೆ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಕಪ್ಪು ಹಣದ ಭೂತ ದಹನ ನಡೆಸಿತು.

Advertisement

ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ನೇತೃತ್ವದಲ್ಲಿ ಭೂತ ದಹನ ನಡೆಸಲಾಗಿ ನೋಟು ಅಪದೀಕರಣ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ನರಿಬೋಳ, ನೋಟು ಅಪದೀಕರಣ ನಂತರ ಕಾಶ್ಮೀರದಲ್ಲಿ ಕಲ್ಲು ಹೊಡೆಯುವುದು ಶೇ. 75ರಷ್ಟು ನಿಂತು ಹೋಗಿದೆ. ನಕ್ಸಲೀಯ ಚಟುವಟಿಕೆಯಲ್ಲಿ ಶೇ. 20ರಷ್ಟು ಕಡಿಮೆಯಾಗಿದೆ. ಪ್ರಮುಖವಾಗಿ 7.62 ಲಕ್ಷ ನಕಲಿ ನೋಟುಗಳು ಪತ್ತೆಯಾಗಿವೆ. ಪ್ರಥಮ ಬಾರಿಗೆ ಜರ್ಮನ್‌ ತ್ರಾಂತಿಕತೆಯ ಮೂಲಕ 26 ವೈಶಿಷ್ಠತೆಗಳನ್ನು ಹೊಂದಿರುವ ನವೀನ ನೋಟುಗಳನ್ನು ನಕಲುಗೊಳಿಸುವುದು ಕಷ್ಟಸಾಧ್ಯವಾಗಿದೆ. ಉಗ್ರವಾದಕ್ಕೆ ಪಾಕಿಸ್ತಾನದಿಂದ ಹಣದ ಪೂರೈಕೆ ದುರ್ಲಭವಾಗಿದೆ ಎಂದು ಹೇಳಿದರು.

23.22 ಲಕ್ಷ ಬ್ಯಾಂಕ್‌ ಖಾತೆಗಳಲ್ಲಿ ಠೇವಣಿಯಾಗಿರುವ 3.68 ಲಕ್ಷ ಕೋಟಿ ರೂ. ಕಪ್ಪು ಹಣದ ಭಾಗ ಎಂದು ಗುರುತಿಸಲಾಗಿದ್ದು, ತನಿಖೆ ನಡೆಯುತ್ತಿದೆ. 29,213 ಕೋಟಿ ರೂ. ಮುಚ್ಚಿಟ್ಟಿದ್ದ ಹಣ ಪತ್ತೆಯಾಗಿದೆ. ಸುಮಾರು 1.4 ಲಕ್ಷ ಬ್ಯಾಂಕ್‌ ಖಾತೆಗಳಲ್ಲಿ ದೇಶದ ಶೇ. 33 ಭಾಗ ನಗದನ್ನು ಬ್ಯಾಂಕಿನಲ್ಲಿ ಅಪನಗದೀಕರಣದ ನಂತರ ಜಮೆ ಮಾಡಲಾಗಿದ್ದರಿಂದ ಕಪ್ಪು ಹಣದ ಅಸ್ತಿತ್ವವನ್ನು ಮತ್ತು ಅದನ್ನು ಪತ್ತೆ ಹಚ್ಚುವ ಪ್ರಯತ್ನಕ್ಕೆ ಯಶಸ್ಸನ್ನು ತೋರಿಸುತ್ತದೆ ಎಂದು ಹೇಳಿದರು. 

ಪ್ರಮುಖವಾಗಿ ಸಾಲದ ಮೇಲಿನ ಬಡ್ಡಿಯ ದರದಲ್ಲಿ ಶೇ. 1.5ರಷ್ಟು ಇಳಿಕೆಯಾಗಿದೆ. ಅಲ್ಲದೇ ರಿಯಲ್‌ ಎಸ್ಟೇಟ್‌ಗಳ ಬೆಲೆಯಲ್ಲಿ ಬಾರಿ ಕುಸಿತ ಕಂಡು ಜನ ಸಾಮಾನ್ಯರಿಗೆ ಮನೆ ಕಟುವ ಹೆಚ್ಚಿನ ಅವಕಾಶ ಸಿಗುವಂತಾಗಿದೆ ಎಂದರು. ಪ್ರಮುಖರಾದ ಸಾಯಬಣ್ಣ ದೊಡ್ಡಮನಿ, ರೇವಣಸಿದ್ದ ಸಂಕಾಲಿ, ಸಂಗನಗೌಡ ರದ್ದೇವಾಡಗಿ, ಬಸವರಾಜ ಪಾಟೀಲ ನರಿಬೋಳ, ನಾರಾಯಣ ಗುತ್ತೇದಾರ, ಸಂತೋಷ ಮಲ್ಲಾಬಾದಿ, ಅಲ್ಪಾಫ್‌, ಅಕºರ ಮುಲ್ಲಾ, ಶಾಂತಕುಮಾರ ಪಾಟೀಲ, ರಿಜ್ವಾನ ಪಟೇಲ್‌, ಯಲ್ಲಪ್ಪ ಕುಂಟನೂರ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next