Advertisement
ಬುಧವಾರ ಕೇಂದ್ರ ಅಂಕಿ ಅಂಶ ಕಚೇರಿ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಕಳೆದ ತ್ತೈಮಾಸಿಕದಲ್ಲಿದ್ದ ಶೇ.7.0 ಜಿಡಿಪಿ ಜನವರಿ – ಮಾರ್ಚ್ ಅವಧಿಯಲ್ಲಿ ಶೇ. 6.1ಕ್ಕೆ ಕುಸಿದಿದೆ. ಈ ಮೂಲಕ 2016-17ನೇ ವಿತ್ತೀಯ ವರ್ಷದ ಜಿಡಿಪಿ ಶೇ.7.1ಕ್ಕೆ ತಲುಪಿದಂ ತಾಗಿದೆ. ಇದು ಕಳೆದ 3 ವರ್ಷಗಳಲ್ಲೇ ಜಿಡಿಪಿಯಲ್ಲಾದ ಅತ್ಯಧಿಕ ಇಳಿಕೆೆ. 2015 – 16ರಲ್ಲಿ ಇದು ಶೇ.8 ಮತ್ತು ಅದಕ್ಕಿಂತಲೂ ಮೊದಲ ವರ್ಷದಲ್ಲಿ ಶೇ.7.5 ಆಗಿತ್ತು. 2017ರ ಮೊದಲ 3 ತಿಂಗಳಲ್ಲಿ ಚೀನದ ಜಿಡಿಪಿ ಶೇ. 6.9ನ್ನು ತಲುಪಲೂ ಭಾರತಕ್ಕೆ ಸಾಧ್ಯವಾಗಿಲ್ಲ. ನೋಟುಗಳ ಅಪಮೌಲ್ಯದ ಬಳಿಕ ಕೃಷಿ ಹೊರತುಪಡಿಸಿ ಉಳಿದ ಎಲ್ಲ ಕ್ಷೇತ್ರಗಳ ಪ್ರಗತಿಯೂ ಕುಸಿದಿದೆ. ಏತನ್ಮಧ್ಯೆ, ಮೂಲಸೌಲಭ್ಯಕ್ಕೆ ಪೂರಕವಾದ ಪ್ರಮುಖ 8 ವಲಯದಲ್ಲಿ ಪ್ರಗತಿ ದರ ಇಳಿಮುಖವಾಗಿದೆ. ಎಪ್ರಿಲ್‌ನಲ್ಲಿ ಇದು ಶೇ. 2.5ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಲ್ಲಿ ದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ರಸಗೊಬ್ಬರ, ಉಕ್ಕು, ಸಿಮೆಂಟ್‌ವಲಯದ ಪ್ರಗತಿ ದರ ಶೇ. 8.7 ರಷ್ಟಿತ್ತು.
ಉತ್ತಮ ಮಳೆಯಿಂದಾಗಿ ಕೃಷಿ ಕ್ಷೇತ್ರವು ಆಘಾತದಿಂದ ತಪ್ಪಿಸಿಕೊಂಡಿದೆ. ಈ ವಲಯವು 2016- 17ರಲ್ಲಿ ಶೇ.4.9ರಷ್ಟಾಗಿದ್ದು, ಅದರ ಹಿಂದಿನ ವರ್ಷ ಇದು ಶೇ.0.7ರಷ್ಟಿತ್ತು. 4ನೇ ತ್ತೈಮಾಸಿಕವೊಂದ ರಲ್ಲೇ ಕೃಷಿ ಕ್ಷೇತ್ರದ ಪ್ರಗತಿ ಶೇ.5.2 ಆಗಿದೆ. ಇದೇ ವೇಳೆ, 2016-17ರ ವಿತ್ತೀಯ ಕೊರತೆಯು ಜಿಡಿಪಿಯ ಶೇ.3.51ರಷ್ಟಿದೆ ಎಂದೂ ಸರಕಾರ ಮಾಹಿತಿ ನೀಡಿದೆ.