Advertisement

ಗಮನಸೆಳೆದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

01:28 PM Dec 10, 2019 | Team Udayavani |

ಕಂಪ್ಲಿ: ಪಟ್ಟಣದ ಷಾಮಿಯಾಚಂದ್‌ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕಲಾವಿದೆ ಡಿ. ಉಮಾದೇವಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶಾಸಕ ಜೆ.ಎನ್‌. ಗಣೇಶ್‌ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿ, ಕರ್ನಾಟಕದಲ್ಲಿ ಐತಿಹಾಸಿಕ ವಿಜಯನಗರ ಸಾಮ್ರಾಜ್ಯ ಸೇರಿದಂತೆ ವಿವಿಧ ಕಲಾ ವೈಭೋಗವನ್ನು ಚಿತ್ರಕಲೆಗಳಲ್ಲಿ ಕಾಣಬಹುದಾಗಿದೆ. ಕಲೆಗೆ ಕಲೆಯೇ ಸಾಟಿ ಎಂಬಂತೆ ಚಿತ್ರಕಲೆ ರೂಢಿಸಿಕೊಂಡರೆ ಜೀವನದಲ್ಲಿ ಸಾಧನೆಗೆ ಮಹತ್ವ ಸಿಗುತ್ತದೆ. ಇಂದಿನ ದಿನದಲ್ಲಿ ವಿದ್ಯಾರ್ಥಿಗಳು ದುಶ್ಚಟಗಳಿಗೆ ಮಾರು ಹೋಗದೇ ತಮ್ಮಲ್ಲಿರುವ ಅಪ್ರತಿಮ ಕಲೆಗಳೊಂದಿಗೆ ಉತ್ತಮ ಜೀವನದ ಕಡೆ ಸಾಗಬೇಕು ಎಂದರು.

Advertisement

ಎಸ್‌ಎಂಜಿಜಿ ಪ್ರೌಢಶಾಲೆ ಪ್ರಭಾರಿ ಉಪ ಪ್ರಾಚಾರ್ಯ ಷಣ್ಮುಖಪ್ಪ ಚಿತ್ರಗಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಚಿತ್ರಕಲೆಗಳ ಅಭಿರುಚಿಯನ್ನು ವಿದ್ಯಾರ್ಥಿಗಳು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ಜಗತ್ತಿನಲ್ಲಿ ಚಿತ್ರಕಲೆಗೆ ಹೆಚ್ಚಿನ ಮಹತ್ವವಿದೆ. ಹೀಗಾಗಿ ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿ ಕಲೆಗಳಲ್ಲಿ ಒಂದಾದ ಚಿತ್ರಕಲೆಯನ್ನು ರೂಢಿಸಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಶಾಸಕ ಗಣೇಶ್‌ ಹಾಗೂ ಮುಖಂಡರು ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದರು. ಕಲಾವಿದೆ ಡಿ. ಉಮಾದೇವಿ ಅವರು ಬಿಡಿಸಿರುವ ವಿವಿಧ ಚಿತ್ರಕಲೆಗಳು ನೋಡುಗರ ಗಮನ ಸೆಳೆದವು.

ಈ ಕಾರ್ಯಕ್ರಮದಲ್ಲಿ ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ವೀರಶೈವ ಸಂಘದ ಅಧ್ಯಕ್ಷ ಪಿ. ಮೂಕಯ್ಯಸ್ವಾಮಿ, ಕನ್ನಡ ಹಿತರಕ್ಷಕಸಂಘದ ಅಧ್ಯಕ್ಷ ಬಿ. ಅಂಬಣ್ಣ, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಶ್ರೀಧರ್‌ ಶ್ರೇಷ್ಠಿ, ಪುರಸಭೆ ಸದಸ್ಯ ವೀರಾಂಜಿನೇಯಲು, ಕರ್ನಾಟಕ ರಾಜ್ಯ ಸ.ನೌ. ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಸಿ. ಭೀಮಣ್ಣ, ಕಾಲೇಜು ಉಪನ್ಯಾಸಕ ಸತ್ಯನಾರಾಯಣರಾವ್‌, ಡಿ.ಎಸ್‌. ರಾಜಕುಮಾರ, ಶಿಕ್ಷಕ ವಿರೇಶ್‌, ಸಂಗೀತಾ ಶಿಕ್ಷಕ ಶ್ರೀನಿವಾಸ್‌, ಶಿಕ್ಷಕ ವೈ. ವಿರೇಶ್‌, ಮಾರೆಮ್ಮ ಸಂಘದ ಅಧ್ಯಕ್ಷ ಜಾಲಗಾರ್‌ ಹನುಮಂತಪ್ಪ ಹಾಗೂ ಕಲಾವಿದೆ ಡಿ. ಉಮಾದೇವಿ ಸೇರಿದಂತೆ ಮುಖಂಡರು, ಶಿಕ್ಷಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next