ಮಂಗಳೂರು: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಸಂಸ್ಥೆಯ (ಎನ್‌ಎಂಎ ಎಂಐಟಿ) ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗವು 1986ರಲ್ಲಿ ಆರಂಭವಾಗಿದ್ದು ನ್ಯಾಶನಲ್ ಬೋರ್ಡ್ ಆಫ್ ಅಕ್ರೆಡಿಟೇಶನ್ ಪ್ರಕಾರ ಮೊದಲ ದರ್ಜೆಯ ಮಾನ್ಯತೆ ಪಡೆದಿದೆ.
ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಇ ಪದವಿ, ಮೆಶಿನ್ ಡಿಸೈನ್ ಆ್ಯಂಡ್ ಎನರ್ಜಿ ಸಿಸ್ಟಮ್ಸ್ ಎಂಜಿನಿಯರಿಂಗ್‌ನಲ್ಲಿ ಎಂಟೆಕ್ ಸ್ನಾತಕೋತ್ತರ ಪದವಿ ಶಿಕ್ಷಣ ಇಲ್ಲಿದೆ. ಈ ವಿಭಾಗವು 2007ರಿಂದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಅಂಗೀಕೃತ ಸಂಶೋಧನಾ ಕೇಂದ್ರವಾಗಿದೆ. ಡಿಸೈನ್, ಥರ್ಮಲ್, ಮ್ಯಾನ್ಯುಫ್ಯಾಕ್ಚರಿಂಗ್ ಆ್ಯಂಡ್ ಅಟೋಮೇಶನ್, ಮ್ಯಾನೇಜ್‌ಮೆಂಟ್ ಅಥವಾ ಅಂತರ್ ವಿಭಾಗೀಯ ಕೋರ್ಸ್ ಇನ್‌ಫಾರ್ಮೇಶನ್ ಟೆಕ್ನಾಲಜಿಗಳನ್ನು ಅಧ್ಯಯನ ಮಾಡುವ ಅವಕಾಶವಿದೆ.
ಸೆಂಟರ್ಸ್ ಆಫ್ ಎಕ್ಸಲೆನ್ಸ್ ಸಂಶೋಧನಾ ಕ್ಷೇತ್ರದಲ್ಲಿ ಮೈಕ್ರೊಮೆಶಿನಿಂಗ್, ವೈಬ್ರೇಶನ್ ಐಸೊಲೇಶನ್, ಸಿಸ್ಟಮ್ ಡಿಸೈನ್, ಅಡ್ವಾನ್ಸ್‌ಡ್ ಮೆಶಿನಿಂಗ್, ಐಸಿ ಎಂಜಿನ್ಸ್, ವೆಲ್ಡಿಂಗ್ ಟೆಕ್ನಾಲಜಿ, ಆಲ್ಟರ್ನೇಟಿವ್ ಪ್ಯುಯೆಲ್ಸ್ ಹಾಗೂ ರೋಬೋಟಿಕ್ಸ್ ಮತ್ತು ಅಟೋಮೇಶನ್ ವಿಷಯಗಳ ಮೇಲೆ ಹೆಚ್ಚಿನ ಒತ್ತು ಸಂಸ್ಥೆಯಲ್ಲಿದೆ. ಎನ್‌ಎಂಎಎಂಐಟಿ-ಪ್ರೋನಿಯಸ್ ಸೆಂಟರ್ ಫಾರ್ ವೆಲ್ಡಿಂಗ್ ಟೆಕ್ನಾಲಜಿಯು ಪ್ರೋನಿಯಸ್ ನಿರ್ಮಿತ ಆಧುನಿಕ ವೆಲ್ಡಿಂಗ್ ಸಿಮ್ಯುಲೇಟರನ್ನು ಹೊಂದಿದೆ.
ಲ್ಯಾಬ್ ವ್ಯೂ, ರೊಬೋಟ್ ಪ್ರೋಗ್ರಾಮಿಂಗ್ ಆ್ಯಂಡ್ ಸಿಮ್ಯುಲೇಶನ್, ಸಿಎನ್‌ಸಿ ಸಿಮ್ಯುಲೇಶನ್ ಸಾಫ್ಟ್‌ವೇರ್, ಎಫ್‌ಇಎ ಆ್ಯಂಡ್ ಸಿಎಫ್‌ಡಿ, ಕ್ರಿಯೊ ಪ್ಯಾರಾಮೆಟ್ರಿಕ್, ಸಾಲಿಡ್ ಎಡ್ಜ್, ಡಿಸ್ಪೇಸ್, ಮೈಕ್ರೊಸ್ಕೋಪ್ ಇಮೇಜಿಂಗ್ ಸಾಫ್ಟ್‌ವೇರ್‌ಗಳನ್ನು ಸಂಸ್ಥೆಯಲ್ಲಿ ಬಳಸಲಾಗುತ್ತಿದೆ. ವಿಭಾಗವು ಎನ್‌ಎಂಎಎಂಐಟಿ ಇನ್‌ಕ್ಯೂಬೇಶನ್ ಸೆಂಟರ್‌ನಲ್ಲಿ ಬಯೋಸೇಫ್ಟಿ ಲ್ಯಾಬೊರೇಟರಿಗಳು ಮತ್ತು ಕಾರ್ಯಾಚರಣಾ ಘಟಕಗಳ ವಿನ್ಯಾಸ ಮತ್ತು ಅಭಿವೃದ್ಧಿಗಾಗಿ ಬಯೊಸ್ಟಿಂಗ್ ಟೆಕ್ನಾಲಜೀಸ್ ಎಂಬ ಹೆಸರಿನ ಹೊಸ ಆಯೋಜನೆಯನ್ನು ಆರಂಭಿಸಿದೆ.
ಕೌಶಲ ಕಾರ್ಯಕ್ರಮ
ಫಿನಿಟ್ ಎಲಿಮೆಂಟ್ ಅನಾಲಿಸಿಸ್ ಫಾರ್ ಇಂಡಸ್ಟ್ರಿಯಲ್ ಪ್ರಾಬ್ಲೆಮ್ಸ್ ಆ್ಯಂಡ್ ವೆಲ್ಡಿಂಗ್ ಟೆಕ್ನಾಲಜಿ ಹಾಗೂ ರೊಬೋಟಿಕ್ಸ್ ಆ್ಯಂಡ್ ಅಟೋಮೇಶನ್ ವಿಷಯಗಳಲ್ಲಿ ಸಂಸ್ಥೆಯು ಮೇ-ಜುಲೈಗಳಲ್ಲಿ ಉದ್ಯಮಗಳ ಸಹಯೋಗದಲ್ಲಿ ಕೌಶಲ ಕಾರ್ಯಕ್ರಮಗಳನ್ನು ನಡೆಸಲಾಗಿದೆ.