ಖ್ಯಾತ ಹೃದ್ರೋಗ ತಜ್ಞ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್‌ರಿಗೆ ಅರವತ್ತು ವರ್ಷ ತುಂಬಿದ ನೆನಪಿನಲ್ಲಿ, ರಂಗಚೇತನ ಸಂಸ್ಕೃತಿ ಕೇಂದ್ರದ ವತಿಯಿಂದ “ಹೃದಯಸ್ಪರ್ಶಿ-60′ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಡಾ. ಮಂಜುನಾಥ್‌ರ ಬರಹ, ಭಾಷಣ, ಹೃದ್ರೋಗ ಸಂಬಂಧಿಲೇಖನ ಮತ್ತು ನೆನಪಿನ ಚಿತ್ರಗಳನ್ನು ಸೇರಿದ “ದವನ’ ಕೃತಿ ಬಿಡುಗಡೆ, ಅವರ ಜೀವನದ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯ ಲಿದೆ. ರಂಗಚೇತನದ ಅಧ್ಯಕ್ಷ ಡಾ.ಡಿ.ಕೆ.ಚೌಟ ಅಧ್ಯಕ್ಷತೆ ವಹಿಸಲಿದ್ದು, ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಾಧೀಶ ಡಾ.ಶಿವರಾಜ ವಿ. ಪಾಟೀಲ್ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಿದ್ದಾರೆ. ವಿಧಾನ ಪರಿಷತ್‌ನ ಮಾಜಿ ಸಭಾಧ್ಯಕ್ಷ ಡಾ.ಬಿ.ಎಲ್.ಶಂಕರ್ ಗ್ರಂಥ ಲೋಕಾರ್ಪಣೆಗೊಳಿಸಲಿದ್ದಾರೆ.
ಹೃದಯಸ್ಪರ್ಶಿ-60
ಎಲ್ಲಿ?: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ
ಯಾವಾಗ?: ಸೆ. 8, ಶನಿವಾರ ಸಂಜೆ 6