Advertisement

ನೋಟಾ ಪ್ರಮಾಣ ಇಳಿಕೆ

11:13 PM May 24, 2019 | Sriram |

ಉಡುಪಿ: ಉಡುಪಿ-ಚಿಕ್ಕಮಂಗಳೂರು ಲೋಕಸಭಾ ಚುನಾವಣೆ ಪ್ರಾರಂಭದಲ್ಲಿ ಅಭ್ಯರ್ಥಿಗಳ ಪರ ನೋಟಾ ಅಭಿಯಾನ ಆರಂಭಿಸಿದ್ದು, ಭಾರೀ ನೋಟಾ ಮತಗಳ ಸಂಖ್ಯೆ ನಿರೀಕ್ಷಿಸಲಾಗಿತ್ತು. ಅದರೆ ಕಳೆದ ಬಾರಿ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಿಂತಲೂ ಕಡಿಮೆ ನೋಟಾ ಮತಗಳು ಈ ಬಾರಿ ಬಿದ್ದಿವೆ.

Advertisement

ಸಾಮಾಜಿಕ ಜಾಲತಾಣಗಳಲ್ಲಿ ನೋಟಾ ಪರ ಅಭಿಯಾನ ನಡೆದಿದ್ದರೂ ಮತದಾರ ಅದನ್ನು ಮನ್ನಿಸಿಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ 7,828 ನೋಟಾ ಬಿದ್ದಿದ್ದವು. 2018ರ ಚುನಾವಣೆಯಲ್ಲಿ ಒಟ್ಟು 9,399 ನೋಟಾ ಮತ ಚಲಾವಣೆಯಾಗಿತ್ತು.

2014ರ ಚುನಾವಣೆಗಿಂತ 2018ರ ವಿಧಾನಸಭಾ ಚುನಾವಣೆಯಲ್ಲಿ ನೋಟಾ ಮತಗಳ ಸಂಖ್ಯೆ ಹೆಚ್ಚಳ ವಾಗಿತ್ತು. ಆದರೆ ಈ ಬಾರಿ ಕಡಿಮೆ ಯಾಗಿದೆ. ಕುಂದಾಪುರ 1,258, ಉಡುಪಿ 930, ಕಾಪು 760, ಕಾರ್ಕಳ 873, ಶೃಂಗೇರಿ 853, ಮೂಡಿಗೆರೆ 1,059, ಚಿಕ್ಕಮಗಳೂರು 960, ತರಿಕೆರೆ ಕ್ಷೇತ್ರದಲ್ಲಿ 809 ಸೇರಿದಂತೆ ಒಟ್ಟು 7,510 ನೋಟಾ ಬಿದ್ದಿವೆ. ಕಳೆದ ಬಾರಿಗಿಂತ 310 ನೋಟಾ ಮತಗಳು ಕಡಿಮೆ ಬಿದ್ದಿವೆ.

2013ರಿಂದ
ನೋಟಾ ಜಾರಿ
5 ರಾಜ್ಯಗಳಲ್ಲಿ 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನೋಟಾ ಮೊದಲ ಬಾರಿಗೆ ಬಳಕೆ ಯಾಗಿತ್ತು. ಅನಂತರ ಕರ್ನಾಟಕದಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ನೋಟಾ ಬಳಕೆಯಾಗಿತ್ತು. ಬಳಿಕ 2018ರ ವಿಧಾನಸಭೆ ಚುನಾವಣೆಯಲ್ಲೂ ಬಳಕೆಯಲ್ಲಿತ್ತು. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತದಾರರ ಸಂಖ್ಯೆಯಲ್ಲಿ ಶೇ. 0.8ರಷ್ಟು ಮತದಾರರು ನೋಟಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next