ಹೊಸದಿಲ್ಲಿ: ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಿರುವ ಯಾವುದೇ ಅಭ್ಯರ್ಥಿಗೆ ಮತ ಹಾಕಲು ಇಷ್ಟವಿಲ್ಲದಿದ್ದರೆ ‘ನೋಟಾ’ (NOTA: Non Of The Above) ಗೆ ಮತ ಹಾಕಲು ಚುನಾವಣಾ ಆಯೋಗ ಅವಕಾಶ ನೀಡಿದೆ. ಮತಯಂತ್ರದಲ್ಲಿ ಕೊನೆಯಲ್ಲಿ ಇದಕ್ಕೆ ಅವಕಾಶ ನೀಡಲಾಗಿದೆ.
ಉತ್ತರ ಪ್ರದೇಶದಲ್ಲಿ ಕೆಲವು ಪ್ರಮುಖ ರಾಜಕೀಯ ಪಕ್ಷಗಳನ್ನೂ ಹಿಮ್ಮೆಟ್ಟಿಸಿ “ನೋಟಾ’ ಮುಂದೆ ಸಾಗಿರುವುದು ಕಂಡುಬಂದಿದೆ! ಈ ಚುನಾವಣೆಯಲ್ಲಿ ನೋಟಾ ಆಯ್ಕೆಯ ಮತ ಹಂಚಿಕೆಯು ಶೇ.0.69 ಎಂದು ಚುನಾವಣಾ ಆಯೋಗ ಹೇಳಿದೆ. ಆಮ್ ಆದ್ಮಿ ಪಕ್ಷ(ಶೇ.0.35) ಮತ್ತು ಜೆಡಿಯು(ಶೇ.0.11)ಗೆ ಹೋಲಿಸಿದರೆ ನೋಟಾದ ಮತ ಹಂಚಿಕೆ ಹೆಚ್ಚಾಗಿದೆ.
ಇನ್ನು, ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂ ಪಕ್ಷವು ಶೇ.0.47ರಷ್ಟು ಮತಗಳನ್ನಷ್ಟೇ ಪಡೆದಿದೆ. ಸಿಪಿಐ ಶೇ.0.07, ಎನ್‌ಸಿಪಿ ಶೇ.0.05, ಶಿವಸೇನೆ ಶೇ.0.03 ಮತಗಳನ್ನು ಗಳಿಸಿದರೆ, ಸಿಪಿಎಂ, ಸಿಪಿಐಎಂಎಲ್ ಮತ್ತು ಎಲ್ ಜೆಪಿ(ಆರ್‌ವಿ) ಪಕ್ಷಗಳ ಮತ ಹಂಚಿಕೆ ತಲಾ ಶೇ.0.01ರಷ್ಟಿವೆ ಎಂದೂ ಆಯೋಗ ತಿಳಿಸಿದೆ.
ಇದನ್ನೂ ಓದಿ:ಗೋವಾ ಬಿಜೆಪಿಗೆ ‘ಎಂಜಿಪಿ’ ಬಲ: 25 ಸ್ಥಾನಗಳೊಂದಿಗೆ ಸರ್ಕಾರ ರಚಿಸಲು ನಿರ್ಧಾರ
ವಿಶೇಷವೆಂದರೆ, ಎಐಎಫ್ಬಿ, ಐಯುಎಂಎಲ್ ಮತ್ತು ಎಲ್‌ಜೆಪಿ ಪಕ್ಷಗಳು ಒಂದೇ ಒಂದು ಮತ ಗಳಿಸುವಲ್ಲೂ ಸೋತಿದ್ದು, ಇವುಗಳು ಮತ ಹಂಚಿಕೆಯಲ್ಲಿ ಶೂನ್ಯ ಸಾಧನೆ ಮಾಡಿವೆ.