Advertisement

ಮೂಡುಬಿದಿರೆ: ಇನ್ನೂ ಬಯಲು ಶೌಚ ಮುಕ್ತವಲ್ಲ! ಕಾಣಸಿಗುತ್ತಿವೆ ಸೀರೆ ಸುತ್ತಿದ ಸ್ನಾನಗೃಹಗಳು

08:46 AM Jun 06, 2020 | mahesh |

ಮೂಡುಬಿದಿರೆ: ಸ್ವಚ್ಛತೆ ಹಾಗೂ ಬಯಲು ಶೌಚಮುಕ್ತ ಸಮಾಜಕ್ಕಾಗಿ ಸಾಕಷ್ಟು ಪ್ರಯತ್ನ ನಡೆದಿದ್ದರೂ ಮೂಡುಬಿದಿರೆ ತಾಲೂಕಿನ ವಿವಿಧೆಡೆ ಅದಿನ್ನೂ ಸಮರ್ಪಕ ಫ‌ಲ ಕೊಟ್ಟಿಲ್ಲ. ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು ಗ್ರಾಮದ ಬಂಗಾಲಪದವು – ಗಂಟಾಲ್‌ಕಟ್ಟೆ, ಮಸೀದಿ ಬಳಿಯ 5 ಸೆಂಟ್ಸ್‌ ಕಾಲನಿ, ಪುತ್ತಿಗೆ, ಪಾಲಡ್ಕ, ಕಲ್ಲಮುಂಡ್ಕೂರು, ಬೆಳುವಾಯಿ, ಹೊಸಬೆಟ್ಟು, ದರೆಗುಡ್ಡೆ ಹಾಗೂ ಪಡುಮಾರ್ನಾಡು ಗ್ರಾ.ಪಂ. ಹೀಗೆ ಹಲವೆಡೆ ಸುಮಾರು 40ಕ್ಕಿಂತಲೂ ಅಧಿಕ ಮನೆಗಳಲ್ಲಿ ಶೌಚಾಲಯಗಳಿಲ್ಲ. ಇಲ್ಲೆಲ್ಲ ಬಯಲು ಶೌಚ ಇನ್ನೂ ಚಾಲ್ತಿಯಲ್ಲಿದೆ.

Advertisement

ಹಲವೆಡೆ ಅನಧಿಕೃತ ಮನೆಗಳಿದ್ದರೂ ಅವುಗಳನ್ನು ಡೀಮ್ಡ್ ಫಾರೆಸ್ಟ್‌ ಗುಮ್ಮನ ಕಾಟ ಕಾಡುತ್ತಿದೆ. ಪ್ಲಾಸ್ಟಿಕ್‌ ಶೀಟ್‌ ಹೊದೆಸಿದ ಮನೆಗಳೂ ಇವೆ. ಇಂಥ ಮನೆಗಳ ಪಕ್ಕದಲ್ಲಿ ನಾಲ್ಕು ಕಂಬ ಹಾಕಿ ಅದಕ್ಕೆ ಸೀರೆಗಳನ್ನು ಸುತ್ತಿ ಬಚ್ಚಲು ಮನೆಯಾಗಿಸಿ ಸ್ನಾನ ಮಾಡುವ ಸ್ಥಿತಿಯಿದೆ. ಪುರಸಭೆ , ಗ್ರಾ.ಪಂ. ವ್ಯಾಪ್ತಿಯ ಅನೇಕ ಕಡೆಗಳಲ್ಲಿರುವ, ಸೂಕ್ತ ದಾಖಲೆಗಳಿಲ್ಲದ ಮನೆ ಅಥವಾ ಜೋಪಡಿಗಳಲ್ಲಿರುವವರಿಗೆ ಶೌಚಾಲಯ ಒದಗಿಸಲು ಸ್ಥಳೀಯ ಆಡಳಿತಗಳಿಗೆ ತೊಡಕಾಗುತ್ತಿದೆ.

 ರೋಟಾಲೆಟ್‌ ಮೂಲಕ ನೆರವು
“ರೋಟಾಲೆಟ್‌ ಯೋಜನೆ’ಯಡಿ ಕಳೆದ 3 ವರ್ಷಗಳಲ್ಲಿ 125 ಕುಟುಂಬಗಳಿಗೆ ಉಚಿತವಾಗಿ ಸ್ನಾನಗೃಹ ಸಹಿತ ಶೌಚಾಲಯ ನಿರ್ಮಿಸಿಕೊಟ್ಟು ಸ್ವಚ್ಛತೆಯ ಕುರಿತು ಅರಿವು ಮೂಡಿಸುತ್ತಿದೆ. ವಿಶೇಷವಾಗಿ ಯಾವುದೇ ದಾಖಲೆ ಪತ್ರಗಳಿಲ್ಲದ ಹಾಗೂ ಮಹಿಳೆಯರು ಮತ್ತು ಶಾಲೆಗೆ ಹೋಗುವ ಹೆಣ್ಮಕ್ಕಳು ಇರುವ ಮನೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಸಹಾಯಕ ಕುಟುಂಬಗಳನ್ನು ಗುರುತಿಸಿ ನೆರವು ನೀಡಲು ಪ್ರಯತ್ನಿಸುತ್ತೇವೆ.”
-ಸಿ.ಎಚ್‌. ಅಬ್ದುಲ್‌ ಗಫೂರ್‌, ಅಧ್ಯಕ್ಷರು, ಮೂಡುಬಿದಿರೆ ರೋಟರಿ ಕ್ಲಬ್‌ , – ಡಾ| ಮುರಳೀಕೃಷ್ಣ, ಅಧ್ಯಕ್ಷರು, ರೋಟರಿ ಚಾರಿಟೆಬಲ್‌ ಟ್ರಸ್ಟ್‌

Advertisement

Udayavani is now on Telegram. Click here to join our channel and stay updated with the latest news.

Next