Advertisement

ಪದೇ ಪದೇ ಹೇಳ್ತೇನೆ ‘ದಲಿತ’ಅನ್ನುವ ಪದ ಬಳಸಿಲ್ಲ : ಸಿದ್ದರಾಮಯ್ಯ

02:23 PM Nov 03, 2021 | Team Udayavani |

ಬೆಂಗಳೂರು : ನಾನು ”ಹೊಟ್ಟೆ ಪಾಡಿಗಾಗಿ ದಲಿತರು ಬಿಜೆಪಿಗೆ ಹೋಗಿದ್ದಾರೆ” ಅಂತ ಹೇಳಿಯೇ ಇಲ್ಲ,ಈಗ ಬಿಜೆಪಿಯವರು ಬಣ್ಣ ಕಟ್ಟಿ ರಾಜಕೀಯಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಬುಧವಾರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ”ನಾನು ಹೇಗೂ ಆರ್ ಎಸ್ ಎಸ್ ವಿರುದ್ದ ಇದ್ದೇನಲ್ಲ ಅದಕ್ಕಾಗಿ ಬಿಜೆಪಿಯವರೇ ಹೇಳಿ ಮಾಡಿಸಿದ್ದಾರೆ
ಬಿಜೆಪಿಯವರು ರಾಜಕೀಯಕ್ಕಾಗಿ ಮಾಡುತ್ತಾರೆ, ನಾನು ಎಡಗೈ ಸಮಾವೇಶದಲ್ಲಿ ಮಾತನಾಡಿದ್ದೆ, ದಲಿತರು ಅನ್ನೋ ಶಬ್ದವನ್ನೇ ಬಳಸಿಲ್ಲ.ಇವರೆಲ್ಲ ಬಾಬಾ ಸಾಹೇಬ್ ಅಂಬೇಡ್ಕರ್ ಗೆ ಗೌರವ ಕೊಡದ ಪಕ್ಷ ಸೇರಿದ್ದಾರೆ. ಸ್ವಾರ್ಥಕ್ಕಾಗಿ, ಕಾರಜೋಳ ಜಿಗಜಿಣಗಿ ಸೇರಿ ಇತರರು ಬಿಜೆಪಿಗೆ ಹೋಗಿದ್ದಾರೆ ಅಂತ ಹೇಳಿದ್ದೆ” ಎಂದರು.

”ನನ್ನ ಪ್ರಕಾರ ಇವರೆಲ್ಲ ಸಂವಿಧಾನದ ವಿರುದ್ದ ಇರುವವರು, ನಾವೆಲ್ಲ ಅಂಬೆಡ್ಕರ್ ಸಂವಿಧಾನ ಪರವಾಗಿ ಇರುವವರು.ನಾನು ದಲಿತ ಸಮಾವೇಶದಲ್ಲಿ ಈ ಮಾತನಾಡಿದ್ದೆನಾನು ಮಾತನಾಡಿದ್ದು ತಪ್ಪಾಗಿದ್ದರೆ , ಅಲ್ಲೇ ದಲಿತರು ವಿರೋಧಿಸುತ್ತಿದರು. ಈಗ ಬಿಜೆಪಿಯವರು ಸುಮ್ಮನೆ ಪ್ರತಿಭಟನೆ ಮಾಡುತ್ತಿದ್ದಾರೆ” ಎಂದರು.

”ನಾನು ದಲಿತರು ಆರ್ಥಿಕವಾಗಿ ಸಾಮಾಜಿಕವಾಗಿ ಬಲಿಷ್ಠರಾಗಿ ಇರಬೇಕು ಎಂಬುದರಲ್ಲಿ ಮೊದಲಿಗ ನಾನು,ನಾನು ಎಂದೂ ದಲಿತರ ಪರವಾಗಿ ಇರುವವನು” ಎಂದರು.

ಇದನ್ನೂ ಓದಿಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ ಎಸ್.ಸಿ. ಮೋರ್ಚಾ ಪ್ರತಿಭಟನೆ

Advertisement

”ಸಂವಿಧಾನ ಅಂಬೇಡ್ಕರ್ ಮಾಡಿದ್ದು ಕಾಂಗ್ರೆಸ್ ಅಲ್ಲ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾನ್ಸ್ಟಿಟ್ಯೂಟ್ ಅಸೆಂಬ್ಲಿ ಮಾಡಿದ್ದು ಕಾಂಗ್ರೆಸ್ ಅಲ್ಲವೇ? ಅಂಬೇಡ್ಕರ್ ಅವರನ್ನ ಕಾನೂನು ಮಂತ್ರಿ, ಕಾರ್ಮಿಕ ಮಂತ್ರಿ ಮಾಡಿದ್ದು ಕಾಂಗ್ರೆಸ್ ಅಲ್ಲವೇ?
ಸಂವಿಧಾನ ರಚನೆ ಮಾಡಿದ್ದು ಅಂಬೇಡ್ಕರ್ ಆಗಿದ್ದರೂ, ಅದನ್ನ ಜಾರಿ ಮಾಡಿದ್ದು ಕಾಂಗ್ರೆಸ್ ಅಲ್ಲವೇ ”ಎಂದು ಪ್ರಶ್ನಿಸಿದರು.

”ನಾನು ದಲಿತರ ಬಗ್ಗೆ ಅಪಾರವಾದ ಗೌರವ ಇಟ್ಟುಕೊಂಡವನು.ಅಂಬೇಡ್ಕರ್ ಹೇಳಿದ ಹಾಗೇ, ಕೇವಲ ಮತ ಹಾಕೋದಷ್ಟೇ ಅಲ್ಲ, ಆರ್ಥಿಕವಾಗಿ ಸಾಮಾಜಿಕವಾಗುವ ಸ್ವಾತಂತ್ರ್ಯ ಇರಬೇಕು, ಮುಖ್ಯವಾಹಿನಿಗೆ ಬರಬೇಕು ಎಂಬುದರಲ್ಲಿ ನಂಬಿಕೆ ಇಟ್ಟುಕೊಂಡಿರುವವನು ನಾನು, ಬಿಜೆಪಿಯವರಿಂದ ನಾವು ಪಾಠಾ ಕಲಿಯಬೇಕೆ” ಎಂದು ಪ್ರಶ್ನಿಸಿದರು.

”ಮೀಸಲಾತಿಗೆ ವಿರೋಧಿಸಿದವರು ಬಿಜೆಪಿಯವರು, ರಾಮಾ ಜೋಯಿಸ್ ಮೀಸಲಾತಿ ವಿರುದ್ದ ಕೋರ್ಟ್ ಗೆ ಹೋಗಿಲ್ಲವೇ?
ಮಂಡಲ್ ಕಮಿಷನ್ ಬಿಜೆಪಿ ವಿರೋಧಿಸಿಲ್ಲವೇ? ನಾನು ”ಹೊಟ್ಟೆ ಪಾಡಿಗಾಗಿ ದಲಿತರು ಬಿಜೆಪಿಗೆ ಹೋಗಿದ್ದಾರೆ” ಅಂತ ಹೇಳಿಯೇ ಇಲ್ಲ
ಬೇಕಾದರೆ ತೆಗೆದು ನೋಡಿ, ವಿಡಿಯೋ ಇದ್ದರೆ ನಾನು ದಲಿತರು ಎಂಬ ಪದ ಉಪಯೋಗಿಸಿಲ್ಲ. ದಲಿತರಿಗೆ ಜೀವನದಲ್ಲಿ ಅವಮಾನ ಮಾಡುವವನು ನಾನಲ್ಲ. ನಾನು ಕಾರಜೋಳ, ಜಿಗಜಿಣಗಿ ರಾಜಕೀಯ ಲಾಭಕ್ಕಾಗಿ, ಸ್ವಾರ್ಥಕ್ಕಾಗಿ ಬಿಜೆಪಿಗೆ ಹೋಗಿದ್ದಾರೆ ಅಂತಾ ಹೇಳಿದ್ದೆ
ನಾನೇನು ಹೆದರಿಕೊಂಡು ಹೋಗಲ್ಲ, ನಾನು ಪದೇ ಪದೇ ಹೇಳ್ತಿನಿ ದಲಿತ ಅನ್ನೋ ಪದ ಬಳಸಿಲ್ಲ. ಕಾರಜೋಳ, ಜಿಗಜಿಣಗಿ ದಲಿತರ ದಾರಿ ತಪ್ಪಿಸ್ತಾ ಇದ್ದಾರೆ ಅಂತಾ ಹೇಳಿದ್ದೆ”,ಎಂದರು.

‘ಬಿಟ್ ಕಾಯಿನ್ ಹಗರಣ ಡೈವರ್ಟ್ ಮಾಡಲು ಸಿದ್ದರಾಮಯ್ಯ ವಿರುದ್ದ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ವಿಚಾರ
ಜನರಿಗೆ ಗೊತ್ತಿದೆ, ಹೀಗಾಗಿ ಜನ ಅರ್ಥ ಮಾಡಿಕೊಳ್ಳುತ್ತಾರೆ’ ಎಂದರು.

ಪ್ರತಿಕ್ರಿಯಿಸುವುದಿಲ್ಲ

ಕುಮಾರಸ್ವಾಮಿ ನಮ್ನ ಗುರಿ ಮಿಷನ್ 123 ಎಂಬ ಮಾತಿಗೆ ಪ್ರತಿಕ್ರಿಯಿಸಿ, ಇಂಥ ಮಿಷನ್ ಗಳನ್ನ ಬೇಕಾದಷ್ಟು ನೋಡಿದ್ದೇನೆ, ಈ ರೀತಿ ಮಿಷನ್ ಗಳು ಸಾಕಷ್ಟು ಬಂದು ಹೋಗಿವೆ . ಹೀಗಾಗಿ ನಾನೇನು ಹೇಳುವುದಿಲ್ಲ.ಕುಮಾರಸ್ವಾಮಿ ಮಾತಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.

ದೀಪವಾಳಿ  ಶುಭಾಶಯ

ಇಂದು ನರಕ ಚತುರ್ದಶಿ, ನಾಡಿದ್ದು ಬಲಿಪಾಡ್ಯಮಿ,ದೀಪಾವಳಿ ಬೆಳಕಿನ ಹಬ್ಬ. ಬೆಳಕಿನಿಂದ ಕತ್ತಲೆ ಓಡಿಸುವುದು
ಜ್ಙಾನದಿಂದ ಅಜ್ಙಾನ ಓಡಿಸುವ ದೀಪಾವಳಿ ಹಬ್ಬ. ರಾಜ್ಯದ ಜನರಿಗೆ ಹೃದಯಪೂರ್ವಕವಾಗಿ ದೀಪವಾಳಿ ಹಬ್ಬದ ಶುಭಾಶಯಗಳು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next