Advertisement

LJP; ಯಾವುದೇ ಬೇಡಿಕೆಯಿಲ್ಲ, ಮೋದಿ ಪ್ರಧಾನಿಯಾಗಿಸುವುದಷ್ಟೇ ಗುರಿಯಾಗಿತ್ತು: ಚಿರಾಗ್

06:43 PM Jun 06, 2024 | Team Udayavani |

ಹೊಸದಿಲ್ಲಿ: ಎನ್ ಡಿಎ ಮಿತ್ರ ಪಕ್ಷವಾಗಿ ನಾವು ಯಾವುದೇ ಬೇಡಿಕೆಯಿಟ್ಟಿಲ್ಲ , ಏಕೆಂದರೆ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವುದೇ ನಮ್ಮ ಗುರಿಯಾಗಿತ್ತು’ ಎಂದು ಎಲ್‌ಜೆಪಿ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಹೇಳಿಕೆ ನೀಡಿದ್ದಾರೆ.

Advertisement

ಪಕ್ಷ 2-3 ಕ್ಯಾಬಿನೆಟ್ ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿ, “ನಾನು ಅಂತಹ ಎಲ್ಲವನ್ನು ನಿರಾಕರಿಸುತ್ತೇನೆ. ಯಾವುದೇ ಬೇಡಿಕೆಯಿಲ್ಲ. ಎಲ್ಲ ಮಿತ್ರಪಕ್ಷಗಳಿಗೆ ಕ್ಯಾಬಿನೆಟ್ ಸ್ಥಾನಗಳ ಸವಲತ್ತು ನೀಡುವ ಅಧಿಕಾರ ಪ್ರಧಾನ ಮಂತ್ರಿಗೆ ಇದೆ. ಯಾವುದೇ ಮಿತ್ರ ಪಕ್ಷದಿಂದ ಬೇಡಿಕೆಯಿಲ್ಲ’ ಎಂದರು.

ಇಂಡಿಯಾ ಮೈತ್ರಿಕೂಟವು ಸಂಪರ್ಕಿಸಿದೆಯೇ ಎಂದು ಕೇಳಿದಾಗ, “ಪ್ರತಿಪಕ್ಷಗಳು ಖಂಡಿತವಾಗಿಯೂ ತಮ್ಮ ಮಹತ್ವಾಕಾಂಕ್ಷೆಗಳನ್ನು ಈಡೇರಿಸಲು ವಿಫಲ ಪ್ರಯತ್ನವನ್ನು ಮಾಡಬಹುದು. ಬಹುಶಃ ಅವರು ಅಂತಹ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರಿಗೆ, ನೀತಿ ಮತ್ತು ಸಿದ್ಧಾಂತ ಇದ್ದರೆ ಹಾಗೆ ಮಾಡುವುದಿಲ್ಲ. ಅವರು ತಮ್ಮ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಜನಾದೇಶವನ್ನು ಅವಮಾನಿಸುವುದರಿಂದ ದೂರ ಸರಿಯುವುದಿಲ್ಲ. ಈ ಜನಾದೇಶವು ಪ್ರಧಾನಮಂತ್ರಿ ಮೋದಿಯವರೊಂದಿಗೆ ಬಲವಾಗಿ ಇದೆ ಮತ್ತು ಅದು 5 ವರ್ಷಗಳ ಕಾಲ ಬಲವಾಗಿ ಮುಂದುವರಿಯುತ್ತದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next