Advertisement
ಆದರೆ ಸದ್ಯ ತಾನು ನಾಯಕತ್ವ ಬಿಡುವ ಬಗ್ಗೆ ಆಲೋಚಿಸಿಲ್ಲ ಎಂಬುದಾಗಿ ಬಾಬರ್ ಆಜಂ ಹೇಳಿದ್ದಾರೆ. “ನಾನು ಪಾಕಿಸ್ಥಾನಕ್ಕೆ ಮರಳಿದ ಬಳಿಕ ಇಲ್ಲಿ ಸಂಭವಿಸಿದ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲಿದ್ದೇನೆ. ನಾಯಕತ್ವ ಬಿಡುವುದೇ ಆದಲ್ಲಿ ನಾನು ಬಹಿರಂಗವಾಗಿ ನಿಮಗೆ ತಿಳಿಸುತ್ತೇನೆ. ಪರದೆಯ ಹಿಂದೆ ನಾನು ಯಾವುದನ್ನೂ ಹೇಳುವುದಿಲ್ಲ, ಮುಚ್ಚಿಡುವುದೂ ಇಲ್ಲ. ಪಿಸಿಬಿ ನಿರ್ಧಾರವೇ ಅಂತಿಮ’ ಎಂಬುದಾಗಿ ಬಾಬರ್ ಆಜಂ ಹೇಳಿದರು.
ಪಾಕಿಸ್ಥಾನ ತಂಡದಲ್ಲಿ ಗುಂಪುಗಾರಿಕೆ ಇದೆ; ಇಲ್ಲಿ ಒಂದಲ್ಲ ಎರಡಲ್ಲ, ಮೂರು ಬಣಗಳಿವೆ. ಬಾಬರ್ ಆಜಂ, ಮೊಹಮ್ಮದ್ ರಿಜ್ವಾನ್ ಮತ್ತು ಶಾಹಿನ್ ಶಾ ಅಫ್ರಿದಿ ಅವರ ಬಣಗಳಿವು. ಕೆಲವು ಆಟಗಾರರು ಪರಸ್ಪರ ಮಾತಾಡಿಕೊಳ್ಳುವುದೂ ಇಲ್ಲ, ಆಟಗಾರರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದೆಲ್ಲ ಸುದ್ದಿಯಾಗಿದೆ. ಕರ್ಸ್ಟನ್ ಶಾಕಿಂಗ್ ಹೇಳಿಕೆ
ಕೋಚ್ ಗ್ಯಾರಿ ಕರ್ಸ್ಟನ್ ಕೂಡ ಈ ಕುರಿತು ಶಾಕಿಂಗ್ ಹೇಳಿಕೆ ನೀಡಿದ್ದಾರೆ. “ಪಾಕಿ ಸ್ಥಾನ ತಂಡದಲ್ಲಿ ಏಕತೆ ಇಲ್ಲ. ಆದರೂ ಇದನ್ನು ತಂಡ ವೆಂದು ಕರೆಯುತ್ತಾರೆ. ಆದರೆ ಇದು ಖಂಡಿತ ತಂಡವಲ್ಲ. ಆಟಗಾರರು ಎಡ-ಬಲದಂತೆ ಇದ್ದಾರೆ. ನಾನು ಅದಷ್ಟೋ ತಂಡಗಳೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಇಂಥ ಅನುಭವ ಎಲ್ಲೂ ಆಗಿಲ್ಲ’ ಎಂದಿದ್ದಾರೆ.