ಜಗತ್ತಿನ ಪ್ರಸಿದ್ಧ ಸಿನಿಮಾ ಉದ್ಯಮ ಹಾಲಿವುಡ್ ಪ್ರತಿವರ್ಷ ಕೊಡ ಮಾಡುವ ಆಸ್ಕರ್ ಪ್ರಶಸ್ತಿಗೆ ತುಂಬಾ ಮನ್ನಣೆ ಇದೆ. ಆಸ್ಕರ್ ಪ್ರಶಸ್ತಿ ಎಂದರೆ ಕತ್ತಿ ಹಿಡಿದ ಚಿನ್ನದ ಮನುಷ್ಯನ ಮೂರ್ತಿ. ಇದು ಚಿನ್ನದಿಂದ ಮಾಡಲ್ಪಟ್ಟಿರುವಂತೆ ಕಂಡರೂ ನಿಜವಾಗಿ ಅದು ಮೂಲತಃ ಬ್ರಾಂಝ್ ಲೋಹದಿಂದ ಮಾಡಲ್ಪಟ್ಟಿರುತ್ತದೆ. ಅದರ ಮೇಲೆ 24 ಕ್ಯಾರೆಟ್‌ನ ಚಿನ್ನದ ಲೇಪನವನ್ನು ನೀಡಿರುತ್ತಾರೆ. ಎರಡನೇ ವಿಶ್ವಮಹಾಯುದ್ಧದ ಸಮಯದಲ್ಲಿ ಅಮೆರಿಕ ಲೋಹದ ಅಭಾವವನ್ನು ಎದುರಿಸುತ್ತಿತ್ತು. ಹಾಗಾಗಿ ಅ ಸಂದರ್ಭದಲ್ಲಿ ಆಯೋಜಿಸಿದ ಆಸ್ಕರ್ ಸಮಾರಂಭದಲ್ಲಿ ವಿಜೇತ ಕಲಾವಿದ ಹಾಗೂ ತಂತ್ರಜ್ಞರಿಗೆ ಲೋಹಕ್ಕೆ ಬದಲಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಲ್ಪಟ್ಟ ವಿಗ್ರಹಗಳನ್ನು ನೀಡಲಾಗಿತ್ತು. ಅದಕ್ಕಿಂತ ವಿಚಿತ್ರವೆಂದರೆ ಎಡ್ಗರ್ ಬರ್ಗೆನ್ ಎಂಬ ಕಲಾವಿದನಿಗೆ ಮರದ ಆಸ್ಕರ್ ಪ್ರಶಸ್ತಿಯನ್ನು ನೀಡಿದ್ದು. ಮರದ ಆಸ್ಕರ್ ಪ್ರಶಸ್ತಿ ಪಡೆದ ಜಗತ್ತಿನ ಏಕೈಕ ವ್ಯಕ್ತಿ ಎಡ್ಗರ್. ವೆಂಟ್ರಿಲೋಕಿಸ್ಟ್- ಅಂದರೆ ಮರದ ಗೊಂಬೆಯನ್ನು ಹಿಡಿದು ಎರಡೆರಡು ದನಿಗಳಲ್ಲಿ ಮಾತನಾಡುತ್ತಿದ್ದ ಎಡ್ಗರ್ ಮತ್ತು ಆ ಗೊಂಬೆಗೆ ಸೇರಿಸಿ ಆಸ್ಕರ್ ಪ್ರಶಸ್ತಿ ಘೋಷಿಸಲಾಗಿತ್ತು. ಹೀಗಾಗಿ ಮರದ ಆಸ್ಕರ್‌ಅನ್ನು ಎಡ್ಗರ್ ಪಡೆದಿದ್ದರು.
ಹವನ