Advertisement

“ಖಾತ್ರಿ’ಅವ್ಯವಹಾರಕ್ಕೆ “ಕತ್ತರಿ’ಹಾಕಬಹುದೇ?

04:28 PM Apr 03, 2017 | |

ದೇಶದ ಬಡತನವನ್ನು ತೊಡೆಯುವ ಮಹತ್ವಾಕಾಂಕ್ಷೆಯ ಯೋಜನೆಯೇ ಕೇಂದ್ರ ಸರ್ಕಾರದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ. ಉತ್ತರ ಕರ್ನಾಟಕದಂತಹ ತೀರಾ ಹಿಂದುಳಿದ ಪ್ರದೇಶದ ಜನತೆ ಉದ್ಯೋಗಕ್ಕಾಗಿ ವಲಸೆ ಹೋಗಿ ಸಂಕಷ್ಟಕ್ಕೊಳಗಾಗುವುದನ್ನು ತಡೆಯುವುದು ಕೇಂದ್ರ ಸರ್ಕಾರದ ಅಭಿಲಾಷೆಯಾಗಿತ್ತು. ಕೊನೇಪಕ್ಷ ಅದು ಹಾಗೆಂದು ಕೊಂಡಿತ್ತು. ಈ ಬಾರಿ ಬಜೆಟ್‌ನಲ್ಲಿ ಉದ್ಯೋಗ ಖಾತ್ರಿಗಾಗಿ ಇಟ್ಟ ಹಣ ಬರೋಬ್ಬರಿ 48 ಸಾವಿರ ಕೋಟಿ.

Advertisement

ಪಂಚವಾರ್ಷಿಕ ಯೋಜನೆಗಳಂತೆ ದೇಶವನ್ನು ಅಭಿವೃದ್ಧಿ ಪಥದಲ್ಲಿ ನಡೆಸಬಹುದಾಗಿದ್ದ ಎನ್‌ಆರ್‌ಇಜಿ ಯಾನೆ ನರೇಗಾ ಯೋಜನೆ
ದೇಶದೊಳಗಿನ ಭ್ರಷ್ಟತೆಯನ್ನು ನಮ್ಮ ಮನೆಯಂಗಳಕ್ಕೆ ತಂದು ನಿಲ್ಲಿಸಿದೆ. ನಮ್ಮ ಗ್ರಾಮದ ರಸ್ತೆ, ಹಸಿರೀಕರಣ, ಕೆರೆ ಹೂಳು, ಕೃಷಿ ಕಾಮಗಾರಿ ಮಾಡಲು ನಾವೇ ಕೂಲಿಯಾಳುಗಳಾಗುತ್ತಿದ್ದೇವೆ. ಕುಟುಂಬದ 100 ಕೂಲಿ ದಿನಗಳ ನಂತರ ಮತ್ತೂಬ್ಬರ ಹೆಸರಿನಲ್ಲಿ ಕೆಲಸದ ಹಣ ಹೊಂದಾಣಿಕೆ ಮಾಡಿಕೊಳ್ಳುವುದು. ನಮ್ಮ ಮನೆಯ ಎದುರಿನ ರಸ್ತೆ ಕಾಮಗಾರಿಯಾದರೂ ಅದನ್ನು ಸಮರ್ಪಕವಾಗಿ ಮಾಡದೆ ಆಳು ಕೂಲಿಯತ್ತ ಮಾತ್ರ ಕಣ್ಣಿಡುವುದು ಕಣ್ಣಿಗೆ ರಾಚುತ್ತಿದೆ. ಜನಸಾಮಾನ್ಯ ಕೂಡ ಭ್ರಷ್ಟಾಚಾರಕ್ಕೆ ಇಳಿಯುವ ಇಂತಹ
ಸನ್ನಿವೇಶದಲ್ಲಿ ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳು ಹೆಚ್ಚು ಸುರಕ್ಷಿತ. ಅವರನ್ನು ಪ್ರಶ್ನಿಸಬೇಕಾದವನೇ ಪಾಪದ ಕೂಪದಲ್ಲಿರುತ್ತಾನಲ್ಲ?  ಖಾತ್ರಿ ಯೋಜನೆ ಕೃಷಿ ಕಾರ್ಮಿಕರ ಸಮಸ್ಯೆಯಲ್ಲಿರುವ ರೈತ ಹಿಡುವಳಿದಾರರನ್ನು ಬಾಣಲೆಯಿಂದ ಬೆಂಕಿಗೆ ದಬ್ಬಿರುವುದು ಈ ಯೋಜನೆಯ ಇನ್ನೊಂದು ಮುಖ. ಗ್ರಾಮ ಪಂಚಾಯಿತಿಗಳ ಕಪಿಮುಷ್ಟಿಯಲ್ಲಿರುವ ಈ ಯೋಜನೆಯ ನಿರ್ಧಾರಕ ಶಕ್ತಿ ಅಪಾಯದ ಕಂದಕವನ್ನೇ ತೆರೆದಿದೆ. ಮೊದಲ ಕೆಲ ವರ್ಷ ಯೋಜನೆಯ ನಿಯಮಗಳು ಕಠಿಣವಾಗಿದ್ದುದರಿಂದ ಯಾವುದೇ ಅವ್ಯವಹಾರ ನಡೆಯಲಿಲ್ಲ. 

ಹಾಗೆಂದುಕೊಂಡೆವು ನಾವು. ಇತ್ತೀಚೆಗೆ ಅದೂ ಸುಳ್ಳಾಗಿದೆ. ಅಧಿಕಾರಿ ವರ್ಗಕ್ಕೆ ಈ ಯೋಜನೆಯಲ್ಲಿ ಹಣ ಕೊಳ್ಳೆ ಹೊಡೆಯುವ ನೂರು
ದಾರಿಗಳು ಪತ್ತೆಯಾದವು. ಕೃಷಿ ಕಾರ್ಮಿಕರಿಗೆ ವಂಚಿಸುತ್ತಿರುವ ಪ್ರಕರಣಗಳ ಜೊತೆಜೊತೆಗೆ ಕೃಷಿ ಚಟುವಟಿಕೆಗಳನ್ನಷ್ಟೂ ನಮ್ಮ ದೇಶದ ರೈತ ನಿಲ್ಲಿಸುವ ಪರಿಸ್ಥಿತಿ ಬಂದರೆ ಅದು ಅತಿಶಯೋಕ್ತಿಯ ಸಂಗತಿಯಲ್ಲ. ಖಾತ್ರಿ ಯೋಜನೆಯಡಿ ನಡೆಯುವ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕುವುದರಿಂದ ನೇರ ಲಾಭ ಹಳ್ಳಿಗರಿಗೇ ಗಿಟ್ಟುತ್ತದೆ. ಉದಾಹರಣೆಗೆ ಹಸಿರೀಕರಣ ಯೋಜನೆ ಅಥವಾ ಕೆರೆ ಹೂಳು ತೆಗೆಯುವ ಕಾಮಗಾರಿ ಸಮರ್ಪಕವಾದರೆ ಕೃಷಿ ಬದುಕಿಗೆ ಪೂರಕ ಅನುಕೂಲಸಿಗುತ್ತದಲ್ಲವೇ? ದೂರಿಗೊಂದು ಬೆಳಕಿಂಡಿ! ಖಾತ್ರಿ ಭ್ರಷ್ಟಾಚಾರ ತಡೆಗೆ ಇರುವ ಪರಿಣಾಮಕಾರಿ ಮಾರ್ಗವೆಂದರೆ ಅಂತಜಾìಲದಲ್ಲಿ ನೇರವಾಗಿ ಉದ್ಯೋಗ ಖಾತ್ರಿ ವೆಬ್‌ಸೈಟ್‌ನ ಮೂಲಕ ದೂರು ದಾಖಲಿಸುವುದು. ಗ್ರಾಮ ಪಂಚಾಯಿತಿ ಅಥವಾ ತಾಲ್ಲೂಕು ಪಂಚಾಯಿತಿ ಹಂತದಲ್ಲಿ ದೂರು ದಾಖಲಿಸಲು ಹೊರಟಾಗ ವೈಯುಕ್ತಿಕ ಮುಜುಗರಗಳು ಬೇರೆ. ಜೊತೆಗೆ ದೂರು ಅರ್ಜಿ ಯಾರಿಗೆ ಕೊಡಬೇಕು ಎಂದು ಎಡತಾಕುವುದರಲ್ಲೇ ಸುಸ್ತಾಗುವ ನಾವು, ಕೊನೆಗೆ ನಮ್ಮ ದೂರಿನ ಗತಿಯೂ ತಿಳಿಯದೆ ಸುಮ್ಮನಾಗಬೇಕಾಗುತ್ತದೆ. ಆದರೆ 
ಆನ್‌ಲೈನ್‌ನಲ್ಲಿ ದೂರಿನ ಪ್ರಗತಿಯನ್ನು ಕೂಡ ಇಂಟರ್‌ನೆಟ್‌ನಲ್ಲಿ ಪರಿಶೀಲಿಸುತ್ತಿರಬಹುದು.

ದೂರನ್ನು ಕೇವಲ ಹಳ್ಳಿಯವರು, ಎನ್‌ಆರ್‌ಇಜಿ ಕೆಲಸಗಾರರು ಮಾತ್ರ ಕೊಡಬೇಕು ಎಂದುಕೊಳ್ಳುವುದೇ ಮೂರ್ಖತನ. ನಗರದ ಪಕ್ಕದ ಹಳ್ಳಿಯ ಕೆರೆ ಹೂಳೂ ತೆಗೆದು ಸಮೃದ್ಧವಾದರೆ ನಗರಕ್ಕೂ ಲಾಭವಾಗುತ್ತದೆ. ಕಾಡು ಬೆಳೆದರೆ ಮಳೆ ಬೆಳೆಯ ಅನುಕೂಲ ಪಟ್ಟಣವಾಸಿಗಳಿಗೂ ಆಗುತ್ತದೆ. ಭ್ರಷ್ಟಾಚಾರದ ವಿರುದ್ಧ ದೂರಲು ಹಳ್ಳಿಯಲ್ಲಿದ್ದವನಿಗೆ ಮ¤ತಾವುದೋ “ಬಿಢೆ’ ಕಾಡಬಹುದು. ಆದರೆ ನಗರದ ಪ್ರಜಾnವಂತ ನಾಗರಿಕ ಕೂಡ ದೂರು ಸಲ್ಲಿಸಿದರೆ ಸೂಕ್ತ. ಎನ್‌ಆರ್‌ಇಜಿ ಕುರಿತು ಎನ್‌ಜಿಓ ಮೇಲ್ಗಾವಲು ಅಪೇಕ್ಷಣೀಯ.

//nrega.nic.in  ಎಂಬ ಅಂಕಿತರುವ ವೆಬ್‌ಸೈಟ್‌ನೊಳಗೆ ಪ್ರವೇಶಿಸಬೇಕು. ಅಲ್ಲಿ ನಮ್ಮ ಎಡನೋಟಕ್ಕೆ ಸಾರ್ವಜನಿಕ ದೂರಗಳನ್ನು  ದಾಖಲಿಸುವ ಲಿಂಕ್‌ ಕಾಣಿಸುತ್ತದೆ. ಅಲ್ಲಿನ ರ್ಶೀಕೆಗೆ ಕ್ಲಿಕ್‌ ಮಾಡಿದರೆ ದೇಶದ ಎಲ್ಲ ರಾಜ್ಯಗಳ ಪಟ್ಟಿ ಪ್ರಕಟಗೊಳ್ಳುತ್ತದೆ. ಇಲ್ಲಿ ಕರ್ನಾಟಕ ಎಂಬಲ್ಲಿಗೆ ಪ್ರವೇಶಿಸಿದರೆ ದೂರು ದಾಖಲೆಗೆ ನಿಗದಿತ ಅರ್ಜಿ ನಮೂನೆ ಕಂಡುಬರುತ್ತದೆ. 
[//nregade2.nic.in/Netnrega/ redersal/redersal.aspx?eb=citizen&state_ code=15]  ಎಂಬ ತುಂಬಾ ಸರಳವಾಗಿರುವ ದೂರು ಪತ್ರವನ್ನು ಪರಿಪೂರ್ಣವಾಗಿ ತುಂಬಬೇಕು. ನಕ್ಷತ್ರದ ಗುರುತಿರುವ ಕಾಲಂಗೆ ಉತ್ತರಿಸುವುದು ಕಡ್ಡಾಯ. ದೂರುದಾರರ ವಿವರ, ದೂರಿನ ಮಾದರಿ, ದೂರುವ ಗ್ರಾಮ ಪಂಚಾಯಿತಿ, ಅವ್ಯವಹಾರದ ವಿವರ ಮೊದಲಾದ ವಿವರಗಳನ್ನು ಕೊಟ್ಟು  save complaint ಕೊಟ್ಟರೆ ದೂರು ದಾಖಲಾಗಿ ನಮಗೊಂದು ದೂರು ದಾಖಲಾತಿ ಸಂಖ್ಯೆ ಲಭ್ಯವಾಗುತ್ತದೆ. ದೂರು ದಾಖಲಿಸಿದ ಒಂದು ವಾರದ ಬಳಿಕ ಇದೇ ವೆಬ್‌ಸೈಟ್‌ನ ಚೆಕ್‌ ರಿಡ್ರೆಸಲ್‌ ಆಫ್ ಕಂಪ್ಲೆ„ಂಟ್‌ ಮೇಲೆ [//164.100.129.6/
netnrega/citizen_html/compdetail.aspx] ಗುರುತಿನ ಮೇಲೆ ಕ್ಲಿಕ್‌ ಮಾಡಿ ದೂರು ಸಂಖ್ಯೆಯನ್ನು ಹಾಕಿ ಮುಂದುವರೆದರೆ
ಅಹವಾಲಿನ ಸ್ಥಿತಿಗತಿಯ ಇತ್ತೀಚಿನ ಮಾಹಿತಿ ಸಿಗುತ್ತದೆ. ದೂರು ನೇರವಾಗಿ ಯೋಜನೆಯ ಪ್ರಮುಖರನ್ನೇ ತಲುಪುವುದರಿಂದ ಪರಿಣಾಮಕಾರಿ ತನಿಖೆಯನ್ನು ನಿರೀಕ್ಷಿಸಲು ಸಾಧ್ಯ. ಇ-ದೂರಿನ ಕಾರಣವೇ ಅವ್ಯವಹಾರ ನಡೆಸಿದ ಅಧಿಕಾರಿಗಳು ಕರ್ನಾಟಕದಲ್ಲೂ ಅಮಾನತ್ತುಗೊಂಡ ವಿವರಗಳನ್ನು ನಾವಿಲ್ಲಿ ಕಾಣಬಹುದು. ಅಷ್ಟೇ ಅಲ್ಲ, ಗ್ರಾಮ ಪಂಚಾಯಿತಿಗೆ ಹೋಗಿ ಕಷ್ಟಪಟ್ಟು ತಿಳಿಯಬಹುದಾದ ಮಾಹಿತಿಗಳೆಲ್ಲ ಇಲ್ಲಿ ಸುಲಭ ಲಭ್ಯ. ಜಾಬ್‌ ಕಾರ್ಡ್‌ ನೋಂದಾಯಿತವಾಗಿದೆಯೇ, ಕೊಟ್ಟ ಕ್ರಿಯಾಯೋಜನೆ ಮಂಜೂರಾಗಿದೆಯೇ, ಕಾಮಗಾರಿಗೆ ಬರಬೇಕಾದ ಹಣವನ್ನು ದಾಖಲೆಯಲ್ಲಿ ಏನು ಮಾಡಲಾಗಿದೆ ಎಂಬ ಮೂಡಬಹುದಾದ ಎಲ್ಲ ಪ್ರಶ್ನೆಗಳಿಗೆ ಮಾಹಿತಿಯನ್ನು ಇಲ್ಲಿ ಅಳವಡಿಸಲಾಗಿದೆ.

Advertisement

ತೀರಾ ಸರಳವಾದ ಇಂಗ್ಲೀಷ್‌ ಬರುವವರಿಗೂ ದೂರು ದಾಖಲಿಸುವುದು ಕಷ್ಟವಲ್ಲ. ಮಾಹಿತಿ ಪಡೆಯಲಂತೂ ನಾವು “ಕನ್ನಡ’ವನ್ನೆ
ಆಯ್ಕೆ ಮಾಡಿಕೊಳ್ಳಬಹುದು. ವಿವರಗಳು ಆಗ ಬೇಕಾದ ಪ್ರಾದೇಶಿಕ ಭಾಷೆಯಲ್ಲಿ ಕಂಡುಬರುತ್ತದೆ. ಪ್ರತಿದಿನ ವೆಬ್‌ಸೈಟ್‌ ನವೀಕರಣಗೊಳ್ಳುತ್ತಲೇ ಇರುವುದರಿಂದ ಮಾಹಿತಿ ತಾಜಾ ಆಗಿಯೂ ಇರುತ್ತದೆ. ಪಂಚಮಿತ್ರ ಎಂಬ ಸ್ನೇತ! ರೈತ ಸಮೂಹದ ಅತಿ ದೊಡ್ಡ ಹಿನ್ನಡೆಯೆಂದರೆ ಮಾಹಿತಿ ಕೊರತೆ. ತಾವು ಬೆಳೆದ ಬೆಳೆಯ ಮಾರುಕಟ್ಟೆ ದರ ಗೊತ್ತಿಲ್ಲದೆ ಬೇಕಾಬಿಟ್ಟಿ ಮೊತ್ತಕ್ಕೆ
ಮಾರಿಬಿಡುವುದುಂಟು. ಸಂವಹನದ ಅಲಭ್ಯತೆಯಿಂದಾಗಿ ಇನ್ನಿಲ್ಲದ ಬೆಲೆ ಕೊಟ್ಟು ಖರೀದಿಸುವ ಅನಿವಾರ್ಯತೆಗೆ ಸಿಕ್ಕಿರಬಹುದು. ಈ ನಡುವೆ ಸರ್ಕಾರಗಳು ರೈತ ಸಮುದಾಯಕ್ಕೆಂದು ವಿವಿಧ ಯೋಜನೆಗಳನ್ನು, ಸಹಾಯಗಳನ್ನು ಘೋಸಿದರೂ ಅದು ಅಸಲಿ ರೈತರಿಗೆ ತಲುಪದ ಹತ್ತು ಹಲವು ಉದಾಹರಣೆಗಳನ್ನು ನೋಡುತ್ತಿದ್ದೇವೆ. ಇದು ಕೂಗಳತೆಯ ದೂರದ ಸ್ಥಳೀಯ ಗ್ರಾಮ ಪಂಚಾಯಿತಿ
ಆಡಳಿತಕ್ಕೂ ಅನ್ವಯ. ಇಂದು ಪಂಚಾಯಿತಿಗಳಲ್ಲಿ ಏನಾಗುತ್ತಿದೆ ಎಂಬ ಅರಿವು ದೊರಕದೆ ರೈತರು ಕಂಗಲಾಗಬೇಕಾಗಿದೆ. ಅಲ್ಲಿಗೆ ಹೋಗಿ ವಿಚಾರಿಸಿದರೆ ಸರಿಯಾದ ಮಾಹಿತಿ ಸಿಕ್ಕದಿರುವ ಸಂಭಾವ್ಯತೆಯೇ ಜಾಸ್ತಿ. ಮಾಹಿತಿ ಹಕ್ಕು ಬಳಸುವ ಪ್ರಕ್ರಿಯೆ ತುಸು ದುಬಾರಿ, ಚೂರು ವಿಳಂಬ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಆರಂಭಿಸಿರುವ ಒಂದು ವೆಬ್‌ಸೈಟ್‌ ಹಲವು ಸಮಸ್ಯೆಗಳಿಗೆ ಉತ್ತರವಾಗಬಲ್ಲದು.

“ಪಂಚ ತಂತ್ರ’ ಎಂಬ ವೆಬ್‌ಸೈಟ್‌ (ವಿಳಾಸ &// panchamitra.kar.nic.in/ ) ಗ್ರಾಮ ಪಂಚಾಯಿತಿ ಆಡಳಿತದ ಪರಿಪೂರ್ಣ ಮಾಹಿತಿಯನ್ನು ಒಂದೆಡೆ ತಿಳಿಸುತ್ತದೆ. ಕನ್ನಡ ಭಾಷೆಯಲ್ಲಿಯೇ ವಿವರಗಳು ಸಿಗುವುದರಿಂದ ಭಾಷಾ ತೊಡಕಿಲ್ಲ. ಇದರಲ್ಲಿ
ನಾವು ಕರ್ನಾಟಕದ ನಕ್ಷೆಯಲ್ಲಿ ನಮ್ಮ ಜಿಲ್ಲೆ, ತಾಲೂಕುಗಳನ್ನು ಗುರುತಿಸಿ ನಮ್ಮ ಗ್ರಾಮ ಪಂಚಾಯಿತಿಯ ಭಾಗವನ್ನು ತಲುಪಬೇಕಿರುವುದರಿಂದ ಹುಡುಕುವುದು ಸುಲಭ. ಟೈಪಿಸಿದ ಅಕ್ಷರಗಳ ವ್ಯತ್ಯಾಸದಿಂದ ತಪ್ಪಾಗುತ್ತದೆ ಎಂಬ ಗೋಜಲಿಲ್ಲ.
ಏನಿದೆ ವೆಬ್‌ಸೈಟ್‌ನಲ್ಲಿ ಎನ್ನುವುದಕ್ಕಿಂತ ಏನಿಲ್ಲ ಎಂದು ಕೇಳುವುದೇ ಕ್ಷೇಮ! ಹಾಲಿ ಸದಸ್ಯರ ಕುರಿತಂತೆ ಒಂದು ಫೋರ್ಟಲ್‌ ಇದೆ. ಉಳಿದ ಮಾಹಿತಿಗಳ ಜೊತೆಗೆ ಅವರ ಸಂಪರ್ಕ ವಿಳಾಸ, ಫೋನ್‌ ವಿವರ ಇದ್ದರೆ ಚೆನ್ನಿತ್ತು. ಆದರೆ ಈ ಕೊರತೆ ಗ್ರಾಪಂ ಅಧಿಕಾರಿಗಳ ಕುರಿತ ಮಾಹಿತಿಯಲ್ಲಿಲ್ಲ. ಹಾಗೆಯೇ ಗ್ರಾಪಂನ ಕಚೇರಿ ವಿಳಾಸ, ದೂರವಾಣಿ ಸಂಖ್ಯೆಗಳೂ ಇಲ್ಲಿ ಲಭ್ಯ. ಗ್ರಾಮ ಪಂಚಾಯ್ತಿ ನೀಡುವ ಸೇವೆಗಳು, ನಡೆಸಲು ಉದ್ದೇಶಿಸಿದ ಯೋಜನೆಗಳು, ಬಿಪಿಎಲ್‌ – ಎಪಿಎಲ್‌ ಕಾರ್ಡ್‌ ಮಾಹಿತಿ, ಕರೆದಿರುವ ಟೆಂಡರ್‌, ಪಂಚಾಯ್ತಿಯ ಪ್ರಸ್ತುತದ ಬ್ಯಾಲೆನ್ಸ್‌ ಶೀಟ್‌ಗಳನ್ನೆಲ್ಲ ಕ್ಲಿಕ್ಕಿಸಿ ಓದಬಹುದು. ಇವೆಲ್ಲಕ್ಕಿಂತ ಮುಖ್ಯವಾಗಿ, ರೈತರಿಗೇ ಬೇಕಾದುದು ಹಲವಾರಿವೆ. ನೀವೊಂದು ಅರ್ಜಿ ಸಲ್ಲಿಸಿರುತ್ತೀರಿ. ಅದು ಮನೆ ಕಟ್ಟುವುದಿರಬಹುದು, ಪುಟ್ಟ ಅಂಗಡಿ ಮಾಡಲಿರುವುದಿರಬಹುದು ಅಥವಾ 
ಇನ್ನಾವುದೋ ಕಾರಣ ಎಂದಿಟ್ಟುಕೊಳ್ಳಿ. ಇದರ ಮಾಹಿತಿ, ಪ್ರಗತಿ ವಿವರ ಇಲ್ಲಿ ಗಿಟ್ಟುತ್ತದೆ. ಅರ್ಜಿಯ ಸ್ಥಿತಿ ಎಂಬ ಫ‌ಲಕದ ಮೇಲೆ ಕ್ಲಿಕ್‌ ಮಾಡಿದರೆ ಮಾಹಿತಿ ತೆರೆದುಕೊಳ್ಳುತ್ತದೆ. 

ಹಾಗೆಯೇ ಗ್ರಾಮ ಪಂಚಾಯಿತಿ ಸದಸ್ಯರ ಸಭೆಗಳಲ್ಲಿ ಆದ ಹಲವು ನಿರ್ಣಯಗಳು ರೈತನ ಹಿತಕ್ಕೆ ಧಕ್ಕೆ ತರುವಂತಹ ಅಪಾಯಗಳಿರುತ್ತವೆ. ಆ ಮಾಹಿತಿಯೂ ಇಲ್ಲಿ ದಾಖಲಾಗಿರುವುದರಿಂದ ಸಭೆಯ ನಿರ್ಣಯಗಳನ್ನು ನಾವೂ ಪರಿಶೀಲಿಸಲು ಸಾಧ್ಯ. ಸಭಾ ನಡವಳಿಕೆ ಎಂಬ ಶೀರ್ಷಿಕೆಯಡಿ ಇವನ್ನು ಒಂದೆಡೆ ಸಂಗ್ರಹಿಸಲಾಗಿರುತ್ತದೆ. ಅಗತ್ಯರುವುದನ್ನು ವಿಸ್ತರಿಸಿ ಓದಿಕೊಳ್ಳಬಹುದು. ಹಾಗೆಯೇ ಕಾಮಗಾರಿಗಳ ಪ್ರಗತಿ, ಫ‌ಲಾನುಭವಿಗಳ ಪಟ್ಟಿ, ನಾವು ಕಟ್ಟಿರುವ ಹಾಗೂ ಕಟ್ಟಬೇಕಿರುವ ಆಸ್ತಿ ತೆರಿಗೆಗಳ ಲೆಕ್ಕವೂ ಇಲ್ಲಿ ಅಡಕವಾಗಿರುತ್ತದೆ. ಪಂಚಾಯಿತಿ ಕಚೇರಿಗೆ ಅಲೆದು, ವಿವರ ಪಡೆಯುವುದಕ್ಕಿಂತ ಅಂತಜಾìಲದಲ್ಲಿ ಅಂಕಿಅಂಶ ಪಡೆಯುವುದು
ಸುಲಭದ ಕೆಲಸ. ಈ ಅಂತಜಾìಲದ ಪುಟ ತೆರೆದರೆ ಕೆಲಮಟ್ಟಿನ ನಿರಾಶೆಯೇ ಕಾಡುತ್ತದೆ. ಈ ಪ್ರಯತ್ನದಲ್ಲಿ ಇನ್ನೂ ಅಷ್ಟು ಮಾಹಿತಿಯನ್ನು ಉಣಿಸಲಾಗಿಲ್ಲ. 

ತಾವು ಬೆಳೆದ ಬೆಳೆಯ ಮಾರುಕಟ್ಟೆ ದರ ಗೊತ್ತಿಲ್ಲದೆ ಬೇಕಾಬಿಟ್ಟಿ ಮೊತ್ತಕ್ಕೆ ಮಾರಿಬಿಡುವುದುಂಟು. ಸಂವಹನದ ಅಲಭ್ಯತೆಯಿಂದಾಗಿ ಇನ್ನಿಲ್ಲದ ಬೆಲೆ ಕೊಟ್ಟು ಖರೀದಿಸುವ ಅನಿವಾರ್ಯತೆಗೆ ಸಿಕ್ಕಿರಬಹುದು. ಈ ನಡುವೆ ಸರ್ಕಾರಗಳು ರೈತ ಸಮುದಾಯಕ್ಕೆಂದು ವಿವಿಧ ಯೋಜನೆಗಳನ್ನು, ಸಹಾಯಗಳನ್ನು ಘೋಸಿದರೂ ಅದು ಅಸಲಿ ರೈತರಿಗೆ ತಲುಪದ ಹತ್ತು ಹಲವು ಉದಾಹರಣೆಗಳನ್ನು ನೋಡುತ್ತಿದ್ದೇವೆ. ಇದು ಕೂಗಳತೆಯ ದೂರದ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತಕ್ಕೂ ಅನ್ವಯ. ಇಂದು ಪಂಚಾಯಿತಿಗಳಲ್ಲಿ ಏನಾಗುತ್ತಿದೆ ಎಂಬ ಅರಿವು ದೊರಕದೆ ರೈತರು ಕಂಗಲಾಗಬೇಕಾಗಿದೆ. ಅಲ್ಲಿಗೆ ಹೋಗಿ ವಿಚಾರಿಸಿದರೆ ಸರಿಯಾದ ಮಾಹಿತಿ ಸಿಕ್ಕದಿರುವ ಸಂಭಾವ್ಯತೆಯೇ ಜಾಸ್ತಿ. ಮಾಹಿತಿ ಹಕ್ಕು ಬಳಸುವ ಪ್ರಕ್ರಿಯೆ ತುಸು ದುಬಾರಿ, ಚೂರು ವಿಳಂಬ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಆರಂಭಿಸಿರುವ ಒಂದು ವೆಬ್‌ಸೈಟ್‌ ಹಲವು ಸಮಸ್ಯೆಗಳಿಗೆ ಉತ್ತರವಾಗಬಲ್ಲದು.

“ಪಂಚ ತಂತ್ರ’ ಎಂಬ ವೆಬ್‌ಸೈಟ್‌ (ವಿಳಾಸ (&// panchamitra.kar.nic.in/ ) ಗ್ರಾಮ ಪಂಚಾಯಿತಿ ಆಡಳಿತದ ಪರಿಪೂರ್ಣ ಮಾಹಿತಿಯನ್ನು ಒಂದೆಡೆ ತಿಳಿಸುತ್ತದೆ. ಕನ್ನಡ ಭಾಷೆಯಲ್ಲಿಯೇ ವಿವರಗಳು ಸಿಗುವುದರಿಂದ ಭಾಷಾ ತೊಡಕಿಲ್ಲ. ಇದರಲ್ಲಿ
ನಾವು ಕರ್ನಾಟಕದ ನಕ್ಷೆಯಲ್ಲಿ ನಮ್ಮ ಜಿಲ್ಲೆ, ತಾಲೂಕುಗಳನ್ನು ಗುರುತಿಸಿ ನಮ್ಮ ಗ್ರಾಮ ಪಂಚಾಯಿತಿಯ ಭಾಗವನ್ನು ತಲುಪಬೇಕಿರುವುದರಿಂದ ಹುಡುಕುವುದು ಸುಲಭ. ಟೈಪಿಸಿದ ಅಕ್ಷರಗಳ ವ್ಯತ್ಯಾಸದಿಂದ ತಪ್ಪಾಗುತ್ತದೆ ಎಂಬ ಗೋಜಲಿಲ್ಲ.
ಏನಿದೆ ವೆಬ್‌ಸೈಟ್‌ನಲ್ಲಿ ಎನ್ನುವುದಕ್ಕಿಂತ ಏನಿಲ್ಲ ಎಂದು ಕೇಳುವುದೇ ಕ್ಷೇಮ! ಹಾಲಿ ಸದಸ್ಯರ ಕುರಿತಂತೆ ಒಂದು ಫೋರ್ಟಲ್‌ ಇದೆ. ಉಳಿದ ಮಾಹಿತಿಗಳ ಜೊತೆಗೆ ಅವರ ಸಂಪರ್ಕ ವಿಳಾಸ, ಫೋನ್‌ ವಿವರ ಇದ್ದರೆ ಚೆನ್ನಿತ್ತು. ಆದರೆ ಈ ಕೊರತೆ ಗ್ರಾಪಂ ಅಧಿಕಾರಿಗಳ ಕುರಿತ ಮಾಹಿತಿಯಲ್ಲಿಲ್ಲ. ಹಾಗೆಯೇ ಗ್ರಾಪಂನ ಕಚೇರಿ ವಿಳಾಸ, ದೂರವಾಣಿ ಸಂಖ್ಯೆಗಳೂ ಇಲ್ಲಿ ಲಭ್ಯ.

ಗ್ರಾಮ ಪಂಚಾಯ್ತಿ ನೀಡುವ ಸೇವೆಗಳು, ನಡೆಸಲು ಉದ್ದೇಶಿಸಿದ ಯೋಜನೆಗಳು, ಬಿಪಿಎಲ್‌ – ಎಪಿಎಲ್‌ ಕಾರ್ಡ್‌ ಮಾಹಿತಿ, ಕರೆದಿರುವ ಟೆಂಡರ್‌, ಪಂಚಾಯ್ತಿಯ ಪ್ರಸ್ತುತದ ಬ್ಯಾಲೆನ್ಸ್‌ ಶೀಟ್‌ಗಳನ್ನೆಲ್ಲ ಕ್ಲಿಕ್ಕಿಸಿ ಓದಬಹುದು. ಇವೆಲ್ಲಕ್ಕಿಂತ ಮುಖ್ಯವಾಗಿ, ರೈತರಿಗೇ ಬೇಕಾದುದು ಹಲವಾರಿವೆ. ನೀವೊಂದು ಅರ್ಜಿ ಸಲ್ಲಿಸಿರುತ್ತೀರಿ. ಅದು ಮನೆ ಕಟ್ಟುವುದಿರಬಹುದು, ಪುಟ್ಟ ಅಂಗಡಿ ಮಾಡಲಿರುವುದಿರಬಹುದು ಅಥವಾ ಇನ್ನಾವುದೋ ಕಾರಣ ಎಂದಿಟ್ಟುಕೊಳ್ಳಿ. ಇದರ ಮಾಹಿತಿ, ಪ್ರಗತಿ ವಿವರ ಇಲ್ಲಿ ಗಿಟ್ಟುತ್ತದೆ. ಅರ್ಜಿಯ ಸ್ಥಿತಿ ಎಂಬ ಫ‌ಲಕದ ಮೇಲೆ ಕ್ಲಿಕ್‌ ಮಾಡಿದರೆ ಮಾಹಿತಿ ತೆರೆದುಕೊಳ್ಳುತ್ತದೆ. ಹಾಗೆಯೇ ಗ್ರಾಮ ಪಂಚಾಯಿತಿ ಸದಸ್ಯರ ಸಭೆಗಳಲ್ಲಿ ಆದ ಹಲವು ನಿರ್ಣಯಗಳು ರೈತನ ಹಿತಕ್ಕೆ ಧಕ್ಕೆ ತರುವಂತಹ ಅಪಾಯಗಳಿರುತ್ತವೆ. ಆ ಮಾಹಿತಿಯೂ ಇಲ್ಲಿ ದಾಖಲಾಗಿರುವುದರಿಂದ ಸಭೆಯ ನಿರ್ಣಯಗಳನ್ನು ನಾವೂ ಪರಿಶೀಲಿಸಲು ಸಾಧ್ಯ. ಸಭಾ ನಡವಳಿಕೆ ಎಂಬ ಶೀರ್ಷಿಕೆಯಡಿ 
ಇವನ್ನು ಒಂದೆಡೆ ಸಂಗ್ರಹಿಸಲಾಗಿರುತ್ತದೆ. ಅಗತ್ಯರುವುದನ್ನು ವಿಸ್ತರಿಸಿ ಓದಿಕೊಳ್ಳಬಹುದು. ಹಾಗೆಯೇ ಕಾಮಗಾರಿಗಳ ಪ್ರಗತಿ, ಫ‌ಲಾನುಭವಿಗಳ ಪಟ್ಟಿ, ನಾವು ಕಟ್ಟಿರುವ ಹಾಗೂ ಕಟ್ಟಬೇಕಿರುವ ಆಸ್ತಿ ತೆರಿಗೆಗಳ ಲೆಕ್ಕವೂ ಇಲ್ಲಿ ಅಡಕವಾಗಿರುತ್ತದೆ. ಪಂಚಾಯಿತಿ ಕಚೇರಿಗೆ ಅಲೆದು, ವಿವರ ಪಡೆಯುವುದಕ್ಕಿಂತ ಅಂತಜಾìಲದಲ್ಲಿ ಅಂಕಿಅಂಶ ಪಡೆಯುವುದು ಸುಲಭದ ಕೆಲಸ. ಈ ಅಂತಜಾìಲದ ಪುಟ ತೆರೆದರೆ ಕೆಲಮಟ್ಟಿನ ನಿರಾಶೆಯೇ ಕಾಡುತ್ತದೆ. ಈ ಪ್ರಯತ್ನದಲ್ಲಿ ಇನ್ನೂ ಅಷ್ಟು ಮಾಹಿತಿಯನ್ನು ಉಣಿಸಲಾಗಿಲ್ಲ.  

ರೈತ ಕೂಡ “ಸಾಫ್ಟ್’ ಆಗಲಿ!
ಪ್ರಶ್ನೆ ಅದಲ್ಲ. ರೈತನನ್ನು ವೆಬ್‌ಸೈಟ್‌ ಪರಿಹಾರಕ್ಕೆ ಸೂಚಿಸಿದರೆ ಅದು ಕಾರ್ಯಸಾಧುವೇ? ಇದಕ್ಕೆ ಖಂಡಿತ ಎಂಬ ಉತ್ತರವನ್ನೇ
ಕೊಡಬೇಕಾಗುತ್ತದೆ. ಖುದ್ದು ರೈತನಿಗೆ ಆ ಜಾnನ ಇಲ್ಲವೆಂದಾದಲ್ಲಿ ಸಹ ಗೊಂದಲ ಬೇಕಾಗಿಲ್ಲ. ಈ ದಿನಗಳಲ್ಲಿ ಆತನ ಮಕ್ಕಳು, ಮೊಮ್ಮಕ್ಕಳು ಅಕ್ಷರಸ್ಥರಾಗಿರುವುದು ಅಥವಾ ಉದ್ಯೋಗಸ್ಥರಾಗಿರುವುದು ಖಚಿತ. ಅವರನ್ನು ಈ ಕೆಲಸಕ್ಕೆ ನಿರ್ದೇಶಿಸಬಹುದು. ಕೊನೆಪಕ್ಷ ಸೈಬರ್‌ ಕೆಫೆಯ ನಿರ್ವಾಹಕನ ಬೆಂಬಲದಿಂದ ಕೂಡ ರೈತ ದೂರು ದಾಖಲೆ, ಮಾಹಿತಿ ಪಡೆಯುವ ಕೆಲಸ ಮಾಡಬಹುದು. ಕಾಲದ ಓಟದಲ್ಲಿ ಅದರೊಂದಿಗೆ ಹೆಜ್ಜೆ ಹಾಕಲೇಬೇಕಲ್ಲವೇ? ವಾಸ್ತವವಾಗಿ, ರೈತ ಸಂಘಟನೆಗಳು ಈ ನಿಟ್ಟಿನಲ್ಲಿಯೇ ಸಂಪೂರ್ಣವಾಗಿ ವಿಫ‌ಲವಾಗಿವೆ. ಇನ್ನೂ ಕರ ನಿರಾಕರಣೆ, ಪಂಪ್‌ ಮೀಟರ್‌ ಕಿತ್ತು ಎಸೆಯುವ ಚಳವಳಿಯನ್ನೇ ಮಾಡುತ್ತ ಕುಳಿತರೆ ಅಥವಾ ಅದೊಂದನ್ನೇ ನೆಚ್ಚಿಕೊಂಡರೆ ರೈತಪರ ಇದ್ದಂತಾಗುವುದಿಲ್ಲ.  
ಖಾತ್ರಿ ಭ್ರಷ್ಟಾಚಾರ ತಡೆಗೆ ಓರ್ವ ಕಂಪ್ಯೂಟರ್‌ ಅಕ್ಷರಸ್ಥನನ್ನು

ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಆಯ್ಕೆ ಮಾಡಿಕೊಂಡು ರೈತಸಂಘಟನೆಗಳು ಈ ನಿಟ್ಟಿನಲ್ಲಿ ಹೋರಾಟ
ಮಾಡಬಹುದಿತ್ತು. ಸರ್ಕಾರ ರೈತರಿಗಾಗಿ ಹತ್ತಾರು ಯೋಜನೆಗಳನ್ನು
ಜಾರಿಗೆ ತರುತ್ತಿದೆ. ಅವುಗಳ ಪ್ರಾಮಾಣಿಕ ಜಾರಿಗೆ ಈ ಸಂಘಟನೆಗಳು
ಕಟಿಬದ್ಧರಾಗಬಹುದಿತ್ತು. ಸುಜಲಾ, ಜಲಸಂವರ್ಧನ ಮೊದಲಾದ
ಯೋಜನೆಗಳಲ್ಲಿ ಇಲಾಖೆಯವರು ಮೇಯುವುದನ್ನು ತಪ್ಪಿಸಿದ್ದರೂ
ಸಾಕಿತ್ತು, ಗ್ರಾಮ ಅಭಿವೃದ್ಧಿ ಸಾಧ್ಯವಿತ್ತು. ರೈತರಿಗೆ ಬರಬೇಕಾದ
ಸಹಾಯಧನ, ಬೆಂಬಲ ಬೆಲೆ ಪೂರ್ಣವಾಗಿ ಸಿಕ್ಕುವಂತೆ ಮಾಡಿದ್ದರೆ
ಸಾಕಿತ್ತು. ಯಶಸ್ವಿ ಕಾರ್ಯಾಚರಣೆ ಮಾಡಬಹುದಾದ ಇಂತಹ
ಹತ್ತಾರು ದೃಷ್ಟಾಂತಗಳನ್ನು ಕೊಡಬಹುದು.

ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next