Advertisement

ಅಂಗವಿಕಲರಿಗೆ ಅನುಕಂಪ ಬೇಡ ಅವಕಾಶ ನೀಡಿ

02:37 PM Jun 01, 2019 | Suhan S |

ಯಲಬುರ್ಗಾ: ಅಂಗವಿಕಲರಿಗಾಗಿ ಸರಕಾರ ಅನೇಕ ಸೌಲಭ್ಯ ನೀಡುತ್ತಿದ್ದು, ಅವುಗಳ ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ತಾಪಂ ಇಒ ಲಕ್ಷ್ಮೀಪತಿ ಹೇಳಿದರು.

Advertisement

ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಶುಕ್ರವಾರ 2019-20ನೇ ಸಾಲಿನ ತಾಪಂ ಅನುದಾನದಲ್ಲಿ ಹಾಗೂ ಅಂಗವಿಕಲರ ಶೇ. 3ರ ಅನುದಾನದಲ್ಲಿ ಉಚಿತ ತ್ರಿಚಕ್ರ ವಾಹನ ವಿತರಿಸಿ ಅವರು ಮಾತನಾಡಿದರು. ಅಂಗವಿಕಲರಲ್ಲೂ ಪ್ರತಿಭಾವಂತರಿದ್ದಾರೆ. ಆದರೆ ಅವರ ಪ್ರತಿಭೆಗಳನ್ನು ಗುರುತಿಸುವ ಕಾರ್ಯವಾಗಬೇಕಿದೆ. ವಿಕಲಚೇತರನ್ನು ನೋಡಿ ಅನುಕಂಪ ತೋರಿಸುವ ಬದಲು ಸೂಕ್ತ ಅವಕಾಶ ಕಲ್ಪಿಸಿಕೊಡುವ ವ್ಯವಸ್ಥೆಯಾಗಬೇಕು ಎಂದರು.

ಸಮಾಜದಲ್ಲಿ ಸಮಾನ ನಾಗರಿಕ ಹಕ್ಕುಗಳನ್ನು ವಿಕಲಚೇತನರಿಗೂ ನೀಡಿದಾಗ ಮಾತ್ರ ಸಮನ್ವಯತೆ ಹಾಗೂ ಸಹಬಾಳ್ವೆ ಕಾಣಬಹುದಾಗಿದೆ. ಇವೆಲ್ಲವುಗಳ ಸ್ಪಷ್ಟ ಪರಿಕಲ್ಪನೆ ಮೂಡಿದಾಗ ಮಾತ್ರ ದೇಶ ಸವಾಂರ್ಗೀಣ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.

ವಿಕಲಚೇತನರು ಯಾವುದೇ ಸಂದರ್ಭದಲ್ಲೂ ತಮ್ಮ ಆತ್ಮಸ್ಥೈರ್ಯ ಕಳೆದುಕೊಳ್ಳದೇ ಜೀವನದಲ್ಲಿ ಸಾಧನೆಯ ಪಥದತ್ತ ಸಾಗಬೇಕು. ಜೀವನದಲ್ಲಿ ನಿರ್ಧಿಷ್ಟ ಗುರಿಹೊಂದಿರಬೇಕು. ಅದನ್ನು ಸಾಧಿಸುವ ಛಲವಿರಬೇಕು. ವಿಶ್ವಾಸ ಕಳೆದುಕೊಳ್ಳದೇ ಸಮಾಜದಲ್ಲಿ ಸಾಧನೆ ಮಾಡಲು ಸಾಧ್ಯ. ಇದಕ್ಕೆ ನೂರಾರು ಉದಾಹರಣೆಗಳಿವೆ ಎಂದರು.

ಒಟ್ಟು 7 ತ್ರಿಚಕ್ರವಾಹನಗಳನ್ನು ವಿತರಿಸಲಾಗಿದೆ. ಕಡ್ಡಾಯವಾಗಿ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳಿ. ವಾಹನವನ್ನು ನಿವೇ ಬಳಕೆ ಮಾಡಿಕೊಳ್ಳಿ ಬೇರೆಯವರಿಗೆ ಕೊಡಬೇಡಿ ಎಂದರು.

Advertisement

ತಾಪಂ ಅಧ್ಯಕ್ಷೆ ಲಕ್ಷ್ಮೀ ಗೌಡ್ರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯರಾದ ಶಿವುಕುಮಾರ ಆದಾಪೂರ, ಗವಿಸಿದ್ದಪ್ಪ ಜಂತ್ಲಿ, ಶರಣಪ್ಪ ಈಳಿಗೇರ, ಮುಖಂಡರಾದ ಮುದಕಪ್ಪ ಗೊಲ್ಲರ, ಹಿರೇಹನುಮಂತಪ್ಪ ಭಾವಿಕಟ್ಟಿ, ಕೊಟ್ರಪ್ಪ ತೋಟದ, ಸಂತೋಷ ಬೆಣಕಲ್, ಶಿವಪುತ್ರಪ್ಪ ತಿಪ್ಪನಾಳ, ಶೇಖಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next