ಹೊಸದಿಲ್ಲಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈ ಬಾರಿ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳಲು ಬಯಸಿರುವುದಾಗಿ ಪ್ರಕಟಗೊಂಡಿರುವ ವರದಿಯ ಹಿನ್ನೆಲೆಯಲ್ಲಿ ವಿದೇಶ ವ್ಯವಹಾರಗಳ ಸಚಿವಾಲಯ, “ಈ ಬಗ್ಗೆ ರಾಹುಲ್ ಅವರಿಂದ ನಮಗೇನೂ ಅಧಿಕೃತ ಕೋರಿಕೆ ಸಿಕ್ಕಿಲ್ಲ’ ಎಂದು ಹೇಳಿದೆ.
ಚೀನ ಗಣರಾಜ್ಯದ ಟಿಬೆಟ್ ಸ್ವಾಯತ್ತ ಪ್ರದೇಶಕ್ಕೆ ಭೇಟಿ ನೀಡುವ ಬಗ್ಗೆ ನಮಗೆ ರಾಹುಲ್ ಗಾಂಧಿ ಅವರಿಂದ ಈ ತನಕ ಯಾವುದೇ ಅಧಿಕೃತ ಕೋರಿಕೆ ಪತ್ರ ಬಂದಿಲ್ಲ ಎಂದು ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಮಾದ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.
ಕರ್ನಾಟಕ ವಿಧಾನಸಭಾ ಚುನಾವಣೆಗಳ ಬಳಿಕ ರಾಹುಲ್ ಗಾಂಧಿ ಮಾನಸ ಸರೋವರ ಯಾತ್ರೆ ಕೈಗೊಳ್ಳಲು ಬಯಸಿರುವುದಾಗಿ ವರದಿಯಾಗಿತ್ತು.
ಇದಕ್ಕೂ ಮುನ್ನ ಈ ವರ್ಷ ಎಪ್ರಿಲ್ 29ರಂದು ದಿಲ್ಲಿಯ ರಾಮಲೀಲಾ ಮೈದಾನಿನಲ್ಲಿ ನಡೆದಿದ್ದ ಜನ ಆಕ್ರೋ ರಾಲಿಯ ಸಂದರ್ಭದಲ್ಲಿ ರಾಹುಲ್, ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದರು.
Related Articles
ಈ ವರ್ಷ ಮಾನಸ ಸರೋವರ ಯಾತ್ರೆಯನ್ನು ಜೂನ್ 8ರಿಂದ ಸೆ.8ರ ವರೆಗಿನ ಅವಧಿಯಲ್ಲಿ ಎರಡು ಮಾರ್ಗಗಳ ಮೂಲಕ ನಡೆಸಲಾಗುವುದು ಎಂದು ಎಂಇಎ ಹೇಳಿದೆ.