Advertisement
ಇದೇ ಕಾರಣಕ್ಕೆ ಬಜೆಟ್‌ನಲ್ಲಿ ಜನಪ್ರಿಯ ಘೋಷಣೆಗಳು ಕಾಣಿಸದಿರಬಹುದು. ಆದರೆ, ಮತಗಟ್ಟೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಮಧ್ಯಮ ಮತ್ತು ರೈತಾಪಿ ವರ್ಗಕ್ಕೆ ಒತ್ತು ನೀಡಿರುವುದರ ಹಿಂದೆ ಮತದಾರರನ್ನು ಸೆಳೆಯುವ ತಂತ್ರವನ್ನು ಕಾಣಬಹುದು. ಈ ನಿಟ್ಟಿನಲ್ಲಿ ಸಚಿವರು “ಗುಡ್ ಲಿವಿಂಗ್’ ಮತ್ತು “ಗುಡ್ ಲೈಫ್ಸ್ಟೈಲ್’ನ ಮಂತ್ರ ಪಠಿಸುತ್ತಾರೆ.
Related Articles
Advertisement
ಇದಲ್ಲದೆ, ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮುಂಗಾರು ಬೆಳೆಗಳಿಗೆ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆಪಟ್ಟು ಹೆಚ್ಚು ಕನಿಷ್ಠ ಬೆಂಬಲ ಬೆಲೆ ಘೋಷಿಸಲಾಗಿದೆ. ಇದು ಉತ್ತಮ ಬೆಳವಣಿಗೆಯಾಗಿದ್ದು, ರೈತರ ಆರ್ಥಿಕ ವೃದ್ಧಿಗೆ ಈ ನಿರ್ಧಾರ ಸಹಕಾರಿಯಾಗಲಿದೆ. ಇದೆಲ್ಲವೂ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಹೆಚ್ಚು ಜನಪ್ರಿಯತೆ ತಂದುಕೊಡುವುದರಲ್ಲಿ ಎರಡು ಮಾತಿಲ್ಲ.
ಇಷ್ಟೇ ಅಲ್ಲ, ಕಳೆದ ವರ್ಷ ನೋಟು ನಿಷೇಧದಿಂದ ಸಂಕಷ್ಟಕ್ಕೆ ಸಿಲುಕಿದ್ದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಉತ್ತೇಜನಕ್ಕೂ ಒತ್ತುನೀಡಲಾಗಿದ್ದು, 2015-16ರಲ್ಲಿ 50 ಕೋಟಿ ರೂ.ಗಿಂತ ಕಡಿಮೆ ವಹಿವಾಟು ನಡೆಸಿರುವ ಕಂಪೆನಿಗಳಿಗೆ ನೀಡುತ್ತಿದ್ದ ಶೇ. 25ರಷ್ಟು ಕಡಿಮೆಗೊಳಿಸಿದ ಬಡ್ಡಿ ದರವನ್ನು 250 ಕೋಟಿ ರೂ. ವಹಿವಾಟು ನಡೆಸಿರುವ ಕಂಪನಿಗಳಿಗೆ ವಿಸ್ತರಿಸಲಾಗುತ್ತಿದೆ.
ಪ್ರಸ್ತುತ ಇರುವ ಸಾರಿಗೆ ಭತ್ಯೆ ವಿನಾಯಿತಿ ಮತ್ತು ಇತರೆ ವೈದ್ಯಕೀಯ ವೆಚ್ಚವನ್ನು ತುಂಬಿಕೊಡುವ ಬದಲು 40 ಸಾವಿರ ರೂ. ಕಡಿತಗೊಳಿಸಲು ನಿರ್ಧರಿಸಲಾಗಿದೆ. ಇದರಿಂದ 2.5 ಕೋಟಿ ವೇತನ ಪಡೆಯುತ್ತಿರುವ ನೌಕರರು ಹಾಗೂ ಪಿಂಚಣಿದಾರರಿಗೆ ಲಾಭವಾಗಲಿದೆ. ಒಟ್ಟಾರೆಯಾಗಿ ಈ ಸ್ಮಾರ್ಟ್ ಬಜೆಟ್‌ನಲ್ಲಿ ಒಂದು ಕೈಯಿಂದ ಕೊಟ್ಟು, ಮತ್ತೂಂದು ಕೈಯಿಂದ ಕಿತ್ತುಕೊಳ್ಳಲಾಗಿದೆ.
* ಡಾ.ಆರ್.ಎಸ್. ದೇಶಪಾಂಡೆ, ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿರ್ದೇಶಕ