Advertisement

ಧರ್ಮದಲ್ಲಿ ರಾಜಕೀಯ ಬೇಡ: ಸುಭುದೇಂದ್ರ ಶ್ರೀ

06:45 AM May 04, 2019 | Lakshmi GovindaRaj |

ಲಿಂಗಸುಗೂರು: “ಇಂದಿನ ರಾಜಕೀಯ ಗಮನಿಸಿದರೆ ಒಂದು ಪಕ್ಷದ ಮೇಲೆ ಮತ್ತೂಂದು ಪಕ್ಷ, ಒಬ್ಬ ವ್ಯಕ್ತಿ ಮೇಲೆ ಮತ್ತೂಬ್ಬ ವ್ಯಕ್ತಿ ಕೆಸರೆರಚಾಟ ನಡೆಸಿದ್ದು, ಇದು ದೇಶದ ಅಭಿವೃದ್ಧಿ, ಸಮಗ್ರತೆ, ಪ್ರಗತಿಗೆ ಪ್ರತಿಬಂಧಕವಾಗಿದೆ’ ಎಂದು ಮಂತ್ರಾಲಯ ರಾಘವೇಂದ್ರಸ್ವಾಮಿ ಮಠದ ಪೀಠಾಧಿ ಪತಿ ಶ್ರೀ ಸುಭುದೇಂದ್ರತೀರ್ಥ ಶ್ರೀಪಾದಂಗಳು ಹೇಳಿದರು.

Advertisement

ಪಟ್ಟಣದಲ್ಲಿ ಶುಕ್ರವಾರ ನ್ಯಾಯವಾದಿ ರಾಘವೇಂದ್ರ ಮುತಾಲಿಕ ಏರ್ಪಡಿಸಿದ್ದ ತುಲಾಭಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, “ಸರ್ಕಾರಗಳು ವ್ಯವಸ್ಥಿತವಾದ ರೀತಿಯಲ್ಲಿ ಜನರಿಗೆ ಸುಭದ್ರ ಸರ್ಕಾರ ಒದಗಿಸುವ ಆಶ್ವಾಸನೆ ಮುಂದಿಟ್ಟು ಹೋಗಬೇಕೇ ಹೊರತು ಒಬ್ಬರ ಮೇಲೆ ಕೆಸರೆರಚಾಟ,

ಕೇವಲ ರಾಜಕೀಯವಾಗಿ ಸ್ಥಾನಮಾನ ಗಳಿಸಬೇಕೆಂಬ ಸ್ವಾರ್ಥ ಭಾವನೆ ಇಟ್ಟುಕೊಳ್ಳಬಾರದು. ರಾಜಕೀಯದಲ್ಲಿ ಧರ್ಮ ಬಂದಾಗ ಅದರ ಮೌಲ್ಯ, ಗುಣಮಟ್ಟ ಬೆಳೆಯುತ್ತದೆ. ಧರ್ಮದಲ್ಲಿ ರಾಜಕೀಯ ಬಂದಾಗ ಧರ್ಮದ ಪಾವಿತ್ರ್ಯತೆ ಮತ್ತು ಮಹತ್ವಕ್ಕೆ ಧಕ್ಕೆ ಉಂಟಾಗುತ್ತಿದೆ. ಹೀಗಾಗಿ ಧರ್ಮದಲ್ಲಿ ರಾಜಕೀಯ ಮಾಡಬಾರದು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next