Advertisement

ಅಭಿವೃದ್ಧಿಯಲ್ಲಿ ರಾಜಕೀಯ ಮಾಡಿಲ್ಲ; ಶರಣಗೌಡ

06:28 PM Sep 02, 2021 | Team Udayavani |

ಸೈದಾಪುರ: ಗುರುಮಠಕಲ್‌ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡಿಲ್ಲ. ಮಾಡೋದೂ ಇಲ್ಲ ಎಂದು ಜೆಡಿಎಸ್‌ ರಾಜ್ಯ ಯುವ ಮುಖಂಡ ಶರಣಗೌಡ ಕಂದಕೂರ ಹೇಳಿದರು. ಪಟ್ಟಣದಲ್ಲಿ ನಡೆದ ಕಾಂಗ್ರೆಸ್‌ ಮತ್ತು ಬಿಜೆಪಿ ತೊರೆದು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಬರಮಾಡಿಕೊಂಡು ಅವರು ಮಾತನಾಡಿದರು.

Advertisement

ಈ ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಯೇ ನಮ್ಮ ಮೂಲ ಮಂತ್ರವಾಗಿದೆ. ಈ ದೆಸೆಯಲ್ಲಿ ಪಕ್ಷ, ಜಾತಿ, ಧರ್ಮದ ಭೇದಭಾವ ಮಾಡದೆ, ಸಮಸ್ಯೆ ಇದೆ ಎಂದು ಬಂದ ವ್ಯಕ್ತಿಗೆ ಸಹಾಯ-ಸಹಕಾರ ಮಾಡಿದ್ದೇನೆ. ಇಲ್ಲಿನ ವಿರೋಧ ಪಕ್ಷದ ನಾಯಕರು ರಾಜಕೀಯ ಕೇವಲ ಚುನಾವಣೆಗೆ ಮಾತ್ರ ಸೀಮಿತಗೊಳಿಸಿ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡಿದರರೂ ಸ್ವೀಕರಿಸುತ್ತೇನೆ ಎಂದರು.

ರಾಜ್ಯದಲ್ಲಿ ಜೆಡಿಎಸ್‌ ಪಕ್ಷದ ಅಧಿಕಾರಕ ಬಂದಾಗೊಮ್ಮೆ ಪ್ರಗತಿಯ ಹೊಳೆ ಹರಿಸಿದ್ದಾರೆ. ಗಂಗಾ ಕಲ್ಯಾಣ, ಮಹಿಳಾ ಮೀಸಲಾತಿ, ಜನತಾ ದರ್ಶನ, ಸಾಲ ಮನ್ನಾ ಮತ್ತು ಗ್ರಾಮ ವಾಸ್ತವ್ಯ ನಮ್ಮ ಪಕ್ಷದ ಇತರೆ ರಾಜ್ಯಗಳಿಗೆ ಮಾದರಿ ಯೋಜನೆಗಳಾಗಿವೆ. ಇತಂಹ ಯೋಜನೆಗಳನ್ನು ಪಕ್ಷದ ಕಾರ್ಯಕರ್ತರು ಜನರಿಗೆ ಮುಟ್ಟಿಸುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.

ಈ ಸಂದಂರ್ಭದಲ್ಲಿ ಸೈದಾಪುರ, ಮುನಗಲ್‌, ಬೆಳಗುಂದಿ, ಕಡೇಚೂರು, ಬಾಲಛೇಡ್‌ ಹಾಗೂ ರಾಂಪೂರ ಗ್ರಾಮದ ನೂರಾರು ಯುವಕರು ಕಾಂಗ್ರೆಸ್‌-ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದರು. ಈ ವೇಳೆ ಗುರುಮಠಕಲ್‌ ಪುರಸಭೆಯ ಅಧ್ಯಕ್ಷ ಪಾಪಣ್ಣ ಮನ್ನೆ, ಪ್ರಕಾಶ ನೀರೆಟ್ಟಿ, ರಾಮಣ್ಣ ಕೋಟಗೇರಾ, ಸುದರ್ಶನ ಪಾಟೀಲ್‌ ಜೈಗ್ರಾಂ, ಶರಣು ಆವಂಟಿ, ಬಸಣ್ಣ ದೇವರಹಳ್ಳಿ, ಮಲ್ಲಣ್ಣಗೌಡ ಮುನಗಾಲ, ಸಣ್ಣ ಭೀಮಶಪ್ಪ ಜೇಗರ್‌, ನರಸಪ್ಪ ಕವಡೆ ಬದ್ದೇಪಲ್ಲಿ, ವಿರುಪಣ್ಣಗೌಡ ಬೆಳಗುಂದಿ, ಚಂದ್ರುಗೌಡ ಸೈದಾಪುರ, ರಾಜೇಶ ಉಡುಪಿ, ಶರಣಗೌಡ ಕ್ಯಾತ್ನಾಳ, ನಾಗರೆಡ್ಡಿಗೌಡ ಮುನಗಾಲ, ಮಲ್ಲಿಕಾರ್ಜುನ ಅರುಣಿ, ಡಿ.ತಾಯಪ್ಪ ಬದ್ದೇಪಲ್ಲಿ, ಶಂಕರಲಿಂಗ ಕಡೇಚೂರ, ರಮೇಶ ಪವಾರ್‌, ವೆಂಕಟೇಶ ಗಡದ್‌, ಬಂದು ಕಟ್ಟಿಮನಿ ಇದ್ದರು.

ಬಿಜೆಪಿ ನಾಯಕರಿಗೆ ಸಾವಲು
ಈ ಹಿಂದಿನ ಸರ್ಕಾರದಲ್ಲಿ ಮತಕ್ಷೇತ್ರಕ್ಕೆ ನೀಡಿದ ಅನುದಾನದಲ್ಲಿ ಸೈದಾಪುರ, ಬಳಿಚಕ್ರ ಮತ್ತು ಕೊಂಕಲ್‌ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಅನುದಾನವನ್ನು ತರಲು ನಾನು ಪ್ರಯತ್ನಿಸುತ್ತೇನೆ. ಸ್ಥಳೀಯ ಬಿಜೆಪಿ ನಾಯಕರಿಗೆ ಮತಕ್ಷೇತ್ರದ ಅಭಿವೃದ್ಧಿಯ ಬದ್ಧತೆ ಇದ್ದರೆ ಇನ್ನೂಳಿದ ಮತಕ್ಷೇತ್ರದ ಅನುದಾನವನ್ನು ಮರಳಿ ತನ್ನಿ ಎಂದು ಶರಣಗೌಡ ಕಂದಕೂರು ಬಿಜೆಪಿ ನಾಯಕರಿಗೆ ಸವಾಲು ಎಸೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next