ಟೆಲ್ ಅವೀವ್(ಇಸ್ರೇಲ್): ಪ್ಯಾಲೆಸ್ತೇನ್ ಹಮಾಸ್ ಭಯೋತ್ಪಾದಕರ ವಿರುದ್ಧದ ಸಮರ ಮುಂದುವರಿಯಲಿದೆ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ತಿಳಿಸಿದ್ದು, ನಾವು ಯುದ್ಧವನ್ನು ಗೆಲ್ಲುವ ಬಗ್ಗೆ ಎದುರು ನೋಡುತ್ತಿಲ್ಲ. ಆದರೆ ಗಾಜಾಪಟ್ಟಿಯನ್ನು ವಶಪಡಿಸಿಕೊಳ್ಳುವುದು ಅಥವಾ ಆಡಳಿತ ನಡೆಸುವುದು ನಮ್ಮ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:Heavy Rain: ತಮಿಳುನಾಡಿನಲ್ಲಿ ಮುಂದುವರೆದ ಮಳೆ… ರೈಲು ಸಂಚಾರ ಸ್ಥಗಿತ, ಶಾಲೆಗಳಿಗೆ ರಜೆ
ಉಗ್ರರ ಬೆದರಿಕೆಯನ್ನು ತಡೆಗಟ್ಟಲು ನಾವು ದಿಟ್ಟ ಕ್ರಮ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಬೆಂಜಮಿನ್ ನೆತನ್ಯಾಹು ಅಮೆರಿಕದ ಟೆಲಿವಿಷನ್ ಫಾಕ್ಸ್ ನ್ಯೂಸ್ ಜತೆಗೆ ಮಾತನಾಡುತ್ತ ತಿಳಿಸಿದ್ದಾರೆ.
ಗಾಜಾಪಟ್ಟಿಯನ್ನು ಗೆಲ್ಲುವುದು ನಮಗೆ ಬೇಕಿಲ್ಲ, ಗಾಜಾಪಟ್ಟಿಯಲ್ಲಿ ನಾಗರಿಕ ಸರ್ಕಾರದ ಅಗತ್ಯವಿದೆ. ಅಲ್ಲದೇ ಅಕ್ಟೋಬರ್ 7ರಂದು ನಡೆದ ದಾಳಿ ಪುನರಾವರ್ತನೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಇಸ್ರೇಲ್ ಹೇಳಿದೆ.
ನಮ್ಮಲ್ಲಿ ಬಲಿಷ್ಠವಾದ ಸೇನಾಪಡೆ ಇದೆ. ಒಂದು ವೇಳೆ ಅಗತ್ಯವಾದರೆ ಗಾಜಾಪಟ್ಟಿಯೊಳಗೆ ನುಗ್ಗಿ ಅವರನ್ನು ಕೊಲ್ಲಬಹುದಾಗಿದೆ. ಆದರೆ ನಮಗೆ ಹಮಾಸ್ ರೀತಿ ಯುದ್ಧ ಮಾಡುವುದು ಬೇಕಾಗಿಲ್ಲ ಎಂದು ನೆತನ್ಯಾಹು ತಿಳಿಸಿದ್ದಾರೆ.
ನಾಲ್ಕು ಗಂಟೆ ಯುದ್ಧ ವಿರಾಮ:
ಉತ್ತರ ಗಾಜಾಪಟ್ಟಿಯಲ್ಲಿ ನಾಲ್ಕು ಗಂಟೆಗಳ ಕಾಲ ದಾಳಿ ನಿಲ್ಲಿಸಲು ಇಸ್ರೇಲ್ ಒಪ್ಪಿಕೊಂಡಿದ್ದು, ಇದರೊಂದಿಗೆ ನಾಗರಿಕರು ಸೂಕ್ತ ಸ್ಥಳಗಳಿಗೆ ತೆರಳಲು ಅನುವು ಮಾಡಿಕೊಟ್ಟಂತಾಗಿದೆ. ಇಸ್ರೇಲ್, ಹಮಾಸ್ ಯುದ್ಧದ ಬಗ್ಗೆ ಅಮೆರಿಕ ಇಸ್ರೇಲ್ ಜತೆಗಿನ ಮಾತುಕತೆಯನ್ನು ಮುಂದುವರಿಸಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬೈ ತಿಳಿಸಿದ್ದಾರೆ.