Advertisement

ವಿಖ್ಯಾತ ಫ‌ುಟ್ಬಾಲಿಗರ ಹೆಸರಿಡಲು ಫ್ರಾನ್ಸಲ್ಲಿ ಅನುಮತಿಯಿಲ್ಲ!

12:30 AM Mar 19, 2019 | |

ಪ್ಯಾರಿಸ್‌ (ಫ್ರಾನ್ಸ್‌): ವಿಶ್ವದ ಶ್ರೀಮಂತ,ಅಭಿವೃದ್ಧಿಹೊಂದಿದ ರಾಷ್ಟ್ರಗಳಲ್ಲಿ ಒಂದು ಎಂಬ ಖ್ಯಾತಿ ಹೊಂದಿರುವ ಫ್ರಾನ್ಸ್‌ನಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. 

Advertisement

ಆ ದೇಶದ ಅತ್ಯಂತ ಖ್ಯಾತ ಫ‌ುಟ್‌ಬಾಲ್‌ ತಾರೆಯರಾದ ಆ್ಯಂಟಾಯಿನ್‌ ಗ್ರೀಜ್ಮನ್‌ ಹಾಗೂ ಕಿಲಿಯನ್‌ ಎಂಬಪ್ಪೆಯ ಹೆಸರನ್ನು ತಮ್ಮ ಮಗನಿಗೆ ಇಡಲು ಹೊರಟಿದ್ದ ಪೋಷಕರಿಗೆ ಅನುಮತಿ ನಿರಾಕರಿಸಲಾಗಿದೆ.

ಈಗಷ್ಟೇ 5 ತಿಂಗಳಾಗಿರುವ ಮಗುವಿನ ಭವಿಷ್ಯಕ್ಕೆ ಈ ಹೆಸರು ಮಾರಕವಾಗ ಬಹುದು ಎಂಬ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಯಾಕೆ ನಿಷೇಧ?: ಫ್ರಾನ್ಸ್‌ನ ಬ್ರೈವ್‌ ಲಾ ಗೈಲಾರ್ಡ್‌ ನಗರದ ಕೌಟುಂಬಿಕ ನ್ಯಾಯಾಧೀಶ, ಮಗುವಿನ ಹೆಸರಿನ ಮುಂದೆ ಈ ಇಬ್ಬರು ದಂತಕಥೆಗಳ ಹೆಸರು ಸೇರಿಕೊಳ್ಳುವುದನ್ನು ನಿಷೇಧಿಸಿದ್ದಾರೆ. ಈ ಇಬ್ಬರ ಹೆಸರು ಇಡುವುದರಿಂದ ಮಗುವಿಗೆ ಹೇಗೆ ತೊಂದರೆಯಾಗುತ್ತದೆ ಎನ್ನುವುದಕ್ಕೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲವಾದರೂ, ಮಾನಸಿಕ ಪರಿಣಾಮಗಳನ್ನು ಪರಿಗಣಿಸಿ ನಿಷೇಧಿಸಲಾಗಿದೆ ಎಂದು ಊಹಿಸಬಹುದು. ಅಂದರೆ ಈ ಮಗುವಿನ ಸಾಧನೆಯನ್ನು ಈ ಇಬ್ಬರು ದಂತಕಥೆಗಳ ಸಾಧನೆ ಯೊಂದಿಗೆ ಹೋಲಿಸಿ ಅಣಕಿಸಬಹುದು. ಅದು ಮಗುವಿಗೆ ಒತ್ತಡ ಸೃಷ್ಟಿಸಬಹುದು ಎಂಬ ಲೆಕ್ಕಾಚಾರ.

ಗ್ರೀಜ್ಮನ್‌ ಮತ್ತು ಎಂಬಪ್ಪೆ ಕಳೆದ ವರ್ಷ ರಷ್ಯಾದಲ್ಲಿ ನಡೆದ ವಿಶ್ವಕಪ್‌ ಫ‌ುಟ್‌ಬಾಲನ್ನು ಫ್ರಾನ್ಸ್‌ ಗೆಲ್ಲಲು ನೇರ ಕಾರಣವಾಗಿದ್ದರು. ಇಬ್ಬರೂ ತಲಾ ನಾಲ್ಕು ಗೋಲು ಬಾರಿಸಿದ್ದರು. ಸದ್ಯ ಇಬ್ಬರೂ ವಿಶ್ವವಿಖ್ಯಾತ ಆಟಗಾರರೆನಿಸಿದ್ದಾರೆ. ಈ ಇಬ್ಬರಿಗೆ ಗೌರವ ನೀಡಲು ಕಳೆದವರ್ಷ ತಮಗೆ ಹುಟ್ಟಿದ ಮಗುವಿಗೆ, ಈ ಪೋಷಕರು ಗ್ರೀಜ್ಮನ್‌-ಎಂಬಪ್ಪೆ ಎಂದು ನಾಮಕರಣ ಮಾಡಲು ನಿರ್ಧರಿಸಿದ್ದರು. ಆದರೆ ಈ ಹೆಸರು ನೀಡುವಾಗ ಅಧಿಕಾರಿಗಳು ಪುನರ್‌ ಪರಿಶೀಲಿಸಲು ತಿಳಿಸಿದ್ದರು. ಅಂತಿಮವಾಗಿ ನ್ಯಾಯಾಧೀಶರು ಈ ಹೆಸರು ಬೇಡವೆಂದು ಆದೇ ನೀಡಿದ್ದಾರೆ. ಈಗ ಮಗುವಿಗೆ ಡ್ಯಾನಿ ನೋ ಎಂದು ಹೆಸರಿಡಲಾಗಿದೆ.

Advertisement

1993ರಿಂದ ಇತ್ತೀಚೆಗೆ ಈ ಕ್ರಮ: ಫ್ರಾನ್ಸ್‌ನಲ್ಲಿ 1993ರವರೆಗೆ ಯಾವ ಹೆಸರನ್ನಾದರೂ ಇಡಲು ಅನುಮತಿಯಿತ್ತು. ಅದಾದ ಮೇಲೆ ಹೆಸರುಗಳನ್ನು ಇಡಲು ಅನುಮತಿ ಪಡೆಯುವ ನಿಯಮ ಸಿದಟಛಿಪಡಿಸಲಾಯಿತು. ಕೆಲವೊಂದು ಹೆಸರುಗಳನ್ನು ಇಡಲೇಬಾರದು ಎಂಬ ನಿಯಮವಿರುವುದರಿಂದ ಜನನ ನೋಂದಣಿ ಮಾಡುವಾಗಹೆಸರನ್ನು ಪರಿಶೀಲಿಸಿಯೇ ಒಪ್ಪಿಗೆ ಸೂಚಿಸಲಾಗುತ್ತದೆ.

ಭಾರತದಲ್ಲಿ ಯಾವ ಹೆಸರನ್ನಾದರೂ ಇಡಲು ಅನುಮತಿಯಿದೆ. ಆದರೆ ಫ್ರಾನ್ಸ್‌ನಲ್ಲಿ ಜಿಹಾದ್‌ ಹೆಸರಿಗೆ ಅನುಮತಿಯಿಲ್ಲ. ಹೀಗೆ ಸಮಾಜದ ಮೇಲೆ ಋಣಾತ್ಮಕ ಪರಿಣಾಮ ಬೀರುವ, ದ್ವೇಷಕ್ಕೆ ಕಾರಣವಾಗುವ ಹೆಸರನ್ನು ನಿಷೇಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next