ನವದೆಹಲಿ:ಕೋವಿಡ್ ಸೋಂಕು ಮಹಾರಾಷ್ಟ್ರದಲ್ಲಿ ಮಾತ್ರವಲ್ಲ ಕೇರಳ, ಪಂಜಾಬ್, ಚತ್ತೀಸ್ ಗಢ್ ಹಾಗೂ ಮಧ್ಯಪ್ರದೇಶದಲ್ಲಿಯೂ ತೀವ್ರಗತಿಯಲ್ಲಿ ಪ್ರಕರಣ ಹೆಚ್ಚಳವಾಗುತ್ತಿದ್ದು, ಈ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸುವಂತೆ ಕೇಂದ್ರ ಸರ್ಕಾರ ಶನಿವಾರ(ಫೆ.20, 2021) ಸೂಚಿಸಿದೆ.
ಇದನ್ನೂ ಓದಿ:ಅನ್ಯ ರಾಜ್ಯಗಳಲ್ಲಿ ಆಗುವ ಕಾರ್ಯ ಕರ್ನಾಟಕದಲ್ಲೇಕೆ ಆಗುತ್ತಿಲ್ಲ?: ಪಂಡಿತಾರಾಧ್ಯ ಶ್ರೀ
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಪ್ರಕಟಣೆ ಪ್ರಕಾರ, ಮಹಾರಾಷ್ಟ್ರ ರಾಜ್ಯದ ರೀತಿಯಲ್ಲಿಯೇ ಪಂಜಾಬ್ ನಲ್ಲಿಯೂ ಕೋವಿಡ್ ಸೋಂಕು ಕಳೆದ 24ಗಂಟೆಯಲ್ಲಿ 383 ಪ್ರಕರಣಗಳು ಪತ್ತೆಯಾಗಿರುವುದಾಗಿ ತಿಳಿಸಿದೆ.
ಕಳೆದ ಒಂದು ವಾರದಲ್ಲಿ ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ತೀವ್ರ ಹೆಚ್ಚಳವಾಗುತ್ತಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಹಾಗೂ ನಿರ್ಬಂಧಗಳನ್ನು ಮುಂದುವರಿಸಿರುವುದಾಗಿ ವರದಿ ಹೇಳಿದೆ.
ಮಹಾರಾಷ್ಟ್ರದಲ್ಲಿ ಪ್ರತಿದಿನ 6,112 ಪ್ರಕರಣಗಳು ವರದಿಯಾಗುತ್ತಿದೆ. ಭಾರತದಲ್ಲಿ ಒಟ್ಟು ಪ್ರಸ್ತುತ 1,43,127 ಸಕ್ರಿಯ ಕೋವಿಡ್ 19 ಸೋಂಕು ಪ್ರಕರಣಗಳಿವೆ. ಕೇರಳ, ಪಂಜಾಬ್, ಚತ್ತೀಸ್ ಗಢ ಹಾಗೂ ಮಧ್ಯಪ್ರದೇಶದಲ್ಲಿಯೂ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಚತ್ತೀಸ್ ಗಢದಲ್ಲಿ ಕಳೆದ 24ಗಂಟೆಯಲ್ಲಿ 259 ಕೋವಿಡ್ 19 ಪ್ರಕರಣ ವರದಿಯಾಗಿದೆ. ಈ ನಿಟ್ಟಿನಲ್ಲಿ ಕೋವಿಡ್ 19 ಸೋಂಕು ಹರಡದಂತೆ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.