Advertisement
ವೃಕ್ಷಾಭಿಯಾನದ 3ನೇ ಹಂತವಾಗಿ ಕಾವು ಬುಶ್ರಾ ವಿದ್ಯಾಸಂಸ್ಥೆಯ ಆವರಣದಲ್ಲಿ ಬಾದಾಮಿ, ಸಾಗುವಾನಿ ಗಿಡಗಳನ್ನು ನೆಡಲಾಯಿತು. ಜತೆಗೆ ಸಂಸ್ಥೆಯ 500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಗಿಡ ವಿತರಿಸಲಾಯಿತು.
3ನೇ ಹಂತದ ಅಭಿಯಾನಕ್ಕೆ ಚಾಲನೆ ನೀಡಿದ ಪಾಣಾಜೆ ಉಪವಲಯದ ಅರಣ್ಯಾಧಿಕಾರಿ ಲೋಕೇಶ್ ಮಾತನಾಡಿ, ಪರಿಸರ ನಿರ್ಮಾಣವಾಗಬೇಕಾದರೆ ಕಾಡಿನಲ್ಲಿ ಗಿಡ ನೆಟ್ಟರೆ, ಸಂರಕ್ಷಿಸಿದರೆ ಸಾಲದು. ಊರಿನಲ್ಲೂ ಗಿಡ ನೆಟ್ಟು ಬೆಳೆಸಬೇಕು. ಆಗ ಮಾತ್ರ ಪ್ರಾಕೃತಿಕ ಸಮತೋಲನ ಕಾಣಲು ಸಾಧ್ಯ. ತುಡರ್ ಸಂಘದ ಯುವಕರು ಮಾಡುತ್ತಿರುವ ವೃಕ್ಷಾಭಿಯಾನವು ಅರಣ್ಯ ಇಲಾಖೆಗೆ ಹೆಮ್ಮೆಯ ವಿಷಯ. ಯುವಕರ ಪರಿಸರ ಕಾಳಜಿಗೆ ಅರಣ್ಯ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು. ಕಾವು ಬುಶ್ರಾ ವಿದ್ಯಾಸಂಸ್ಥೆಯ ಅಧ್ಯಕ್ಷ ಅಬ್ದುಲ್ ಅಜೀಜ್ ಅಧ್ಯಕ್ಷತೆ ವಹಿಸಿದ್ದರು. ತುಡರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯ, ಬುಶ್ರಾ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕ ನೂರುದ್ದೀನ್ ಬುಶ್ರಾ, ಆಡಳಿತಾಧಿಕಾರಿ ಹರೀಶ್, ಶಿಕ್ಷಕ ವೃಂದದವರು, ತುಡರ್ ಯುವಕ ಮಂಡಲದ ಗೌರವಾಧ್ಯಕ್ಷ ಶೇಷಪ್ಪ ಗೌಡ ಪರನೀರು, ಮಾಜಿ ಅಧ್ಯಕ್ಷ ಭಾಸ್ಕರ ಬಲ್ಯಾಯ, ಚಂದ್ರಶೇಖರ ಬಲ್ಯಾಯ, ಪ್ರಧಾನ ಕಾರ್ಯದರ್ಶಿ ಸತೀಶ ಎಂ., ಭಜನ ಸಂಘದ ಅಧ್ಯಕ್ಷ ರಾಮಣ್ಣ ನಾಯ್ಕ ಆಚಾರಿಮೂಲೆ, ಕಾರ್ಯದರ್ಶಿ ಸಂಕಪ್ಪ ಪೂಜಾರಿ ಚಾಕೋಟೆ, ಸದಸ್ಯರಾದ ಧನಂಜಯ ನಾಯ್ಕ ಕುಂಞಿಕುಮೇರು, ಪುರುಷೋತ್ತಮ ಆಚಾರ್ಯ ನನ್ಯ, ರಮೇಶ್ ಗೌಡ ಆಚಾರಿಮೂಲೆ, ರಾಜೇಶ್ ಬಿ., ನಿರಂಜನ, ಲಿಂಗಪ್ಪ ನನ್ಯ, ಬಾಲಕೃಷ್ಣ ಪಾಟಾಳಿ, ದಿವ್ಯಪ್ರಸಾದ್ ಎ.ಎಂ., ಸಂದೇಶ್ ಚಾಕೋಟೆ ಪಾಲ್ಗೊಂಡಿದ್ದರು.
Related Articles
Advertisement
ಅಭಿಯಾನದ 3ನೇ ಹಂತವಾಗಿ ಬುಶ್ರಾ ಶಾಲೆಯಲ್ಲಿ ಗ್ರೀನ್ ಡೇ ಆಚರಿಸಿ ಸಂಸ್ಥೆಯ ಎಲ್ಕೆಜಿ, ಯುಕೆಜಿ ಪುಟಾಣಿಗಳು, ಪ್ರಾಥಮಿಕ ವಿದ್ಯಾರ್ಥಿಗಳು, ಶಿಕ್ಷಕರು, ಬೋಧಕೇತರ ಸಿಬಂದಿ ಹಸುರು ಬಣ್ಣದ ಉಡುಪು ಧರಿಸಿದ್ದರು. ಸಂಸ್ಥೆಯ ಸ್ಕೌಟ್ ಗೈv್ಸ್ ವಿದ್ಯಾರ್ಥಿಗಳು, ಯುವಕ ಮಂಡಲದ ಸದಸ್ಯರು ಕೂಡ ಸಮವಸ್ತ್ರದ ಮೂಲಕ ಜತೆಗೂಡಿ ಗಿಡ ನಾಟಿ ಕಾರ್ಯಕ್ರಮ ಯಶಸ್ಸುಗೊಳಿಸಿದರು.
ಪ್ರಸ್ತಾವನೆಗೈದ ತುಡರ್ ಯುವಕ ಮಂಡಲದ ಅಧ್ಯಕ್ಷ ಸುನೀಲ್ ನಿಧಿಮುಂಡ ಮಾತನಾಡಿ, ನಾವು 10 ಸಾವಿರ ಗಿಡ ನೆಡುವ ಗುರಿಯನ್ನು ಮುಟ್ಟಲಿದ್ದೇವೆ ಎಂದು ಹೇಳಿದರು.
10 ಸಾವಿರ ಗಿಡ ನೆಡುವ ಗುರಿಪ್ರಸ್ತಾವನೆಗೈದ ತುಡರ್ ಯುವಕ ಮಂಡಲದ ಅಧ್ಯಕ್ಷ ಸುನೀಲ್ ನಿಧಿಮುಂಡ ಮಾತನಾಡಿ, ನಾವು 10 ಸಾವಿರ ಗಿಡ ನೆಡುವ ಗುರಿಯನ್ನು ಮುಟ್ಟಲಿದ್ದೇವೆ ಎಂದು ಹೇಳಿದರು.