Advertisement

ಏಕಪತ್ನಿ ವ್ರತಸ್ಥ ಮನುಷ್ಯನೊಬ್ಬನೇ ಅಲ್ಲ…

12:23 AM Jun 06, 2019 | Team Udayavani |

“ಏಕಪತ್ನಿವ್ರತಸ್ಥ’ ಎಂಬ ಪದದ ಬಳಕೆಯನ್ನು ನೀವೆಂದಾದರೂ ಕೇಳಿದ್ದೀರಾ? ಕೇಳಿದ್ದರೂ, ಕೇಳದೇ ಇದ್ದರೂ ಅರ್ಥವನ್ನೊಮ್ಮೆ ತಿಳಿದುಕೊಂಡು ಬಿಡುವುದು ಒಳ್ಳೆಯದು. ಹಿಂದೂ ಸಂಸ್ಕೃತಿಯ ಪ್ರಕಾರ ಗಂಡು ಹೆಣ್ಣು ಒಮ್ಮೆ ಮದುವೆಯಾಗಿಬಿಟ್ಟರೆ ಸಾಯುವವರೆಗೂ ಅವರಿಬ್ಬರು ಜೊತೆಗಿರಬೇಕು. ಒಬ್ಬಳೇ ಪತ್ನಿಯೊಡನೆ ಸಂಸಾರ ನಡೆಸುವುದು ಪತಿಗೆ ಭೂಷಣ ಮತ್ತು ಅದೇ ಆದರ್ಶಮಯ ಜೀವನ ಎನ್ನುವ ಕಲ್ಪನೆ ನಮ್ಮ ಸಮಾಜದಲ್ಲಿದೆ. ಅದನ್ನು ನಮ್ಮಲ್ಲಿ ಅದೆಷ್ಟು ಮಂದಿ ಪಾಲಿಸುತ್ತಿದ್ದಾರೋ ಗೊತ್ತಿಲ್ಲ, ಆದರೆ ವಾನರ ಪ್ರಭೇದಕ್ಕೆ ಸೇರಿದ “ಗೂಬೆ ಕೋತಿ’ ಅದನ್ನು ವ್ರತದಂತೆ ಪಾಲಿಸುತ್ತಿದೆ. ಅಂದಹಾಗೆ ಗೂಬೆ ಕೋತಿಗಳು ರಾತ್ರಿ ಹೊತ್ತು ಹೆಚ್ಚು ಕಾರ್ಯಶೀಲವಾಗುವುದರಿಂದ ಅವುಗಳಿಗೆ “ಗೂಬೆ’ಯ ವಿಶೇಷಣ ಅಂಟಿಕೊಂಡಿದೆ. ಗೂಬೆ ಕೋತಿಗಳ ಏಕಪತ್ನಿàವ್ರತಸ್ಥ ವರ್ತನೆಯನ್ನು ಸಂಶೋಧನೆಗೆ ಗುರಿಪಡಿಸಿದಾಗ ಅಚ್ಚರಿ ವಿಚಾರವೊಂದು ಬೆಳಕಿಗೆ ಬಂದಿತ್ತು.

Advertisement

ಅವುಗಳ ಪ್ರಭೇದದಲ್ಲಿ ಗಂಡು ಕೋತಿಗಳು ತಮ್ಮ ಮರಿಗಳನ್ನು ಅತೀವವಾಗಿ ಪ್ರೀತಿಸುತ್ತಿದ್ದವು. ಅಲ್ಲದೆ ಅವುಗಳ ಲಾಲನೆ ಪಾಲನೆಯಲ್ಲಿ ಉತ್ಸುಕತೆಯಿಂದ ಪಾಲ್ಗೊಳ್ಳುತ್ತಿದ್ದವು. ಒಂದೇ ಸಂಗಾತಿಯೊಂದಿಗೆ ಜೀವಮಾನ ಕಳೆಯಲು ಇದೇ ಕಾರಣ. ನಮ್ಮಲ್ಲಿ ಸಂಸಾರದಲ್ಲಿ ಬಿರುಕು ಮೂಡಿ ವಿಚ್ಛೇದನ ತೆಗೆದುಕೊಳ್ಳಲು ಇಚ್ಚಿಸುವ ದಂಪತಿಗಳು ಕೂಡಾ ಮಕ್ಕಳ ಕಾರಣದಿಂದ ಒಂದಾಗಿ ಸಾಮರಸ್ಯದಿಂದ ಬಾಳ್ವೆ ನಡೆಸುವ ಉದಾಹರಣೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next