ಲಾಸ್‌ಏಂಜಲೀಸ್: ಅರಸೊತ್ತಿಗೆ ತ್ಯಜಿಸಿ ಅದ್ಯ ಅಮೆರಿಕದ ಲಾಸ್‌ಏಂಜಲಿಸ್‌ನಲ್ಲಿ ವಾಸಿಸುತ್ತಿರುವ ಬ್ರಿಟನ್ ರಾಜಕುಮಾರ ಹ್ಯಾರಿ ಮತ್ತು ಅವರ ಪತ್ನಿ, ನಟಿ ಮೇಘನ್ ಮಾರ್ಕೆಲ್ ತಾವು ಅಮೆರಿಕದ ಸಹಾಯ ಕೇಳುವ ಯಾವುದೇ ಯೋಚನೆ ಹೊಂದಿಲ್ಲ ಎಂದು ಹೇಳಿದ್ದಾರೆ.
ದಂಪತಿ ರಕ್ಷಣೆ ವೆಚ್ಚವನ್ನು ಅಮೆರಿಕ ಭರಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಹ್ಯಾರಿ ಈ ಮಾತುಗಳನ್ನಾಡಿದ್ದಾರೆ. ನಮಗೆ ಅಮೆರಿಕ ಭದ್ರತೆ ಒದಗಿಸುವುದು ಬೇಡ ಎಂದು ಹೇಳಿದ್ದಾರೆ. ಅರಸೊತ್ತಿಗೆ ತ್ಯಜಿಸಿದ ಬಳಿಕ ಕೆಲಕಾಲ ಕೆನಡಾದಲ್ಲಿದ್ದ ದಂಪತಿ ಈಗ ಲಾಸ್‌ಏಂಜಲೀಸ್‌ಗೆ ಸ್ಥಳಾಂತರವಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.