Advertisement

ಸೆಟ್‌ ಆಗಿದ್ದರೂ ಕೊಹ್ಲಿ ಹೆಚ್ಚು ಆತ್ಮವಿಶ್ವಾಸದಿಂದ ಇರಲಿಲ್ಲ: ಪಾಕ್‌ ಮಾಜಿ ಕಪ್ತಾನ

07:27 PM Aug 30, 2022 | Team Udayavani |

ದುಬೈ: ಏಷ್ಯಾಕಪ್‌ ನಲ್ಲಿ ಭಾರತ ಮತ್ತೊಮ್ಮೆ ಪಾಕಿಸ್ತಾನವನ್ನು ಸೋಲಿಸಿದೆ. ರೋಚಕ ಹೋರಾಟದಲ್ಲಿ ಹಾರ್ದಿಕ್‌ ಪಾಂಡ್ಯ ಆಲ್‌ ರೌಂಡ್‌ ಆಟ ಭಾರತಕ್ಕೆ ಆಸರೆಯಾಯಿತು.

Advertisement

ಪಾಕಿಸ್ತಾನ 148 ರ ಸುಲಭ ಗುರಿಯನ್ನು ಬೆನ್ನಟ್ಟಿದ ಟೀಮ್‌ ಇಂಡಿಯಾ, ಕೆ.ಎಲ್‌. ರಾಹುಲ್‌ ವಿಕೆಟ್‌ ಕಳೆದುಕೊಂಡ ಒತ್ತಡಕ್ಕೆ ಸಿಲುಕಿತ್ತು. ಆದರೆ ಇಡೀ ಪಂದ್ಯದಲ್ಲಿ ಎಲ್ಲರ ಕಣ್ಣು ಇದದ್ದು ಕೊಹ್ಲಿ ಮೇಲೆ. ವಿರಾಟ್‌ ಕೊಹ್ಲಿ ಬಹು ಸಮಯದ ಬಳಿಕ ಮತ್ತೆ ಮೈದಾನಕ್ಕೆ ಇಳಿದಿದ್ದರು. ಅವರು ಕಳಪೆ ಪ್ರದರ್ಶನದಿಂದ ಹೊರಗೆ ಬಂದು ಬ್ಯಾಟ್‌ ಬೀಸಬೇಕೆಂದು ಎಲ್ಲರೂ ಕಾಯುತ್ತಿದ್ದರು.

ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 3  ಬೌಂಡರಿ, 1 ಸಿಕ್ಸರ್‌ ಸಹಿತ 35  ರನ್‌ ಗಳಿಸಿದ್ದರು. ಕಳಪೆ ಶಾಟ್‌ ನಿಂದ ಅವರು ಔಟಾಗಿದ್ದರು. ಇದೇ ಮಾತು ಎಲ್ಲೆಡೆ ಚರ್ಚೆಯಾಗುತ್ತಿದೆ. ಪಾಕಿಸ್ತಾನದ ಮಾಜಿ ಕಪ್ತಾನ ಇನ್ಜಮಾಮ್ ಉಲ್ ಹಕ್ ಕೊಹ್ಲಿ ಬ್ಯಾಟಿಂಗ್‌ ಬಗ್ಗೆ ಮಾತಾನಾಡಿದ್ದಾರೆ.

ತಮ್ಮ ಯೂಟ್ಯೂಬ್‌  ಚಾನೆಲ್‌ ನಲ್ಲಿ ಮಾತಾನಾಡಿರುವ ಅವರು, ನಾನು ಗಮನಿಸಿದಂತೆ ಕೊಹ್ಲಿ ಮೇಲೆ ತುಂಬಾ ಒತ್ತಡಗಳಿದ್ದವು. ಒಬ್ಬ 30-35 ರನ್‌ ಗಳನ್ನು ಗಳಿಸಿರುವಂಥ ಆಟಗಾರರನನ್ನು ಔಟ್‌ ಮಾಡುವುದು ಅಷ್ಟು ಸುಲಭವಲ್ಲ. ಆದರೆ  ನನಗೆ ಆಚ್ಚರಿ ಆದದ್ದು ಏನೆಂದರೆ, ಸೆಟ್‌ ಆಗಿದ್ದರೂ ಕೊಹ್ಲಿ ಹೆಚ್ಚು ಆತ್ಮವಿಶ್ವಾಸದಿಂದ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಇದರೊಂದಿಗೆ ಅವರು, ಭಾರತದ ಮಧ್ಯಮ ಕ್ರಮಾಂಕ ಹಾಗೂ ಕೆಳ ಕ್ರಮಾಂಕ ಬಲಿಷ್ಠವಾಗಿದೆ. ಇದೇ ಕಾರಣಕ್ಕೆ ಏಷ್ಯಾಕಪ್‌ ನಲ್ಲಿ ಭಾರತ ಉಳಿದ ತಂಡಗಳಿಗಿಂತ ಭಿನ್ನ. ರಿಷಭ್‌ ಪಂತ್‌ ಅವರನ್ನು ಹೊರಗಿಟ್ಟದ್ದು ಆಶ್ಚರ್ಯವಾಗಿದೆ ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next