ಮೈಸೂರು:ನಾವು ಶಿಕ್ಷಣವನ್ನ ಮಾತ್ರ ಬದಲಾವಣೆ ಮಾಡಿಲ್ಲ, ಎಲ್ಲವನ್ನೂ ಬದಲಾವಣೆ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಈ ದೇಶದಲ್ಲಿ ವಾಜಪೇಯಿ ಸರ್ಕಾರ ಬರುವವರೆಗೂ ಅಂತಾರಾಜ್ಯ ರಸ್ತೆ ಇರಲಿಲ್ಲ.ನಾವು ರಸ್ತೆಯನ್ನು ಬದಲಾವಣೆ ಮಾಡಿದ್ದೇವೆ. ಅದರ ಬಗ್ಗೆಯು ಮಾತನಾಡಿ. ಪಠ್ಯ ಪುಸ್ತಕದ ಮೇಲೆ ಮಾತನಾಡುತ್ತಿರುವವರು ವಿಷಯದ ಮೇಲೆ ಮಾತನಾಡುತ್ತಿದ್ದಾರಾ? ರಾಜಕೀಯದ ಮೇಲೆ ಮಾತನಾಡುತ್ತಿದ್ದಾರಾ? ಬರಗೂರು ರಾಮಚಂದ್ರಪ್ಪ ಪಠ್ಯ ಬದಲಾಯಿಸಿದರೆ ಅದು ವಿರೋಧವಲ್ಲ. ಆಗ ಒಂದೇ ಪಂಥದ ಪಠ್ಯ ಪುಸ್ತಕ ಸೇರಿದಾಗ ಅದು ತಪ್ಪಲ್ಲ.ಈಗ ಮಾತ್ರ ನಿಮಗೆ ಪಂಥಗಳು ಕಾಣುತ್ತಿದೆ ಎಂದರು.
ನಮ್ಮ ಇಚ್ಚೆ ಪಂಥದಲ್ಲ. ನಾವು ಎಲ್ಲವನ್ನು ಒಪ್ಪಿ ಶ್ರೇಷ್ಠವಾದುದ್ದನ್ನು ಕೊಡುತ್ತಿದ್ದೇವೆ. ಬಿಜೆಪಿ ಪಠ್ಯ ಸಂಸ್ಕರಣ ಮಾಡುತ್ತಿದ್ದಂತೆ ನಿಮಗೆ ಚಾತುರ್ ವರ್ಣ ಎಲ್ಲ ನೆನಪಾಗುತ್ತಿದೆ ಎಂದು ಕಿಡಿ ಕಾರಿದರು.
ಪಠ್ಯದಿಂದ ತಾವು ಕಥನವನ್ನ ತೆಗೆಯಿರಿ ನಿಮಗೆ ಕೊಟ್ಟಿದ್ದ ಹಕ್ಕುನ್ನು ವಾಪಸ್ಸು ಪಡೆದಿದ್ದೇನೆ ಎಂಬ ದೇವನೂರು ಮಹಾದೇವ ಪತ್ರ ವಿಚಾರಕ್ಕೆ ಪ್ರತಿಕ್ರಿಯಿಸಿ, ದೇವನೂರು ಮಹಾದೇವ ಮುಂಚೆಯೆ ಹೇಳಿದ್ದರೆ ಅವರ ಮಾತಿನ ಬಗ್ಗೆ ಚರ್ಚೆ ಮಾಡಬಹುದಿತ್ತು.ಈಗಾಗಲೇ ಪಠ್ಯ ಮುದ್ರಣವಾಗಿದೆ ಅದು ಮಕ್ಕಳ ಕೈ ಸೇರುತ್ತಿದೆ.ಈ ಸಂಧರ್ಭದಲ್ಲಿ ತೆಗೆಯಲು ಆಗುವುದಿಲ್ಲ. ಇದು ವಾಸ್ತವ ಸ್ಥಿತಿ, ಇದನ್ನು ಹಿರಿಯ ಸಾಹಿತಿಗಳಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.
Related Articles
ಇದನ್ನೂ ಓದಿ : ತಾಂಬೂಲ ಪ್ರಶ್ನೆ: ಮಳಲಿ ಮಸೀದಿಯಲ್ಲಿ ದೇವರ ಸಾನಿಧ್ಯ ಗೋಚರ
ದೇವನೂರು ಮಹಾದೇವ ಹಿರಿಯ ಸಾಹಿತಿಗಳು. ಮಾಧ್ಯಮಗಳಲ್ಲಿ ಅವರ ಪತ್ರದ ಬಗ್ಗೆ ನೋಡಿದೆ. ಆದರೆ ನನಗೆ ಯಾವುದೇ ಪತ್ರಗಳು ಬಂದಿಲ್ಲ.ಈ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ.ಅವರು ಹೇಳುವುದರಲ್ಲು ಸತ್ಯ ಇದೆ. ನಾವು ಅಳವಡಿಕೆ ಮಾಡಿರುವುದಲ್ಲು ಸತ್ಯ ಇದೆ. ನಾನು ದೇವನೂರು ಮಹಾದೇವ ಅವರನ್ನ ಭೇಟಿಯಾಗುತ್ತೇನೆ. ಅವರಿಗಿರುವ ಗೊಂದಲಗಳನ್ನು ಕೇಳಿ ಬಗೆಹರಿಸುತ್ತೇನೆ ಎಂದರು.
ನಮ್ಮದು ಓನ್ಲಿ ಸಂಸ್ಕೃತಿ ಅಲ್ಲ. ಆಲ್ ಆಫ್ ಯು ಸಂಸ್ಕೃತಿ. ಎಲ್ಲಾ ಬಗೆಯ ಒಳ್ಳೆಯದನ್ನು ಪಠ್ಯದಲ್ಲಿ ಅಳವಡಿಕೆ ಮಾಡಿದ್ದೇವೆ. ಕಾಂಗ್ರೆಸ್ ನದ್ದು ನೀಚ ಬುದ್ದಿ. ವಿಚಾರಗಳ ಚರ್ಚೆಯಲ್ಲಿ ಸೋತು ವ್ಯಕ್ತಿಗತ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.