Advertisement

ರಾಜ್ಯ ರಾಜಕಾರಣಕ್ಕೆ ಬರಲ್ಲ

01:09 PM Aug 08, 2020 | Suhan S |

ಹುಬ್ಬಳ್ಳಿ: ರಾಜ್ಯ ರಾಜಕಾರಣಕ್ಕೆ ಬರುವ ಯೋಚನೆಯಿಲ್ಲ. ಸಿಎಂ ಯಡಿಯೂರಪ್ಪ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ಕೇಂದ್ರ ಸಂಸದೀಯವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ವದಂತಿಯಷ್ಟೆ. ಈ ಅವಧಿಯನ್ನು ಯಡಿಯೂರಪ್ಪ ಅವರು ಪೂರ್ಣಗೊಳಿಸುತ್ತಾರೆ. ಯಾವುದೇ ಗೊಂದಲ ಹಾಗೂ ಅನುಮಾನ ಬೇಡ. ಮಹದಾಯಿ ಯೋಜನೆಗೆ ಹಣ ಮೀಸಲಿರಿಸಲಾಗಿದೆ. ಪರಿಸರ ಇಲಾಖೆ ಅನುಮತಿ ಬೇಕಾಗಿಲ್ಲ ಎಂಬುದನ್ನು ತಿಳಿಸಲಾಗಿದೆ. ಆದರೆ ಅರಣ್ಯ ಇಲಾಖೆ ಅನುಮೋದನೆ ಪಡೆಯಲು ರಾಜ್ಯ ಸರ್ಕಾರ ವಿಸ್ತೃತ ಪ್ರಸ್ತಾವನೆ ಸಲ್ಲಿಸಬೇಕಾಗಿದೆ. ಆದಷ್ಟು ಬೇಗ ಪ್ರಸ್ತಾವನೆ ಸಲ್ಲಿಸಿದರೆ ಒಪ್ಪಿಗೆ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು. ಇಂದಿನ ದಿನಗಳಲ್ಲಿ ಅರಣ್ಯ ಇಲಾಖೆಯಿಂದ ಅನುಮೋದನೆ ದೊರೆಯುವುದು ಅಷ್ಟೊಂದು ಸುಲಭವಲ್ಲ. ಸಿಸಿ ಕಮಿಟಿ ಸುಪ್ರೀಂ ಕೋರ್ಟ್‌ನ ಹಸಿರುಪೀಠದ ಅಡಿಯಲ್ಲಿ ಬರುತ್ತದೆ. ಶೀಘ್ರ ಪ್ರಸ್ತಾವನೆ ಸಲ್ಲಿಸಲು ಆಗ್ರಹಿಸುತ್ತೇನೆ ಎಂದರು.

ಕಾಂಗ್ರೆಸ್‌ಗೆ ಗೊಂದಲ: ಶ್ರೀರಾಮ ಮಂದಿರ ನಿರ್ಮಾಣದ ಕ್ರೆಡಿಟ್‌ ಕುರಿತು ಬಿಜೆಪಿ ಎಂದೂ ಮಾತನಾಡಿಲ್ಲ. ಹಿಂದೆ ರಾಜೀವ ಗಾಂಧಿ ಇದಕ್ಕೆ ಸಹಕಾರ ನೀಡಿದ್ದರು ಎನ್ನುವ ಹೇಳಿಕೆಗಳು ನೋಡಿದರೆ ತಾನು ಎಲ್ಲಿ ನಿಲ್ಲಬೇಕು ಎನ್ನುವ ಗೊಂದಲ ಕಾಂಗ್ರೆಸ್‌ನಲ್ಲಿದೆ. ಶ್ರೀರಾಮ ಮಂದಿರದ ಪ್ರತಿಯೊಂದು ಹೋರಾಟಕ್ಕೂ ಕಾಂಗ್ರೆಸ್‌ ವಿರೋಧ ಮಾಡಿದೆ. ತೀರ್ಪು ನೀಡದಂತೆ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಮಾಡಿದ್ದರು. ಆದರೆ ಇದೀಗ ಶ್ರೀರಾಮನ ಪರವಾಗಿ ನಿಂತರೆ ಅಲ್ಪಸಂಖ್ಯಾತರ ಮತಗಳು ತಪ್ಪಲಿವೆ, ಅಲ್ಪಸಂಖ್ಯಾತರ ಪರವಾಗಿ ನಿಂತರೆ ಬಹುಸಂಖ್ಯಾತ ಹಿಂದೂಗಳಮತಗಳು ಹೋಗಲಿವೆ ಎನ್ನುವ ಭಯ ಶುರುವಾಗಿದೆ. ಅಧಿಕಾರ ಮತ್ತು ಓಟ್‌ ಬ್ಯಾಂಕ್‌ ಕಾಂಗ್ರೆಸ್‌ ಡಿಎನ್‌ ಎದಲ್ಲಿದೆ. ಭವ್ಯ ರಾಮ ಮಂದಿರದ ಒಕ್ಕೊರಲಿನ ಒತ್ತಾಯ ನಮ್ಮದಾಗಿದ್ದು, ಇದೀಗ ಕೈಗೂಡುತ್ತಿದೆ . ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಕಾಶಿ ಹಾಗೂ ಮಥುರಾ ಮಸೀದಿಗಳ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.

ಕೇಂದ್ರ ಗೃಹಸಚಿವ ಅಮಿತ್‌ ಶಾ, ಸಿಎಂ ಯಡಿಯೂರಪ್ಪ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭದ್ರತೆ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next