Advertisement
ಧರ್ಮ ಮತ್ತು ನಂಬಿಕೆ ವಿಚಾರದಲ್ಲಿ ಮನುಷ್ಯ ಯಾವತ್ತೂ ಅನ್ವೇಷಕ ಆಗಿರಬೇಕು. ಆ ಅನ್ವೇಷಣೆ ಮೂಲಕ ಆತ ತನ್ನದೇ ಆದ ಸತ್ಯ ಕಂಡುಕೊಳ್ಳಬೇಕು. ಸತ್ಯದ ಅನ್ವೇಷಣೆಗಾಗಿಯೇ ಭಾರತದಲ್ಲಿ ಕೋಟ್ಯಂತರ ದೇವರನ್ನು ಆರಾಧಿಸಲಾಗುತ್ತದೆ. ನಂಬಿಕೆ ಸಂಘಟಿತ ರೂಪ ಪಡೆದುಕೊಂಡರೆ, ಧರ್ಮವಾಗಿ ಪರಿವರ್ತನೆಗೊಳ್ಳುತ್ತದೆ. ಇದು ಸಂಖ್ಯಾಬಲದ ಪ್ರತಿಷ್ಠೆಯ ಹಂತಕ್ಕೆ ಬಂದಾಗ ರಾಜಕೀಯ ದಾಳವಾಗುತ್ತದೆ ಎಂದರು.
Related Articles
Advertisement
ಒಂದು ಮಗು ಅಥವಾ ಗೋವು ಕಳೆದುಕೊಂಡವನು ಈಗಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ತ್ವರಿತ ನ್ಯಾಯ ಪಡೆದುಕೊಳ್ಳಲು ಸಾಧ್ಯವೇ?. ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಈ ಘಟನೆಗಳು ವಿಮರ್ಶಿಸಬೇಕಾಗಿದೆ. ಹಾಗಂತ ನಾನು ಲಿಂಚಿಂಗ್ ಸಮರ್ಥಿಸುವುದಿಲ್ಲ. ಇವುಗಳನ್ನು ತಡೆಗಟ್ಟಲು ನಮ್ಮಲ್ಲಿನ ಕಾನೂನು ವ್ಯವಸ್ಥೆ ದುರ್ಬಲ ಆಗಿರುವುದೂ ಸಹ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ ಎಂದು ಸದ್ಗುರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಲಿಂಗಕಾಮ ದೈಹಿಕ, ಸಾಮಾಜಿಕ ವಿದ್ಯಮಾನ: ದೇಶಕ್ಕೆ ಸಂವಿಧಾನವೇ ಗ್ರಂಥ. ಸಾರ್ವತ್ರಿಕ ಮತ್ತು ಸಾರ್ವಜನಿಕ ಬದುಕಿನಲ್ಲಿ ಈ ಗ್ರಂಥದ ಪ್ರಕಾರವೇ ನಡೆದುಕೊಳ್ಳಬೇಕು. ಧಾರ್ಮಿಕ ಗ್ರಂಥಗಳನ್ನು ತಮ್ಮ ವೈಯುಕ್ತಿಕ ಪಾಂಡಿತ್ಯ ಹೆಚ್ಚಿಸಿಕೊಳ್ಳಲು, ಆ ಮೂಲಕ ಜೀವನದಲ್ಲಿ ಅಧ್ಯಾತ್ಮಿಕತೆ ಪಡೆದುಕೊಳ್ಳಲು ಮನೆಗಳಲ್ಲೇ ಅಧ್ಯಯನ ಮಾಡಬೇಕು.
ತಾನು ಓದುವ ಧರ್ಮ ಗ್ರಂಥ ಇನ್ನೊಬ್ಬರೂ ಓದಬೇಕು ಅದರಂತೆ ನಡೆದುಕೊಳ್ಳಬೇಕು ಎಂದು ವಾದಿಸುವುದು ಸರಿಯಲ್ಲ. ಸಲಿಂಗಕಾಮ ದೈಹಿಕ ವಿದ್ಯಮಾನ ಹೌದು. ಆದರೆ, ಸಾಮಾಜಿಕ ವಿದ್ಯಮಾನ ಅನ್ನುವುದನ್ನೂ ಅಲ್ಲಗಳೆಯುವಂತಿಲ್ಲ. ಚುನಾವಣೆಗಳು 3 ತಿಂಗಳು ಇರುವರೆಗೆ ಯಾರೂ ಚುನಾವಣೆಗಳ ಬಗ್ಗೆ ಮಾತನಾಡದಂತಹ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸಂವಾದದಲ್ಲಿ ಸದ್ಗುರು ಪ್ರಶ್ನೆಗಳಿಗೆ ಉತ್ತರಿಸಿದರು.
ತನ್ನ ಕುಟುಂಬಕ್ಕಿಂತ ತನ್ನ ರಾಜ್ಯದ ಜನರ ಕ್ಷೇಮ ಮತ್ತು ಕಲ್ಯಾಣ ಮುಖ್ಯ ಎಂದು ತಿಳಿದು ಅದಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ ರಾಜನೊಬ್ಬನ ಉದಾತ್ತ ಮಾದರಿಯನ್ನು ರಾಮನ ಬದುಕಿನಲ್ಲಿ ನಾವು ಕಾಣಬಹುದು. ದೇವರು ಎಂಬ ಕಾರಣಕ್ಕೆ ಅಲ್ಲ, ಮಾನವೀಯತೆಯನ್ನೂ ಮೀರಿದ ಗುಣಗಳಿಗಾಗಿ ರಾಮನನ್ನು ಆರಾಧಿಸಲಾಗುತ್ತದೆ. ಸ್ವಾರ್ಥ ಬಿಟ್ಟು ಜನರ ಕ್ಷೇಮ ಬಯಸುವ ರಾಜಕೀಯ ನಾಯಕರು ಇಂದು ನಮಗೆ ಬೇಕಾಗಿದ್ದಾರೆ.-ಸದ್ಗುರು ಜಗ್ಗಿ ವಾಸುದೇವ