Advertisement
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಜನರ ಪ್ರಾಣ ಮುಖ್ಯ. ಜನರ ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. ಮೂರನೇ ಹಂತ ತಲುಪಿಲ್ಲ: ಕೋವಿಡ್ ಸೋಂಕು ರಾಜ್ಯದಲ್ಲಿ ಮೂರನೇ ಹಂತ ತಲುಪಿಲ್ಲ. ಇನ್ನೂ 2ನೇ ಹಂತದಲ್ಲಿದೆ. ಕಾರಣ ಇದಕ್ಕಾಗಿ 10 ರೀತಿಯ ತಂಡಗಳನ್ನು ರಚಿಸಿಕೊಂಡು ಟೆಸ್ಟ್ ಮಾಡಲಾಗುತ್ತಿದೆ. ಈ ವರದಿಯಲ್ಲಿ ಸಮುದಾಯಕ್ಕೆ ವೈರಸ್ ಹರಡಿಲ್ಲ ಎಂದು ನಮಗೆ ತಿಳಿದು ಬಂದಿದೆ. ಕೆಲವೊಂದು ಕಡೆ ಸೋಂಕು ಹೇಗೆ ಬಂತು ಎಂದು ಪತ್ತೆ ಹಚ್ಚಲಾಗುತ್ತಿದೆ. ಇನ್ನು ಕೆಲವು ಕಡೆ ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ. ಇದಕ್ಕೆ ಜನರು ಸಹಕರಿಸಬೇಕು. ಎ ಸಿಸ್ಟಮ್ಯಾಟಿಕ್ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಅಂತಹ ಸೋಂಕಿತರನ್ನು ಕೆಲವೊಂದು ಶಾದಿಮಹಲ್ ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಅವರನ್ನು ಚೆಕ್ ಮಾಡಿದಾಗ ಪಾಸಿಟಿವ್ ಬಂದರೆ ಕೂಡಲೇ ಚಿಕಿತ್ಸೆ ಕೊಡಲಾಗುತ್ತಿದೆ. ಅಲ್ಲದೇ, ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ವಪಕ್ಷಗಳ ಸಭೆಯನ್ನೂ ನಡೆಸಲಾಗಿದ್ದು, ಹಲವರು ಹಲವು ಸಲಹೆಗಳನ್ನು ನೀಡಿದ್ದಾರೆ ಎಂದರು.
Advertisement
ಜಿಂದಾಲ್ ಕಾರ್ಖಾನೆ ಲಾಕ್‌ಡೌನ್‌ಗೂ ಹಿಂಜರಿಯಲ್ಲ
09:39 AM Jun 28, 2020 | Suhan S |
Advertisement
Udayavani is now on Telegram. Click here to join our channel and stay updated with the latest news.