Advertisement

Karnataka Politics; ಈಗ ಸಿಎಂ ಕನಸು ಕಾಣುತ್ತಿಲ್ಲ,ಆದರೆ 2028ರಲ್ಲಿ….: ಸತೀಶ್‌ ಜಾರಕಿಹೊಳಿ

02:36 PM Sep 08, 2024 | Team Udayavani |

ಬೆಳಗಾವಿ: ಯಾವತ್ತೂ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಹಕ್ಕು ಸ್ಥಾಪನೆ ಮಾಡಿಲ್ಲ. ಈಗಾಗಲೇ ಅನೇಕರು ಸಿಎಂ ಸ್ಥಾನ ಖಾಲಿ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಇದರಲ್ಲಿ ಗುದ್ದಾಟ, ಕುಸ್ತಿ ಮಾಡುವ ಅವಶ್ಯಕತೆಯಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarakiholi) ಹೇಳಿದರು.

Advertisement

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಎಂ.ಬಿ ಪಾಟೀಲ ಶಿವಾನಂದ ಪಾಟೀಲ, ಆರ್ ವಿ ದೇಶಪಾಂಡೆ ಸೇರಿದಂತೆ ಅನೇಕರು ಈಗಾಗಲೇ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದರು.

ಮುಂದಿನ ಸಿಎಂ ಸತೀಶ್ ಜಾರಕಿಹೊಳಿ‌ ಅಭಿಯಾನ ವಿಚಾರಕ್ಕೆ ಉತ್ತರಿಸಿದ ಅವರು, ಯಾರೋ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿದರೆ ಅದು ರಾಜ್ಯದ ಅಭಿಪ್ರಾಯವಾಗದು. ಎಲ್ಲಾ ಕಡೆ ಈ ರೀತಿ ಅಭಿಯಾನ ಆರಂಭವಾಗಿದ್ದಾಗ ನಮ್ಮವರು ಹಾಕಿದ್ದಾರೆ ಎಂದರು.

ರಾಜ್ಯದಲ್ಲಿ ಈಗ ಸಿಎಂ ಬದಲಾವಣೆ ಸನ್ನಿವೇಶವಿಲ್ಲ. ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ ಎನ್ನುವ ನಂಬಿಕೆಯಿದೆ. ಈಗ ನಾನು ಸಿಎಂ ಕನಸು ಕಂಡಿಲ್ಲ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಿದ್ದೇನೆ. ದೆಹಲಿಗೆ ಪದೇಪದೆ ಹೋಗುತ್ತಿರುವದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ದೆಹಲಿಗೆ ಬೇರೆ ಕೆಲಸದ ಮೇಲೆ ಹೋಗಿರುತ್ತೇವೆ ಎಂದು ಜಾರಕಿಹೊಳಿ ಹೇಳಿದರು.

2028ಕ್ಕೆ ಸಿಎಂ ಆಗುವ ತಯಾರಿ ಇದೆ ನಮ್ಮದು. ಅಲ್ಲಿಯವರೆಗೆ ಅಭಿಮಾನಿಗಳು ಕಾಯಬೇಕು ಎಂದು ಸತೀಶ್ ಜಾರಕಿಹೊಳಿ‌ ಮಾರ್ಮಿಕವಾಗಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next