Advertisement

ವಿಪಕ್ಷ ನಾಯಕ ಸ್ಥಾನದ ಬೇಡಿಕೆ ಇಟ್ಟಿಲ್ಲ: ಖರ್ಗೆ

11:19 PM Sep 12, 2020 | mahesh |

ಬೆಂಗಳೂರು: ರಾಜ್ಯಸಭಾ ವಿಪಕ್ಷ ನಾಯಕನ ಸ್ಥಾನಕ್ಕೆ ತಾನು ಬೇಡಿಕೆ ಇಟ್ಟಿಲ್ಲ. ಈ ಬಗ್ಗೆ ಹೈಕಮಾಂಡ್‌ ನಿರ್ಧಾರ ಮಾಡಲಿದೆ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಉಸ್ತುವಾರಿಯಿಂದ ಕೈಬಿಟ್ಟಿರುವುದಕ್ಕೆ ಬೇಸರವಿಲ್ಲ. ಎಲ್ಲವೂ ನನಗೆ ಸಿಗಬೇಕೆಂಬ ಆಸೆ ನನಗಿಲ್ಲ. ನನಗೂ ಒಂದು ಸಿದ್ಧಾಂತವಿದೆ. ನೆಹರೂ, ಅಂಬೇಡ್ಕರ್‌ ಅವರಂಥವರ ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿರುವವನು ಎಂದರು.
ಪಕ್ಷದ ಸಿದ್ಧಾಂತ ಅನುಷ್ಠಾನಕ್ಕೆ ತರಲು ಯಾರೇ ಮುಂದಾದರೂ ನನ್ನ ಒಪ್ಪಿಗೆಯಿದೆ. ನನಗೆ ಸಿಗಲಿಲ್ಲ ಎಂದು ವ್ಯಥೆಪಟ್ಟವನೂ ಅಲ್ಲ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಎಲ್ಲರೂ ಇರಬೇಕು. ಈಗ ಗುಲಾಂ ನಬಿ ಅವರು ರಾಜ್ಯಸಭೆ ವಿಪಕ್ಷ ನಾಯಕರಾಗಿದ್ದಾರೆ. ಅದರ ಬಗ್ಗೆ ಹೈಕಮಾಂಡ್‌ ನಿಲುವು ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಮಹಾರಾಷ್ಟ್ರದ ಜವಾಬ್ದಾರಿ ನಿಭಾಯಿಸುವೆ: ಪಾಟೀಲ್‌
ಬೆಂಗಳೂರು: ಪಕ್ಷದ ಹೈಕಮಾಂಡ್‌ ನೀಡಿರುವ ಮಹಾರಾಷ್ಟ್ರ ಉಸ್ತುವಾರಿ ಜವಾ ಬ್ದಾರಿಯನ್ನು ಎಲ್ಲ ನಾಯಕರ ಸಹಕಾರದೊಂದಿಗೆ ಸಮರ್ಥವಾಗಿ ನಿಭಾಯಿಸುವೆ ಎಂದು ಎಚ್‌.ಕೆ. ಪಾಟೀಲ್‌ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಮಹಾರಾಷ್ಟ್ರ ದೊಡ್ಡ ರಾಜ್ಯ ಹಾಗೂ ರಾಜ ಕೀಯವಾಗಿ ದೇಶದಲ್ಲಿಯೇ ಮಹತ್ವ ಹೊಂದಿದೆ. ಅಲ್ಲಿ ಸಾಕಷ್ಟು ಸವಾಲುಗಳಿವೆ. ತನಗೆ ನೀಡಿದ ಜವಾಬ್ದಾರಿಯನ್ನು ನಿಭಾಯಿಸಿ, ಮಹಾ ರಾಷ್ಟ್ರದಲ್ಲಿ ಕಾಂಗ್ರೆಸ್‌ನ ಗತವೈಭವ ಸ್ಥಾಪಿಸಲು ಪ್ರಯತ್ನಿಸುವುದಾಗಿ ಹೇಳಿದರು. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅಲ್ಲಿ ಉಸ್ತುವಾರಿಯಾಗಿ ದ್ದರು. ಹೀಗಾಗಿ ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಸಂಘಟಿಸುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಡ್ರಗ್ಸ್‌ ಪ್ರಕರಣದಲ್ಲಿ ಅವರು ಜಮೀರ್‌ ಬೆಂಬಲಿಸಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next