ಬೆಂಗಳೂರು:ಕೋವಿಡ್ ಎರಡನೇ ಅಲೆ ನಿಯಂತ್ರಣ ಕ್ಕೆ ಬಂದಿದೆ ಅನ್ನುವ ಸಂದರ್ಭದಲ್ಲಿ ಸೌತ್ ಆಫ್ರಿಕಾ , ಹಾಂಕಾಂಗ್ ದೇಶದಲ್ಲಿ ರೂಪಾಂತರಿ ವೈರಸ್ ಕಂಡು ಬಂದಿದ್ದು, ಯಾವ ರೀತಿ ಪರಿಣಾಮ ಆಗುತ್ತದೆ ಅನ್ನುವುದು ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭಾನುವಾರ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಈ ವೈರಸ್ ಬಹಳ ವೇಗವಾಗಿ ಹರಡುತ್ತದೆ.ಭಾರತದಲ್ಲಿಯೂ ಈ ಬಗ್ಗೆ ಎಚ್ಚರಿಕೆ ವಹಿಸಲಾಗಿದ್ದು, ಪ್ರಧಾನಿ ಮೋದಿಯವರು ಈಗಾಗಲೇ ನಿನ್ನೆ ಸಭೆಯನ್ನ ಮಾಡಿದ್ದಾರೆ ಎಂದರು.
ಕೋವಿಡ್ ಹೆಚ್ಚು ಕಂಡುಬಂದಿರುವ ಧಾರಾವಾಡ, ಬೆಂಗಳೂರು ಹಾಸ್ಟೆಲ್ ಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ ಹಾಸ್ಟಲ್ ಗಳನ್ನ ಕಂಟೋನ್ಮೆಂಟ್ ಜೋನ್ ಆಗಿ ಮಾಡಿದ್ದೆವೆ. ಯಾರು ಯಾರಿಗೆ ಪಾಸಿಟಿವ್ ಬಂದಿದೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಹೊಸವರ್ಷ ಆಚರಣೆಗೆ ವಿಚಾರವಾಗಿ ತೀರ್ಮಾನ ಮಾಡಿಲ್ಲ,ಇದು ಹೇಗೆ ಬೆಳವಣಿಗೆ ಆಗುತ್ತದೆ ಎನ್ನುವುದನ್ನು ನೋಡಿಕೊಂಡು ತಿರ್ಮಾನ ಮಾಡುತ್ತೇವೆ ಎಂದರು.
ನಮ್ಮ ರಾಜ್ಯದಲ್ಲಿ ಲಸಿಕೆ ಕೊರತೆ ಇಲ್ಲ,ನಮ್ಮಲ್ಲಿ 80 ಲಕ್ಷ ಲಸಿಕೆ ಲಭ್ಯ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದರು.