ಅಜಯ್ ರೈಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಅಚ್ಚರಿ ಮೂಡಿಸಿತ್ತು. ಈ ಕುರಿತು ಪ್ರಶ್ನಿಸಿದಾಗ ಅದಕ್ಕೆ ಪ್ರತಿಕ್ರಿಯಿಸಿದ ಪಿತ್ರೋಡಾ, “ಈ ಕುರಿತು ಅಂತಿಮ ನಿರ್ಧಾರವನ್ನು ನೀವೇ ಕೈಗೊಳ್ಳಬೇಕು ಎಂದು ಪಕ್ಷದ ಅಧ್ಯಕ್ಷರು
ಪ್ರಿಯಾಂಕಾರಿಗೆ ಸೂಚಿಸಿದ್ದರು.
Advertisement
ಅದರಂತೆ ಪ್ರಿಯಾಂಕಾ ಸ್ಪರ್ಧಿಸದೇ ಇರಲು ನಿರ್ಧರಿಸಿದರು’ ಎಂದು ಹೇಳಿದ್ದಾರೆ. ಒಂದೇ ಕ್ಷೇತ್ರದ ಕಡೆಗೆ ಗಮನ ಹರಿಸುವ ಬದಲಿಗೆ, ಸದ್ಯಕ್ಕೆ ತಮಗೆ ನೀಡಲಾದ ಜವಾಬ್ದಾರಿಯನ್ನು ನಿಭಾಯಿಸುವುದಕ್ಕೆ ಗಮನ ಕೇಂದ್ರೀಕರಿಸುವುದು ಸೂಕ್ತ ಎಂದು ಮನಗಂಡು ಪ್ರಿಯಾಂಕಾ ಈ ನಿರ್ಧಾರ ಕೈಗೊಂಡರು ಎಂದೂ ಪಿತ್ರೋಡಾ ತಿಳಿಸಿದ್ದಾರೆ.