Advertisement
ಗ್ರಾಮದ ಬಸ್ ನಿಲ್ಧಾಣದ ಬಳಿ ಇರುವ ಈ ಗುರ್ರಮ್ಮನ ಕುಂಟೆಯ ಪ್ರದೇಶವನ್ನು ಕೆಲವರು ಒತ್ತುವರಿ ಮಾಡಿಕೊಂಡು ಗ್ರಾಪಂಯಲ್ಲಿ ಖಾತೆಗಳನ್ನು ಸಹ ಮಾಡಿಕೊಂಡಿದ್ದಾರೆ. ಈ ಬಗ್ಗೆ ತಹಸೀಲ್ದಾರ್, ಎ.ಸಿ ಸೇರಿದಂತೆ ಸಂಭಂಧಿಸಿದ ಎಲ್ಲಾ ಅಧಿಕಾರಿಗಳಿಗೂ ದಾಖಲೆ ಸಮೇತ ದೂರು ನೀಡಿದ್ದು, ನಮ್ಮ ಮನವಿಗೆ ತಕ್ಷಣ ಸ್ಪಂದಿಸಿ ಸರ್ವೇ ಮಾಡಿದ್ದು, ನಮಗೆ ತೃಪ್ತಿ ತಂದಿದೆ ಸರ್ವೇ ಅಧಿಕಾರಿಗಳು ಸದರಿ ಜಮೀನಿನ ಬಗ್ಗೆ ಸಮರ್ಪಕವಾಗಿ ವರದಿ (ರಿಪೋರ್ಟ್) ನೀಡುವ ಭರವಸೆ ಇದೆ ಎಂದು ದಲಿತ ಮುಖಂಡ ಸಂದೇಶ್ ಹೇಳಿದರು.
Related Articles
Advertisement
ಶೀಘ್ರ ಕಟ್ಟಡಗಳ ತೆರವು: ಸರ್ವೇ ವೇಳೆ 26 ಗುಂಟೆಯ ಗುರ್ರಮ್ಮ ಕುಂಟೆ ಒತ್ತುವರಿಯಿಂದ ಕುಂಟೆಯೇ ಮಾಯವಾಗಿ ಈ ಭಾಗದಲ್ಲಿ ಬೃಹತ್ ವಾಣಿಜ್ಯ ಕಟ್ಟಡಗಳು ತಲೆ ಎತ್ತಿವೆ ಸುಮಾರು ವರ್ಷಗಳಿಂದ ಲಕ್ಯಾಂತರ ರೂಗಳ ಬಂಡವಾಳ ಮಾಡಿಕೊಂಡಿದ್ದು, ಶೀಘ್ರದಲ್ಲೇ ಕಟ್ಟಡಗಳ ತೆರವಿಗೆ ನ್ಯಾಯಲಯ ಮೂಲಕ ಆದೇಶ ತರುವುದಾಗಿ ಸಂಧೇಶ್ ತಿಳಿಸಿದರು.26 ಗುಂಟೆ ಜಮೀನು ಸರ್ವೇ ಮಾಡಲು ಈ ಪ್ರದೇಶ ಗ್ರಾಮ ಠಾಣಾ ವ್ಯಾಪ್ತಿಯಲ್ಲಿರುವುದರಿಂದ 3 ಕಡೆ ರಸ್ತೆ ಮತ್ತು ವಾಣಿಜ್ಯ ಕಟ್ಟಡಗಳಿಂದ ಸಮಸ್ಯೆಯಾಗಿದೆ ಸಂಪೂರ್ಣವಾಗಿ ಸರ್ವೇ ಮಾಡಿ ಹದ್ದು, ಬಸ್ತು ನಿರ್ಮಿಸಿಲು ಅಸಾಧ್ಯವಾದ ಹಿನ್ನಲೆ ಮುಂದೂಡಲಾಗಿದೆ. ಹಾಗೂ ಈ ಭಾಗದಲ್ಲಿ ಕೆಲವು 1997 ಮತ್ತು 67ರಲ್ಲಿ ಡೀಸಿ ಕನ್ವರ್ಷನ್ ಆಗಿವೆ ಮತ್ತು ಕೆಲವು ಗ್ರಾಪಂಯಿಂದ ಈ ಖಾತೆಗಳಾಗಿದ್ದು, ಸಂಪೂರ್ಣ ದಾಖಲೆಗಳನ್ನು ಸಂಗ್ರಹಿಸಿ ಸರ್ವೇ ಅಧಿಕಾರಿಗಳಿಂದ ಇಂದಿನ ಸರ್ವೇ ಕಾರ್ಯ ಬಗ್ಗೆ ವರದಿ ಬಂದ ಮೇಲೆ ಮುಂದಿನ ಕ್ರಮದ ಬಗ್ಗೆ ತಿಳಿಸಲಾಗುವುದೆಂದು ಉಪ ತಾಹಸೀಲ್ದಾರ್ ಧಮೇಂದ್ರ ಪ್ರಸಾದ್ ತಿಳಿಸಿದರು. ಸಾಧ್ಯವಾದ ಕಡೆ ಮಾತ್ರ ಸಿಬ್ಭಂದಿಯ ಮೂಲಕ ಸರ್ವೇ ಅಧಿಕಾರಿಯು ಅಳತೆ ಮಾಡಿ 2 ದಿನಗಳೊಳಗೆ ವರದಿ ನೀಡುವುದಾಗಿ ತಿಳಿಸಿದರು. ಈ ಸರ್ವೇ ಕಾರ್ಯದಲ್ಲಿ ಉಪ ತಹಸೀಲ್ದಾರ್ ಧಮೇಂದ್ರ ಪ್ರಸಾದ್, ಕಂದಾಯ ಅಧಿಕಾರಿ ಮುನಿವೆಂಕಟಸ್ವಾಮಿ, ಗ್ರಾಮ ಲೆಕ್ಕಿಗ ಮಹೇಶ್ ರೆಡ್ಡಿ, ಸರ್ವೇ ಅಧಿಕಾರಿ ಮೌಲಾಖಾನ್ ಮತ್ತು ಸಿಬ್ಬಂದಿ ವರ್ಗ, ಪೊಲೀಸ್ ಇಲಾಖೆ ಮತ್ತು ಬೇತಮಂಗಲ ಸಾರ್ವಜನಿಕರು ಉಪಸ್ಥಿತರಿದ್ದರು.