Advertisement

ಆರಂಭಗೊಳ್ಳದ ಬಾದಾಮಿ ಆಸ್ಪತ್ರೆ ಕ್ಯಾಂಟೀನ್‌

05:19 PM Jul 15, 2018 | Team Udayavani |

ಬಾದಾಮಿ: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್‌ ಮಾದರಿಯಲ್ಲಿ ಕಡಿಮೆ ದರದಲ್ಲಿ ಊಟ, ತಿಂಡಿ ಉಣಬಡಿಸುವ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ, ಜನಸಾಮಾನ್ಯರಿಗೆ ಅನುಕೂಲವಾಗುವ ದೃಷ್ಟಿಯಿಂದ ರೂ.40 ಲಕ್ಷ ವೆಚ್ಚದಲ್ಲಿ ಕ್ಯಾಂಟೀನ್‌ ಕಾಂಪ್ಲೆಕ್ಸ್‌ಗೆ ಕಳೆದ ಮಾ.12 ರಂದು ಮಾಜಿ ಸಿಎಂ, ಹಾಲಿ ಶಾಸಕ ಸಿದ್ದರಾಮಯ್ಯ ಚಾಲನೆ ನೀಡಿದ್ದರು.

Advertisement

146 ತಾಲೂಕುಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಕ್ಯಾಂಟೀನ್‌ ಸೇವೆ ಆರಂಭವಾಗಿದ್ದು, ಬಾದಾಮಿ ಸರಕಾರಿ ಆಸ್ಪತ್ರೆಯಲ್ಲಿನ ಕ್ಯಾಂಟೀನ್‌ ಇನ್ನೂ ಆರಂಭವಾಗದ ಕಾರಣ ರೋಗಿಗಳಿಗೆ ಬಹಳ ತೊಂದರೆಯಾಗಿದೆ. ಸರಕಾರಿ ಆಸ್ಪತ್ರೆಗೆ ಬರುವ ಬಡವರು, ಕಾರ್ಮಿಕರಿಗೆ ಮುಖ್ಯವಾಗಿ ರೋಗಿಗಳಿಗೆ ಹಾಗೂ ಅವರು ಜೊತೆಗೆ ಬರುವ ಸಂಬಂಧಿಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದಿಂದ ಕೂಡಿದ ರುಚಿಕರವಾದ ಆಹಾರ ನೀಡುವುದು ಯೋಜನೆಯ ಉದ್ದೇಶವಾಗಿದೆ.

ಒಂದೇ ಸೂರಿನಡಿ ವಿವಿಧ ಆಹಾರ ನೀಡುವ ಉದ್ದೇಶದಿಂದ ಸದ್ಯ, ರಾಜ್ಯ ಸರಕಾರವು ಕ್ಯಾಂಟೀನ್‌ ಕಾಂಪ್ಲೆಕ್ಸ್‌ ಎಂದು ನಾಮಕರಣ ಮಾಡಿ ಕಾಮಗಾರಿಗೆ ಚಾಲನೆ ನೀಡಿದೆ. ಆಯಾ ತಾಲೂಕು, ಜಿಲ್ಲಾ ಆಸ್ಪತ್ರೆಗಳು ಸಂಪೂರ್ಣ ಜವಾಬ್ದಾರಿ ಹೊತ್ತುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಗುತ್ತಿಗೆ ಆಧಾರದಲ್ಲಿ ಮಳಿಗೆ ನಡೆಸಲು ಖಾಸಗಿ ಅವರಿಗೆ ನೀಡಲು ಸರಕಾರ ಉದ್ದೇಶಿಸಿದೆ. ಟೆಂಡರ್‌ ಪ್ರಕ್ರಿಯೆ ಮೂಲಕ ಮಳಿಗೆ ಹಂಚಿಕೆ ಮಾಡಲಿದೆ.

ತಾಲೂಕಾಸ್ಪತ್ರೆಯ ಕ್ಯಾಂಟೀನ್‌ ಕಾಂಪ್ಲೆಕ್ಸ್‌ ಕಟ್ಟಡ ಮುಕ್ತಾಯವಾಗಿದೆ. ಕ್ಯಾಂಟೀನ್‌ ನಡೆಸಲು ಟೆಂಡರ್‌ ಕರೆಯಲು ಡಿಎಚ್‌ಒ ಅವರಿಗೆ ತಿಳಿಸಲಾಗಿದೆ. ಟೆಂಡರ್‌ ಪ್ರಕ್ರಿಯೆ ಮುಗಿದ ನಂತರ ಕ್ಯಾಂಟೀನ್‌ ಸೇವೆ ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದು ತಾಲೂಕಾಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ| .ಎಚ್‌.ರೇವಣಸಿದ್ದಪ್ಪ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next