ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಆರ್ಭಟಿ ಸುತ್ತಿದ್ದರೂ ಜನ ಮಾತ್ರ ಸುತ್ತಾಡುವುದನ್ನು ನಿಲ್ಲಿಸಿಲ್ಲ. ರವಿವಾರ ಬೆಳಗ್ಗೆ ನಗರದ ಮಾರುಕಟ್ಟೆಗೆ ಜನರು ಮತ್ತೆ ಲಗ್ಗೆಯಿಟ್ಟು ಸಾಮಗ್ರಿ ಖರೀದಿಯಲ್ಲಿ ತೊಡಗಿದ್ದರು. ಪೊಲೀಸರ ಭಯಕ್ಕೆ ಕೆಲವರು ಮಾಸ್ಕ್ಗಳನ್ನು ಧರಿಸುತ್ತಿದ್ದು ಕಂಡುಬಂತು.
ಬೆಳಗ್ಗೆ ಜನದಟ್ಟಣೆಯಿದ್ದರೆ, ಮಧ್ಯಾಹ್ನ ನಗರ ಸಂಪೂರ್ಣ ಬಂದ್ ಆಯಿತು. ಜಿಲ್ಲೆಯಲ್ಲಿ ಬೆಳಗ್ಗೆ 6ರಿಂದ 10 ಗಂಟೆವರೆಗೂ ಅಗತ್ಯ ವಸ್ತುಗಳ ಖರೀದಿಗೆ ಸರ್ಕಾರ ಅವಕಾಶ ನೀಡಿದ್ದು, ಇದನ್ನೇ ಒಂದು ಅವಕಾಶವೆಂಬಂತೆ ಜನರು ಅಧಿಕ ಪ್ರಮಾಣದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟು ಗುಂಪು ಗುಂಪಾಗಿ ನಿಂತು ಸಾಮಗ್ರಿ ಖರೀದಿಸುತ್ತಿದ್ದಾರೆ. ಎಲ್ಲಿಯೂ ಸಾಮಾಜಿಕ ಅಂತರ ಎನ್ನುವುದನೇ ಕಾಣುವುದಿಲ್ಲ. ಪೊಲೀಸರು ನೋಡಿಯೂ ಸುಮ್ಮನೆ ಕೈ ಕಟ್ಟಿ ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ. ಏಷ್ಟೇ ಹೇಳಿದರೂ ಜನರು ಪೊಲೀಸರ ಮಾತು ಕೇಳದಂತಹ ಸ್ಥಿತಿ ನಿರ್ಮಾಣವಾಗಿದೆ.
ನಗರದ ಜವಾಹರ ರಸ್ತೆ, ಶಾರದಾ ಚಿತ್ರ ಮಂದಿರದ ರಸ್ತೆ ಹಾಗೂ ಕೋಟೆ ರಸ್ತೆಯು ಜನದಟ್ಟಣೆಯಿಂದ ಕೂಡಿದ್ದವು. ಬೆಳಗ್ಗೆ 6 ಗಂಟೆಯಿಂದಲೇ ಜನ ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಪೊಲೀಸರು ಬಹುಪಾಲು ರಸ್ತೆಗಳಲ್ಲಿ ಸಂಚಾರ ಬಂದ್ ಮಾಡಿದ್ದರೂ ಜನರು ಮತ್ತೂಂದು ರಸ್ತೆಯಲ್ಲಿ ತಮ್ಮ ವಾಹನ ನಿಲ್ಲಿಸಿ ಕಿರಾಣಿ ಅಂಗಡಿಗಳ ಮುಂದೆ ಗುಂಪಾಗಿ ನಿಂತು ಸಾಮಗ್ರಿ ಖರೀದಿಸುವುದು ಸಾಮಾನ್ಯವಾಗಿತ್ತು. ಬೆಳಗ್ಗೆ 10 ಗಂಟೆವರೆಗೂ ಜನದಟ್ಟಣೆಯಿಂದ ಕೂಡಿದ್ದ ಕೊಪ್ಪಳವೂ ಮಧ್ಯಾಹ್ನ 1 ಗಂಟೆ ವೇಳೆಗೆ ಎಲ್ಲವೂ ಬಂದ್ ಆಗಿದ್ದವು. ರಸ್ತೆಗಳೆಲ್ಲವೂ ಬಿಕೋ ಎನ್ನುವಂತಿದ್ದವು.
ಜಾಗೃತರಾಗಿ!: ಜಿಲ್ಲೆಯಲ್ಲಿ ಸೋಂಕಿನ ಆರ್ಭಟವು ಹೆಚ್ಚಾಗುತ್ತಿದೆ. ಈ ಮಧ್ಯೆ ಜನರ ಸಂಚಾರ ಹೆಚ್ಚಾಗಿದೆ. ಇಲ್ಲಿ ಜನರು ಎಚ್ಚರಗೊಳ್ಳದಿದ್ದರೆ ಸೋಂಕು ನಿಯಂತ್ರಣ ಮಾಡುವುದು ಕಷ್ಟಸಾಧ್ಯವಾಗಲಿದೆ ಎಂದು ಸರ್ಕಾರ ಜನರಿಗೆ ಮನವಿ ಮಾಡುತ್ತಿದೆ. ಇಷ್ಟಾದರೂ ಜನರು ಜಾಗೃತರಾಗುತ್ತಿಲ್ಲ. ಜನ ಸ್ವಯಂ ನಿಬಂìಧ ಹಾಕಿಕೊಂಡರೆ ಸೋಂಕು ನಿಯಂತ್ರಣಕ್ಕೆ ಬರಲಿದೆ. ದಯವಿಟ್ಟು ಮನೆಯಿಂದ ಹೊರಗೆ ಬರದಿರುವುದೇ ಉತ್ತಮ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಿಮ್ಮ ಕುಟುಂಬವನ್ನು ನೀವೇ ರಕ್ಷಣೆ ಮಾಡಿಕೊಳ್ಳುವ ಅವಶ್ಯಕತೆ ತುಂಬಾನೇ ಇದೆ. ಇನ್ನಾದರೂ ಜನರು ಎಚ್ಚರಗೊಳ್ಳಬೇಕಿದೆ.