Advertisement
ಸಭೆಯ ಆರಂಭದಲ್ಲಿ ಮೇಯರ್ ಪಾಲಿಕೆಯ ಕೆಲವು ಸಾರ್ವಜನಿಕ ಸೇವೆಗಳನ್ನು ಆನ್‌ಲೈನ್ ಮೂಲಕ ಪಡೆಯುವುದಕ್ಕೆ ಚಾಲನೆ ನೀಡುವ ವಿಷಯವನ್ನು ಪ್ರಸ್ತಾಪಿಸಿದರು. ಆಗ ವಿಪಕ್ಷ ನಾಯಕ ಗಣೇಶ್ ಹೊಸಬೆಟ್ಟು ಮಾತನಾಡಿ, ಮೇಯರ್ 8 ತಿಂಗಳಿನಿಂದ ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಎಂದು ಪ್ರಶ್ನಿಸಿದರು. ಈ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಆರೋಪ- ಪ್ರತ್ಯಾರೋಪಗಳು ಆರಂಭವಾಗಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.
Related Articles
ಬಿಜೆಪಿ ಸದಸ್ಯರು ಮೇಯರ್ ವಿರುದ್ಧ ಧಿಕ್ಕಾರ ಕೂಗುತ್ತಾ ಪೀಠದೆದುರು ತೆರಳಿ, ‘ಮೇಯರ್ ರಾಜೀನಾಮೆ ಕೊಡಿ’ ಎಂದು ಆಗ್ರಹಿಸಿದರು.
Advertisement
ಮತ್ತೆ ಮಾತು ಆರಂಭಿಸಿದ ಎ.ಸಿ.ವಿನಯ್ ರಾಜ್, ಕಾಲೇಜು ಹುಡುಗಿ ಸಾವು ಪ್ರಕರಣ ಸಹಿತ ವಿವಿಧ ಪ್ರಕರಣಗಳಲ್ಲಿ ಬಿಜೆಪಿಯವರು ಯಾಕೆ ಕಾಳಜಿ ತೋರುತ್ತಿಲ್ಲ. ಈ ವಿಚಾರದಲ್ಲಿ ಮಾತ್ರ ಯಾಕೆ ಆಸಕ್ತಿ ಎಂದು ಪ್ರಶ್ನಿಸಿದರು. ಆಗ ಬಿಜೆಪಿ ಸದಸ್ಯ ಮಧು ಕಿರಣ್ ಅವರು ಎ.ಸಿ.ವಿನಯ್‌ರಾಜ್‌ಗೆ ಮಾತನಾಡುವ ನೈತಿಕತೆಯೇ ಇಲ್ಲ ಎನ್ನುತ್ತ, ಅವರ ಬಳಿತೆರಳಿ ಅವರ ಕೈಯಲ್ಲಿದ್ದ ಕಾಗದವನ್ನು ಎಳೆದು ಬಿಸಾಡಿದರು. ಬಿಜೆಪಿಯ ಇತರ ಸದಸ್ಯರೂ ವಿನಯರಾಜ್ ಬಳಿ ಬಂದಾಗ ಮುಖ್ಯ ಸಚೇತಕ ಎಂ.ಶಶಿಧರ ಹೆಗ್ಡೆ ಹಾಗೂ ಮಾಜಿ ಮೇಯರ್ ಹರಿನಾಥ್ ಅವರು ತಡೆಯಲೆತ್ನಿಸಿದಂತೆ ಭಾಸವಾಯಿತು. ಈ ಸಂದರ್ಭ ಕೆಲವು ಕ್ಷಣ ಸದನದಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ನಾಯಕರ ಮಧ್ಯೆ, ನೂಕಾಟ-ತಳ್ಳಾಟ ಸಂಭವಿಸಿತು. ವಿಪಕ್ಷದ ಸದಸ್ಯರು ‘ಡೌನ್ ಡೌನ್ ಮೇಯರ್’ ಎಂದು ಕೂಗುತ್ತಿದ್ದರೆ, ಆಡಳಿತದ ಪಕ್ಷದ
ಸದಸ್ಯರು ‘ಮೇಯರ್‌ಗೆ ಜೈ’ ಎನ್ನುತ್ತಿದ್ದರು. ವಿಪಕ್ಷ ಸದಸ್ಯರು ಮೇಯರ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಕಲಾಪ ಮುಂದುವರಿಸದಂತೆ ಪ್ರಯತ್ನಿಸಿದರು.
ಆದರೆ, ಅಷ್ಟರವರೆಗೆ ಎಲ್ಲವನ್ನು ಮೌನವಾಗಿ ಆಲಿಸುತ್ತಿದ್ದ ಮೇಯರ್ ಆಗ, ಮಧ್ಯ ಪ್ರವೇಶಿಸಿ, ‘ನನಗೆ ಮಾತನಾಡಲು ಅವಕಾಶ ಕೊಡಿ. ನೀವು ಮಾತನಾಡುವುದನ್ನು ಪೂರ್ಣವಾಗಿ ಕೇಳಿದ್ದೇನೆ. ಘಟನೆಯ ಬಗ್ಗೆ ನಾನು ಸ್ಪಷ್ಟೀಕರಣ ನೀಡುತ್ತೇನೆ’ ಎಂದಾಗ ವಿಪಕ್ಷದವರು ಅವಕಾಶ ನೀಡಲಿಲ್ಲ. ಅವಕಾಶ ನೀಡದ್ದಕ್ಕೆ ಬೇಸರ
ಮಾಜಿ ಮೇಯರ್ ಹರಿನಾಥ್ ಮಾತನಾಡಿ, ಇದು ಕೌನ್ಸಿಲ್‌ಗೆ ಸಂಬಂಧ ಪಡದ ವಿಚಾರ. ಹೀಗಾಗಿ, ಸದನದಲ್ಲಿ ಇದನ್ನುಪ್ರಸ್ತಾಪಿಸುವ ಅಗತ್ಯವಿಲ್ಲ. ವಿಪಕ್ಷ ಸದಸ್ಯರು ಅನುಸರಿಸಿದ ನೀತಿ ಸರಿಯಿಲ್ಲ ಎಂದಾಗಲೂ ವಿಪಕ್ಷದವರು ‘ಮೇಯರ್ ರಾಜೀನಾಮೆ ನೀಡಲೇ ಬೇಕು’ ಎಂದು ಆಗ್ರಹಿಸುತ್ತಿದ್ದರು. ಮೇಯರ್ ಮತ್ತೂಮ್ಮೆ, ‘ನಾನು ಮಾತನಾಡುವುದನ್ನು ಕೇಳಿ. ಅನಂತರ ನೀವು ಮಾತನಾಡಿ. ನೀವು ಈ ರೀತಿ ವರ್ತಿಸುವುದು ಶೋಭೆ ಅಲ್ಲ’ ಎಂದರು. ಮಾತನಾಡಲು ಅವಕಾಶ ಸಿಗದಿದ್ದಕ್ಕೆ ಕೋಪಗೊಂಡ ಮೇಯರ್, ‘ತಮ್ಮ ತಪ್ಪನ್ನು ಮುಚ್ಚಿಹಾಕಲು ಈ ರೀತಿ ನೀವು
ನಾಟಕವಾಡುತ್ತಿದ್ದೀರಿ. ಯಾಕೆ ನನಗೆ ಮಾತನಾಡಲು ಬಿಡುವುದಿಲ್ಲ. ತಾವು ಮಾತನಾಡಿದ್ದನ್ನು ನಾನು ಕೇಳಿದ್ದೇನೆ. ಈಗ ನನಗೆ ಮಾತನಾಡಲು ಬಿಡಿ’ ಎಂದರೂ ವಿಪಕ್ಷದ ಸದಸ್ಯರು ಪೂರಕವಾಗಿ ಸ್ಪಂದಿಸಲಿಲ್ಲ. ‘ನಾನು ಅನ್ಯಾಯ ಮಾಡಿದ್ದರೆ ನನಗೆ, ನೀವು ಮಾಡಿದ್ದರೆ ನಿಮಗೆ ಅದರ ಫಲ ತಟ್ಟೀತು’ ಎನ್ನುತ್ತ ಮೇಯರ್ ಸಭೆಯನ್ನು ಸ್ಥಗಿತಗೊಳಿಸಿ ಹೊರ ನಡೆದರು. ಆಣೆ ಮಾಡಲು ಸಿದ್ಧ
ಸುಮಾರು 12 ನಿಮಿಷಗಳ ಬಳಿಕ ಸಭೆ ಆರಂಭವಾದಾಗ ವಿಪಕ್ಷ ಸದಸ್ಯರು ಮತ್ತೆ ಮೇಯರ್ ವಿರುದ್ಧ ಧಿಕ್ಕಾರ
ಮುಂದುವರಿಸಿದರು. ಇದರ ನಡುವೆಯೇ ಮೇಯರ್ ಕವಿತಾ ಸನಿಲ್ ಮಾತನಾಡುತ್ತಾ, ‘ನಾನು ಯಾವ ಹಲ್ಲೆಯನ್ನೂ ಮಾಡಿಲ್ಲ. ನಾನು ಮಾತನಾಡಲು ಯಾಕೆ ಬಿಡುತ್ತಿಲ್ಲ ಹೇಳಿ’ ಎಂದು ಪ್ರಶ್ನಿಸಿ, ನೀವು ದೇವರನ್ನು ನಂಬುತ್ತೀರಾದರೆ, ಕಟೀಲಿನಲ್ಲಿ ಬಂದು ನಾನು ಹಲ್ಲೆ ಮಾಡಿದ್ದೇನೆಂದು ಹೇಳಿ. ಪ್ರಕರಣಕ್ಕೆ ಸಂಬಂಧಿಸಿ ನನ್ನನ್ನು ಮೇಯರ್ ಆಗಿ ನೋಡದೆ ಒಬ್ಬ ತಾಯಿಯ ನೆಲೆಯಲ್ಲಿ ನೋಡಿ. ನಾನೂ ಎರಡು ಮಕ್ಕಳ ತಾಯಿ. ನಾನು ಹಲ್ಲೆ ಮಾಡಿಲ್ಲ ಎಂದು ಕಟೀಲು ದೇವಿ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ. ಆದರೆ ನನ್ನ ಮಗಳ ಪರಿಸ್ಥಿತಿ ಏನಾಗಿದೆ ಎಂದು ನೀವು ತಿಳಿದುಕೊಳ್ಳಿ’ ಎಂದು
ಹೇಳುತ್ತಾ ಕಣ್ಣೀರಿಟ್ಟರು.ಬಿಜೆಪಿ ಸದಸ್ಯರು ಪಟ್ಟುಬಿಡದೆ ಪ್ರತಿಭಟನೆ ಮುಂದುವರಿಸಿದರು. ಗದ್ದಲ ಮುಂದುವರಿಯುವ ಸಂದರ್ಭದಲ್ಲಿಯೇ, ಮುಖ್ಯ ಸಚೇತಕರು ಕಾರ್ಯಸೂಚಿಯನ್ನು ಓದಿ ಒಪ್ಪಿಗೆ
ಪಡೆದುಕೊಳ್ಳುವ ಮೂಲಕ ಸಭೆಯನ್ನು ಕೊನೆಗೊಳಿಸಲಾಯಿತು. ಉಪ ಮೇಯರ್ ರಜನೀಶ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ನಾಗವೇಣಿ, ಸಬಿತಾ ಮಿಸ್ಕಿತ್, ಪ್ರತಿಭಾ ಕುಳಾಯಿ ಹಾಗೂ ಆಯುಕ್ತ ಮಹಮ್ಮದ್ ನಝೀರ್
ಉಪಸ್ಥಿತರಿದ್ದರು. ನಾನು ವಾಚ್‌ಮೆನ್‌ನ ಮಗುವನ್ನು ಅಂದು ನೋಡಲೇ ಇಲ್ಲ. ಇದನ್ನು ಯಾವ ದೇವಸ್ಥಾನದಲ್ಲಿ ಬೇಕಾದರೂ ಹೇಳಲು ಸಿದ್ಧಳಿದ್ದೇನೆ ಎನ್ನುತ್ತಾ ಮೇಯರ್ ಪೀಠದಲ್ಲೇ ಕಣ್ಣೀರಿಟ್ಟರು. ಆಗ ಸ್ಥಾಯೀ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್ ಹಾಗೂ ಸದಸ್ಯೆ ಅಪ್ಪಿ ಅವರು ಸಮಾಧಾನಪಡಿಸಲೆತ್ನಿಸಿದರು.