Advertisement

ನಾನು ಜಾತಿ ಹೆಸರಲ್ಲಿ ಸ್ಥಾನಮಾನ ಪಡೆದವನಲ್ಲ

06:20 AM May 24, 2018 | |

ಬೆಂಗಳೂರು: “ನಾನು ಜಾತಿ ಹೆಸರಿನಲ್ಲಿ ಯಾವತ್ತೂ ಸ್ಥಾನಮಾನ ಪಡೆದಿಲ್ಲ. ಅಲ್ಲದೆ, ನಾನು ವೀರಶೈವ
ಲಿಂಗಾಯತ ಸಮುದಾಯಕ್ಕೆ ಸೇರಿದವನು ಎಂದು ಎಲ್ಲೂ ಹೇಳಿಕೊಂಡಿಲ್ಲ’ ಎಂದು ಕಾಂಗ್ರೆಸ್‌ ಹಿರಿಯ ನಾಯಕ
ಎಚ್‌.ಕೆ.ಪಾಟೀಲ್‌ ಅವರು ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದು ಜಾತಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ. 

Advertisement

ಇದೇ ವೇಳೆ, ಅಖೀಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಅಧ್ಯಕ್ಷ ಉಮೇಶ್‌ ಪಾಟೀಲ್‌ ಕೂಡ
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ಗೆ ಪತ್ರ ಬರೆದು, “ಕೆಪಿಸಿಸಿ ನನ್ನನ್ನು ವೀರಶೈವ ಲಿಂಗಾಯತ ಶಾಸಕರ ಪಟ್ಟಿಯಲ್ಲಿ ಸೇರಿಸಿ ಮುಜುಗರ ಉಂಟು ಮಾಡಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. “ನಾನು ಅರ್ಹತೆ ಆಧಾರದಲ್ಲಿ ಸ್ಥಾನಗಳನ್ನು ಪಡೆದು ಬೆಳೆದಿದ್ದೇನೆಯೇ ಹೊರತು ಜಾತಿ ಬಲ ಬಳಸಿ ಬೆಳೆದವನಲ್ಲ. ನಾನು ರೆಡ್ಡಿ ಸಮುದಾಯ ನಡೆಸಿದ ಸಮಾವೇಶದ ಗೌರವ ಅಧ್ಯಕ್ಷನಾಗಿದ್ದೆ. ಮಹಾ ಯೋಗಿ ವೇಮನ ಭಕ್ತನಾಗಿದ್ದೇನೆ. ಅಲ್ಲದೆ, ಹೇಮರೆಡ್ಡಿ
ಮಲ್ಲಮ್ಮನ ಭಕ್ತನಾದ ನನಗೆ ಜಾತಿಯ ಹೆಸರಿನಿಂದ ಸ್ಥಾನ ಪಡೆಯುವ ಅವಶ್ಯಕತೆಯಿಲ್ಲ ಎಂದು ಎಚ್‌.ಕೆ. ಪಾಟೀಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next