Advertisement

50ರ ವಯಸ್ಸಿನಲ್ಲಿ ಶಾಲೆಗೆ ಸೇರಿಕೊಂಡ ಮಹಿಳೆ : ಕಾರಣ ಇಲ್ಲಿದೆ ನೋಡಿ!

06:14 PM Mar 31, 2021 | Team Udayavani |

ನವದೆಹಲಿ : ಸಾಮಾನ್ಯವಾಗಿ ಚಿಕ್ಕ ಚಿಕ್ಕ ಮಕ್ಕಳು ಶಾಲೆಗೆ ಹೋಗಿ ಪಾಠ ಕಲಿಯುವುದನ್ನು ನೋಡಿದ್ದೇವೆ. ಇನ್ನು ಫೇಲ್ ಆದ ಕೆಲವು ಮಂದಿ ದೊಡ್ಡ ವಯಸ್ಸಿನವರು ಶಾಲೆ ಕಡೆ ಹೋಗುವುದನ್ನೂ ಗಮನಿಸಬಹುದು. ಆದ್ರೆ ಇಲ್ಲೊಬ್ಬ ಮಹಿಳೆ ಬರೋಬ್ಬರಿ 50 ವರ್ಷ ಆದ ಮೇಲೆ ಕಲಿಯಬೇಕೆಂದು ಶಾಲೆಗೆ ಸೇರ್ಪಡೆಯಾಗಿದ್ದಾಳೆ. ಈ ಅರ್ಧ ವಯಸ್ಸಿನಲ್ಲಿ ಶಾಲೆಗೆ ಸೇರಿದ್ದಾದರೂ ಯಾಕೆ ಅಂದ್ರಾ? ಮುಂದೆ ಓದಿ.

Advertisement

50ರ ವಯಸ್ಸಿನಲ್ಲಿ ಶಾಲೆಗೆ ಸೇರಿಕೊಂಡ ಮಹಿಳೆಯ ಹೆಸರು ಅಜಯಿ. ಇವರು ತನಗಿಂತಾ 20-30 ವರ್ಷ ಚಿಕ್ಕ ವಯಸ್ಸಿನ ಮಕ್ಕಳ ಜೊತೆ ಯಾವ ಮುಜುಗರ ಇಲ್ಲದೇ ಕುಳಿತುಕೊಂಡು ಪಾಠ ಕಲಿಯುತ್ತಿದ್ದಾಳೆ. ನೈಜೀರಿಯಾದ ಪಶ್ಚಿಮ ಕ್ವಾರಾ ರಾಜ್ಯದ ಶಾಲೆಯೊಂದರಲ್ಲಿ ಕಲಿಯುತ್ತಿರುವ ಇವರು, ಮಕ್ಕಳಂತೆ ಸಮವಸ್ತ್ರ ಧರಿಸಿ ಶಾಲೆಗೆ ಬರುತ್ತಾರೆ.

ಇವರು ಮೊದಲು ಬ್ಯಾಗ್ ಮತ್ತು ಪರ್ಸ್ ತಯಾರಿ ಮಾಡುತ್ತಿದ್ದು, ಚಿಕ್ಕ ವಯಸ್ಸಿನಲ್ಲಿ ಶಾಲೆಗೆ ಹೋಗಲು ಸಾಧ್ಯವಾಗಿಲ್ಲ. ಈ ಕಾರಣದಿಂದ ತನ್ನ ಮಧ್ಯವಯಸ್ಸಿನಲ್ಲಿ ಶಾಲೆ ಕಲಿಯಬೇಕು ಎಂಬ ಆಸೆ ಹುಟ್ಟಿದ್ದು, ಮಕ್ಕಳ ಜೊತೆ ಪಾಠ ಕಲಿಯುತ್ತಿದ್ದಾರೆ.

ಮತ್ತೊಂದು ವಿಶೇಷ ಅಂದ್ರೆ, ನನಗೆ ಈ ಸಮವಸ್ತ್ರ ಧರಿಸಿ ಶಾಲೆಗೆ ಬರುವುದರಿಂದ ಯಾವುದೇ ಮುಜುಗರ ಅಥವಾ ನಾಚಿಕೆ ಆಗಲ್ಲ ಅಂತಾರೆ ಅಜಯಿ.

ಶಾಲೆಗೆ ಬರುವ 50ರ ಮಹಿಳೆ ಎಲ್ಲಾ ಮಕ್ಕಳ ಜೊತೆ ಕೂಡಿ ಆಟ ಆಡುತ್ತಾಳೆ, ಚರ್ಚೆ ಮಾಡುತ್ತಾಳೆ ಹಾಗೂ ವಯಸ್ಸಿನ ಅಂತರವಿಲ್ಲದೆ ಮಕ್ಕಳ ಜೊತೆ ಬೆರೆಯುತ್ತಾಳಂತೆ. ಶಾಲೆ ಮುಗಿದ ಮೇಲೆ ತನ್ನ ಕೆಲಸವಾದ ಬ್ಯಾಗು ಮಾರಾಟ ಮತ್ತು ತಯಾರಿಕೆಯಲ್ಲಿ ತೊಡಗುತ್ತಾಳಂತೆ.

Advertisement

ಅಜಯಿ ಈ ಬಗ್ಗೆ ಮಾತನಾಡಿದ್ದು, ನನಗೆ ಶಾಲೆ ಕಲಿಯುವ ಅವಶ್ಯಕತೆ ಇದೆ. ನನ್ನ ವ್ಯಾಪಾರಕ್ಕೆ ಇದು ಅನುಕೂಲ ಆಗುತ್ತದೆ. ಅಲ್ಲದೆ ಶಾಲೆ ಕಲಿತಿರುವ ಅನೇಕರು ಯಶಸ್ಸನ್ನು ಕಂಡಿರುವುದನ್ನು ನೋಡಿದ್ದೇನೆ ಎಂದಿದ್ದಾರೆ. ಮತ್ತೊಂದು ಕುತೂಹಲ ಮೂಡಿಸುವ ಅಂಶವನ್ನು ಹೇಳಿರುವ ಅಜಯಿ, ನನ್ನ ವಿದ್ಯಾಭ್ಯಾಸದ ಬಗ್ಗೆ ಯಾರು ಏನೇ ಹೇಳಿದರೂ ನನಗೆ ಬೇಜಾರಿಲ್ಲ. ಇದು ನನ್ನ ಕೆಲಸ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next