Advertisement
ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ತತ್‌ಕ್ಷಣ ಭಾರತೀಯ ತಂಡದ ಸದಸ್ಯರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದ ಮೋದಿ ಅವರು ಇದೀಗ ತಂಡ ತವರಿಗೆ ಬಂದ ಕೂಡಲೇ ತನ್ನ ನಿವಾಸಕ್ಕೆ ಕರೆದರಲ್ಲದà ಎಲ್ಲರೊಂದಿಗೆ ವೈಯಕ್ತಿಕವಾಗಿ ಮಾತನಾಡಿ ಸಂವಾದ ನಡೆಸಿದರು. ಈ ವೇಳೆ ಉಬೆರ್ ಕಪ್‌ನಲ್ಲಿ ಆಡಿದ್ದ ವನಿತಾ ಆಟಗಾರ್ತಿಯರೂ ಇದ್ದರು.
“ದೇಶದ ಪರವಾಗಿ ತಂಡದ ಎಲ್ಲ ಸದಸ್ಯರನ್ನು ನಾನು ಅಭಿನಂದಿಸುತ್ತೇನೆ. ಇದೊಂದು ಸಣ್ಣ ಸಾಧನೆಯಲ್ಲ. ನೀವು ಇದನ್ನು ಸಾಧಿಸಿದ್ದೀರಿ. ಒಂದು ಸಮಯದಲ್ಲಿ ಇಂತಹ ಕೂಟಗಳಲ್ಲಿ ನಾವು ಬಹಳಷ್ಟು ಹಿಂದೆ ಇದ್ದೆವು. ಇದು ಈಗಿನ ಜನರಿಗೆ ಗೊತ್ತಿಲ್ಲ’ ಎಂದು ಮೋದಿ ಹೇಳಿದರು. ವಿಜಯಿ ಆಟಗಾರರೊಂದಿಗೆ ಮೋದಿ ಸಂವಾದ ನಡೆಸಿದರು. ಈ ವೇಳೆ ಬಲಿಷ್ಠ ಇಂಡೋನೇಷ್ಯಾವನ್ನು ಸೋಲಿಸಿ ಥಾಮಸ್ ಕಪ್ ಗೆದ್ದ ಸಾಧನೆಯ ನೆನಪುಗಳನ್ನು ಅವರು ಮೆಲುಕು ಹಾಕಿದರು. ಈ ಸ್ಪರ್ಧೆಯಲ್ಲಿ ದಶಕಗಳ ಬಳಿಕ ನಮ್ಮ ಧ್ವಜವನ್ನು ಹಾರಿಸಲು ಭಾರತಕ್ಕೆ ಸಾಧ್ಯವಾಯಿತು. ಇದೊಂದು ಚಿಕ್ಕ ಸಾಧನೆಯಲ್ಲ ಎಂದವರು ಸ್ಪಷ್ಟಪಡಿಸಿದರು.
Related Articles
Advertisement
ಹೌದು, ನಮ್ಮಿಂದ ಇದು ಸಾಧ್ಯವಿದೆ ಎಂಬ ಮನೋಭಾವವು ಇಂದು ದೇಶದಲ್ಲಿ ಹೊಸ ಶಕ್ತಿಯಾಗಿ ಮೂಡಿಬಂದಿದೆ. ಸರಕಾರವು ನಮ್ಮ ಆಟಗಾರರಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲಿದೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ಮೋದಿ ತಿಳಿಸಿದರು.
ಥಾಮಸ್ ಕಪ್‌ನಲ್ಲಿ, ಅದರಲ್ಲಿಯೂ ಫೈನಲ್ ಹೋರಾಟದಲ್ಲಿ ಭಾರತದ ಸವಾಲಿನ ನೇತೃತ್ವ ವಹಿಸಿ ಜವಾಬ್ದಾರಿಯನ್ನು ತನ್ನ ಹೆಗಲಿಗೆ ಹಾಕಿಕೊಂಡು ಅದ್ಭುತ ನಿರ್ವಹಣೆ ನೀಡಿದ 29ರ ಹರೆಯದ ಹಿರಿಯ ಆಟಗಾರ ಕಿದಂಬಿ ಶ್ರೀಕಾಂತ್ ಅವರನ್ನು ವಿಶೇಷವಾಗಿ ಅಭಿನಂದಿಸಿದರು.
“ಪ್ರಧಾನಿಯವರು ಯಾವಾಗಲೂ ನಮ್ಮ ಆಟಗಾರರು ಮತ್ತು ಕ್ರೀಡೆಯ ಬಗ್ಗೆ ಚಿಂತಿಸುತ್ತಾರೆ ಹಾಗೂ ಅವರ ಅಲೋಚನೆಗಳು ಆಟಗಾರರೊಂದಿಗೆ ಸಂಪರ್ಕ ಹೊಂದಿದೆ ಎಂದು ತಂಡದ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್ ಹೇಳಿದ್ದಾರೆ. ನಾನು ಆಟಗಾರನಾಗಿದ್ದ ಸಂದರ್ಭ ಹಲವು ಪದಕಗಳನ್ನು ಗೆದ್ದಿದ್ದೆ. ಆದರೆ ಒಮ್ಮೆಯೂ ನಮ್ಮ ಪ್ರಧಾನಿಯವರು ನನ್ನನ್ನು ಕರೆಸಿಕೊಂಡಿಲ್ಲ’ ಎಂದು ಡಬಲ್ಸ್ ಆಟಗಾರರ ಕೋಚ್ ಮಥಿಯಾಸ್ ಬೋಯ್ ನೆನಪಿಸಿಕೊಂಡರು.
ಸ್ಟಾರ್ ಶಟ್ಲರ್ ಲಕ್ಷ್ಯ ಸೇನ್ ಸಿಹಿತಿಂಡಿಯ ಪ್ಯಾಕೆಟ್ ಒಂದನ್ನು ಪ್ರಧಾನಿಯವರಿಗೆ ಉಡು ಗೊರೆಯಾಗಿ ನೀಡಿದರು. ನೀವು ನಮ್ಮನ್ನು ಭೇಟಿಯಾದಾಗ ಅಥವಾ ನಮ್ಮೊಂದಿಗೆ ಸಂವಹನ ನಡೆಸಿದಗ ನಾವು ತುಂಬಾ ಪ್ರೇರಿತರಾಗಿದ್ದೇವೆ. ದೇಶಕ್ಕಾಗಿ ನಾವು ಪದಕ ಗೆಲ್ಲಲು ಯಾವಾಗಲೂ ಶಕ್ತಿಮೀರಿ ಪ್ರಯತ್ನಿಸಲಿದ್ದೇವೆ ಎಂದ ಲಕ್ಷ್ಯ ಸೇನ್, ಪ್ರಧಾನಿ ಯವರು ಆಟಗಾರರ ಚಿಕ್ಕ ವಿಷಯಗಳನ್ನು ಕೂಡ ಮರೆಯದೆ ನೆನಪಿಸಿಕೊಳ್ಳುವುದು ಅತ್ಯಂತ ಖುಷಿಯ ವಿಷಯ ಎಂದರು.
ಹಲವು ಶ್ರೇಷ್ಠ ಆಟಗಾರರನ್ನು ಹುಟ್ಟು ಹಾಕುತ್ತಿರುತ್ತಿರುವುದರಿಂದ ಹರ್ಯಾಣದ ಮಣ್ಣಿನಲ್ಲಿ ಏನಿದೆ ವಿಶೇಷ ಎಂದು ಹರ್ಯಾಣ ಮೂಲದ ಶಟ್ಲರ್ ಉನ್ನತಿ ಹೂಡಾ ಅವರಲ್ಲಿ ಮೋದಿ ಪ್ರಶ್ನಿಸಿದರು.
ಇದಕ್ಕೆ ಉನ್ನತಿ ನಕ್ಕರು. “ಸರ್, ನನ್ನನ್ನು ಪ್ರೇರೇಪಿಸುವ ಅಂಶವೆಂದರೆ, ನೀವು ಪದಕ ವಿಜೇತರು ಮತ್ತು ಪದಕ ಗೆಲ್ಲದವರ ನಡುವೆ ಭೇದಭಾವ ಮಾಡದಿರುವುದು…’ ಎಂದರು.
ಮಾತಾಡುವ ಸೌಭಾಗ್ಯ…ವಿಶ್ವದ ಬೇರೆ ಯಾವುದೇ ಆ್ಯತ್ಲೀಟ್‌ಗಳಿಗೆ ಈ ರೀತಿಯ ಪ್ರೋತ್ಸಾಹ, ಬೆಂಬಲ ಸಿಗಲು ಕಷ್ಟ ಸರ್ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಪ್ರಶಸ್ತಿ ಗೆದ್ದ ತತ್‌ಕ್ಷಣ ನಿಮ್ಮೊಂದಿಗೆ ಮಾತನಾಡುವ ಸೌಭಾಗ್ಯ ನಮಗೆ ಸಿಕ್ಕಿದೆ ಮೊದಲು ನಿಮಗೆ ಅಭಿನಂದನೆಗಳು ಸರ್. ಇಷ್ಟು ಮಾತ್ರವಲ್ಲದೇ ನಮ್ಮ ಪ್ರಧಾನಿಯವರ ಬೆಂಬಲ ನಮಗಿದೆ ಎಂದು ಎಲ್ಲ ಆಟಗಾರರು ಹೇಳುತ್ತಿದ್ದಾರೆ ಎಂದು ಶ್ರೀಕಾಂತ್ ಹೇಳಿದರು.